ಸಹ್ಯಾದ್ರಿ ಕಾಲೇಜಿನ ಪರಿಸ್ಥಿತಿ ನೋಡಿದರೆ ತಲ್ಲಣವಾಗುತ್ತದೆ, ಕುವೆಂಪು ವಿವಿ ಮೈಮರೆತು ಕುಳಿತಿದೆ – ಆಯನೂರ್ ಮಂಜುನಾಥ್ ಶಿವಮೊಗ್ಗ : ಸಹ್ಯಾದ್ರಿ ಕಾಲೇಜಿನ ಪರಿಸ್ಥಿತಿ ನೋಡಿದರೆ ತಲ್ಲಣವಾಗುತ್ತದೆ, ಅತಿಥಿ ಉಪನ್ಯಾಸಕರನ್ನು ನೇಮಿಸದೆ ಕುವೆಂಪು ವಿಶ್ವವಿದ್ಯಾಲಯ ಮೈಮರೆತು ಕುಳಿತಿದೆ ಕಾಲೇಜು ಆರಂಭವಾಗಿ ಎರಡು ತಿಂಗಳಾದರೂ ಪಾಠ ನಡೆಯುತ್ತಿಲ್ಲ ಕುವೆಂಪು ವಿವಿ ವಿರುದ್ದ ಹರಿಹಾಯ್ದ ಕೆಪಿಸಿಸಿ ವಕ್ತಾರಾ ಆಯನೂರ್ ಮಂಜುನಾಥ್ ಬುಧವಾರ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರಾ ಆಯನೂರ್ ಮಂಜುನಾಥ್ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ, ಸುಮಾರು 15 -20 ವರ್ಷಗಳಿಂದ ಅವರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ, ಜಿಲ್ಲೆಯಲ್ಲಿ ಖಾಯಂ ಉಪನ್ಯಾಸಕರಿಗಿಂತ ಅತಿಥಿ ಉಪನ್ಯಾಸಕರು ಎರಡು ಪಟ್ಟು ಹೆಚ್ಚಿದ್ದಾರೆ. ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಪ್ರತಿಭಟನೆ ವಿದ್ಯಾರ್ಥಿಗಳ ಕಲಿಕೆಗೆ ಸಾಕಷ್ಟು ತೊಂದರೆಯಾಗುತ್ತದೆ, ಕಾಲೇಜು ಆರಂಭವಾಗಿ ಎರಡು ತಿಂಗಳಾದರೂ ಪಾಠ ನಡೆಯುತ್ತಿಲ್ಲ, ಉಪನ್ಯಾಸಕರನ ನೇಮಿಸಿದೆ ಕುವೆಂಪು ವಿಶ್ವವಿದ್ಯಾಲಯ ಮೈಮರೆತು ಕುಳಿತಿದೆ ಎಂದರು ಅತಿಥಿ ಉಪನ್ಯಾಸಕರು ತುಂಬಾ ಸಂಕಷ್ಟದಲ್ಲಿದ್ದಾರೆ, ಅವರನ್ನು ಎರಡನೆಯ ದರ್ಜೆ ನಾಗರಿಕರನ್ನಾಗಿ...
ಚೀನಾದಲ್ಲಿ ಹೊಸ ಮಾದರಿಯ ಸೋಂಕು ಆರ್ಭಟ ! ಕರ್ನಾಟಕ ಸರ್ಕಾರದಿಂದ ರಾಜ್ಯಾದ್ಯಂತ ಮುನ್ನೆಚ್ಚರಿಕಾ ಕ್ರಮ ! ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ !
ಚೀನಾದಲ್ಲಿ ಹೊಸ ಮಾದರಿಯ ಸೋಂಕು ಆರ್ಭಟ ! ಕರ್ನಾಟಕ ಸರ್ಕಾರದಿಂದ ರಾಜ್ಯಾದ್ಯಂತ ಮುನ್ನೆಚ್ಚರಿಕಾ ಕ್ರಮ ! ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ ! ಬೆಂಗಳೂರು: ಚೀನಾದಲ್ಲಿ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಯ ಸನ್ನದ್ಧತೆಯ ಕ್ರಮಗಳನ್ನು ತಕ್ಷಣವೇ ಪರಿಶೀಲಿಸುವಂತೆ ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದ ನಂತರ ರಾಜ್ಯ ಆರೋಗ್ಯ ಇಲಾಖೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್ ಅವರು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಇದು ಸಾಮಾನ್ಯ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕಡಿಮೆ ತೀವ್ರತೆ ಹೊಂದಿದ. ಇದು ಸಾಮಾನ್ಯವಾಗಿ ಐದರಿಂದ ಏಳು ದಿನಗಳವರೆಗೆ ಇರುತ್ತದೆ. ಆದಾಗ್ಯೂ, ಇದು ಮಕ್ಕಳಿಗೆ, ವೃದ್ಧರಿಗೆ, ಗರ್ಭಿಣಿಯರಿಗೆ, ಇಮ್ಯುನೊಕೊಂಪ್ರೊಮೈಸ್ಡ್ ಮತ್ತು ದೀರ್ಘಕಾಲೀನ ಔಷಧಿಗಳಾದ...
ಬಳಕೆಯಾಗದ ನಿಷ್ಕ್ರಿಯ ಖಾತೆಗಳನ್ನು ಡಿಸೆಂಬರ್ ನಲ್ಲಿ ಅಳಿಸಿ ಹಾಕಲಿದೆ ಗೂಗಲ್ ! ಯಾಕೆ ಈ ನಿರ್ಧಾರ ? ಇಲ್ಲಿದೆ ಪೂರ್ಣ ಮಾಹಿತಿ
ಬಳಕೆಯಾಗದ ನಿಷ್ಕ್ರಿಯ ಖಾತೆಗಳನ್ನು ಡಿಸೆಂಬರ್ ನಲ್ಲಿ ಅಳಿಸಿ ಹಾಕಲಿದೆ ಗೂಗಲ್ ! ಯಾಕೆ ಈ ನಿರ್ಧಾರ ? ಇಲ್ಲಿದೆ ಪೂರ್ಣ ಮಾಹಿತಿ ವಿಶೇಷ ಸುದ್ದಿ : ‘ನಿಷ್ಕ್ರಿಯ’ ಖಾತೆಗಳ ಅಳಿಸುವಿಕೆಯನ್ನು ಒಳಗೊಂಡಿರುವ ಹೊಸ ನೀತಿಯನ್ನು ಡಿಸೆಂಬರ್‌ನಲ್ಲಿ ಜಾರಿಗೆ ತರಲು Google ಸಿದ್ಧವಾಗಿದೆ. ಸಂಭಾವ್ಯ ಡೇಟಾ ನಷ್ಟವನ್ನು ತಡೆಯಲು ಟೆಕ್ ದೈತ್ಯ ಬಳಕೆದಾರರನ್ನು ತಮ್ಮ Google ಖಾತೆಗಳಿಗೆ ತ್ವರಿತವಾಗಿ ಲಾಗ್ ಇನ್ ಮಾಡಲು ಒತ್ತಾಯಿಸುತ್ತಿದೆ ‘ನಿಷ್ಕ್ರಿಯ’ ಖಾತೆಗಳ ಅಳಿಸುವಿಕೆಯನ್ನು ಒಳಗೊಂಡಿರುವ ಹೊಸ ನೀತಿಯನ್ನು ಡಿಸೆಂಬರ್‌ನಲ್ಲಿ ಜಾರಿಗೆ ತರಲು Google ಸಿದ್ಧವಾಗಿದೆ. ಸಂಭಾವ್ಯ ಡೇಟಾ ನಷ್ಟವನ್ನು ತಡೆಯಲು ಟೆಕ್ ದೈತ್ಯ ಬಳಕೆದಾರರನ್ನು ತಮ್ಮ Google ಖಾತೆಗಳಿಗೆ ತ್ವರಿತವಾಗಿ ಲಾಗ್ ಇನ್ ಮಾಡಲು ಒತ್ತಾಯಿಸುತ್ತಿದೆ. ಕನಿಷ್ಠ ಎರಡು ವರ್ಷಗಳವರೆಗೆ ನಿಷ್ಕ್ರಿಯವಾಗಿರುವ Google ಖಾತೆಗಳನ್ನು ಅಳಿಸುವ ನಿರ್ಧಾರವು ತನ್ನ ಬಳಕೆದಾರರಿಗೆ ಭದ್ರತಾ ಕ್ರಮಗಳನ್ನು ಹೆಚ್ಚಿಸುವ Google ನ ಉಪಕ್ರಮದ ಭಾಗವಾಗಿದೆ. Google ಖಾತೆ ಸಹಾಯವು ಈ ನಿಷ್ಕ್ರಿಯ ಖಾತೆ ನೀತಿಯ ನಿರ್ದಿಷ್ಟತೆಯನ್ನು ವಿವರಿಸುತ್ತದೆ, ಬಳಕೆದಾರರು ಕನಿಷ್ಟ ಎರಡು...
ಮೇವು ಬೆಳೆಗಳ ಕುರಿತು ತರಬೇತಿಗಾಗಿ ರೈತರಿಂದ ಅರ್ಜಿ ಆಹ್ವಾನ
ಮೇವು ಬೆಳೆಗಳ ಕುರಿತು ತರಬೇತಿಗಾಗಿ ರೈತರಿಂದ ಅರ್ಜಿ ಆಹ್ವಾನ ಶಿವಮೊಗ್ಗ : ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ , ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಸಹಯೋಗದೊಂದಿಗೆ ಡಿ.6ರಂದು ನಗರದ ವಿನೋಬನಗರದಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಣಿ ಅನುವಂಶೀಯತೆ ಹಾಗೂ ತಳಿ ಶಾಸ್ತ್ರ ವಿಭಾಗದಲ್ಲಿ ರೈತರಿಗೆ ಮೇವು ಬೆಳೆಗಳ ಕುರಿತು ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿ ಕಾರ್ಯಕ್ರಮದಲ್ಲಿ ಮಲೆನಾಡು ಗಿಡ್ಡತಳಿ ಹೊಂದಿರುವ ಸಣ್ಣ ಹಿಡುವಳಿದಾರಿಗೆ ಹುಲ್ಲುಗಾವಲು ನಿರ್ವಹಣೆ, ವಿವಿಧ ಮೇವು ಬೆಳೆಗಳ ಬೇಸಾಯ ಕ್ರಮಗಳು, ಮೇವಿನಿಂದ ಬರುವ ವಿಷಕಾರಕ ಅಂಶಗಳು ಮತ್ತು ಸಾರ್ವಜನಿಕ ಆರೋಗ್ಯ, ಮೇವಿನ ಕೊರತೆಯಿಂದ ಆಗುವ ಸಂತಾನೋತ್ಪತ್ತಿ ಸಮಸ್ಯೆಗಳು ಈ ಕುರಿತು ತರಬೇತಿ ಹಾಗೂ ಮೇವು ಬೆಳೆಗಳ ತಾಕುಗಳಿಗೆ ಬೇಟಿಯನ್ನು ಮಾಡಿಸಲಾಗುವುದು. ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ತಮ್ಮ ಹೆಸರನ್ನು ಡಾ. ಪ್ರಶಾಂತ್, ಬಾಗಲಕೋಟೆ, 8861533578 ಮತ್ತು ಡಾ. ಹರೀಶ್ ಎಂ.-8073717760 ಮೊಬೈಲ್ ನಂ.ಗಳಿಗೆ ಎಸ್.ಎಂ.ಎಸ್., ವಾಟ್ಸಪ್ ಮೂಲಕ ಅಥವಾ ರಾ.ಕೃ. ವಿಕಾಸ ಯೋಜನಾ ಸಂಯೋಜಕರು,...
ತೆರೆದ ವಾಹನದಲ್ಲಿ ನೂತನ ರಾಜ್ಯಾಧ್ಯಕ್ಷರ ಮೆರವಣಿಗೆ | ಬಿಎಸ್ ವೈ, ಕೆ ಎಸ್ ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಸಾಥ್,
ತೆರೆದ ವಾಹನದಲ್ಲಿ ನೂತನ ರಾಜ್ಯಾಧ್ಯಕ್ಷರ ಮೆರವಣಿಗೆ | ಬಿಎಸ್ ವೈ, ಕೆ ಎಸ್ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಸಾಥ್, ಶಿವಮೊಗ್ಗ : ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಬಿ ವೈ ವಿಜಯೇಂದ್ರ ಶಿವಮೊಗ್ಗಕ್ಕೆ ಆಗಮಿಸಿದ್ದು, ಅದ್ದೂರಿ ಸ್ವಾಗತವನ್ನು ಕೋರಲಾಗಿದೆ. ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತೂರಿನ ಆರ್ ಎಸ್ ಎಸ್ ಪ್ರಮುಖರಾದ ಪಟ್ಟಾಭಿರಾಮ್ ಮತ್ತು ಬಿಜೆಪಿ ಮುಖಂಡರಾದ ಭಾನುಪ್ರಕಾಶ್, ಕೆ ಎಸ್ ಈಶ್ವರಪ್ಪ ಮನೆಗೆ ಭೇಟಿ ನೀಡಿ ಈಶ್ವರಪ್ಪನವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು, ಬೆಕ್ಕಿನ ಕಲ್ಮಠಕ್ಕೆ ತೆರಳಿ ಮಠದಿಂದ ಸನ್ಮಾನ ಕಾರ್ಯಕ್ರಮ ಸ್ವೀಕರಿಸಿದ್ದಾರೆ. ನಂತರ ಬೆಕ್ಕಿನ ಕಲ್ಮಠದಿಂದ ಬೃಹತ್ ಬೈಕ್ ರ‍್ಯಾಲಿ ಮುಖಾಂತರ ತೆರೆದ ವಾಹನದಲ್ಲಿ ಪೆಸಿಟ್ ಕಾಲೇಜಿನವರೆಗೂ ಮೆರವಣಿಗೆ ನಡೆಸಲಾಯಿತು. ಮಾರ್ಗ ಮಧ್ಯೆ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರವರಿಗೆ ಬೃಹತ್ ಸೇಬಿನ ಹಾರ ಹಾಕಲಾಯಿತು ಈ ವೇಳೆ ತಂದೆ ಬಿ. ಎಸ್ ಯಡಿಯೂರಪ್ಪ, ಕೆ ಎಸ್ ಈಶ್ವರಪ್ಪ, ಬಿ ವೈ ರಾಘವೇಂದ್ರ ಸೇರಿದಂತೆ...
ಕನ್ನಡಪರ ಹೋರಾಟಗಾರರ ಸಾಂಸ್ಕತಿಕ ನೆಲದಲ್ಲಿ ಅಸಭ್ಯ ನೃತ್ಯ… ಮಲೆನಾಡಿನ ಅನಂದಪುರದಲ್ಲಿ ನಂಗನಾಚ್ ನೃತ್ಯ!
ಕನ್ನಡಪರ ಹೋರಾಟಗಾರರ ಸಾಂಸ್ಕತಿಕ ನೆಲದಲ್ಲಿ ಅಸಭ್ಯ ನೃತ್ಯ… ಮಲೆನಾಡಿನ ಅನಂದಪುರದಲ್ಲಿ ನಂಗನಾಚ್ ನೃತ್ಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ ಮಾಡಿ ಅಪ್ರಾಪ್ತ ಬಾಲಕನನ್ನು ಬಳಸಿಕೊಂಡು ಅಶ್ಲೀಲ ಭಂಗಿಗಳಲ್ಲಿ ಯುವತಿ ಕುಣಿದಿದ್ದಾಳೆ. ಆನಂದಪುರದ ಕನ್ನಡ ರಕ್ಷಣಾ ವೇದಿಕೆ ಅಪ್ಪುಸೇನೆ ಹೇಸರಿನ ಸಂಘಟನೆಯೊಂದರ ಕಾರ್ಯಕ್ರಮ ಇದಾಗಿದ್ದು. ಈ ಬಗ್ಗೆ ಪೊಲೀಸ್ ಇಲಾಖೆಗೆ ಯಾವ ಕ್ರಮ ತೆಗೆದುಕೊಳ್ಳುತ್ತದೇಯೋ ಕಾದು ನೋಡಬೇಕಾಗಿದೆ ಸೋಮಶೇಖರ್ ಲ್ಯಾವಗಿರಿ ಮಕ್ಕಳನ್ನು ಅಶ್ಲೀಲತೆಗೆ ಸಂಬಂಧಿಸಿದ ಯಾವುದೆ ವಿಚಾರದಲ್ಲಿಯು ಬಳಸಿಕೊಳ್ಳುವುದು ಅಪರಾಧವಾಗುತ್ತದೆ. ಪೋಕ್ಸೋ ಕಾಯಿದೆಯಡಿಯಲ್ಲಿ ಇಂತಹ ಕೃತ್ಯಗಳು ಶಿಕ್ಷಾರ್ಹ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಪ್ರಾಪ್ತನನ್ನು ಯುವತಿ ಅಸಭ್ಯ ಕುಣಿತಕ್ಕಾಗಿ ಬಳಸಿಕೊಂಡಿರುವುದು ಕಾಣುತ್ತಿದೆ. ಈ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆಯು ಸಹ ಗಮನಹರಿಸಬೇಕಿದೆ.ಎಂದ ಚೇತನರಾಜ್ ಕಣ್ಣೂರು. ಪತ್ರಿಕಾ ಹೇಳಿಕೆಯಲ್ಲಿ ಖಲಿಮುಲ್ಲಾ ಅಧ್ಯಕ್ಷರು ಗ್ರಾಮ ಪಂಚಾಯತ್ ಅಚಾಪುರ. ಅಬ್ದುಲ್ ರಜಾಕ್ . . ಚೌಡಪ್ಪ ವರದಮೂಲ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಹೊಸೂರು.ಉಮೇಶ್ ಎನ್.ಅಬ್ದುಲ್ ರಜಾಕ್....
ಸಿಡಿಲು ಬಡಿದು ಸಹೋದರರಿಬ್ಬರೂ ಸಾವು !
ಸಿಡಿಲು ಬಡಿದು ಸಹೋದರರಿಬ್ಬರೂ ಸಾವು ! ಭದ್ರಾವತಿ : ಜಮೀನಿನಲ್ಲಿ ಕಟಾವು ಆಗಿದ್ದ ಭತ್ತದ ರಾಶಿಯನ್ನು ರಕ್ಷಿಸಲು ಹೋದ ಸಹೋದರರಿಬ್ಬರೂ ಸಿಡಿಲು ಬಡಿದು ಸಾವನ್ನಪ್ಪಿರುವ ಧಾರುಣ ಘಟನೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ. ನಿನ್ನೆ ಮಂಗಳವಾರ ರಾತ್ರಿ ಭಾರಿ ಮಳೆ ಆಗುತ್ತಿದ್ದ ಕಾರಣ ಜಮೀನಿನಲ್ಲಿ ಕಟಾವು ಮಾಡಲಾಗಿದ್ದ ಭತ್ತದ ರಾಶಿಯನ್ನು ಮಳೆಯಿಂದ ರಕ್ಷಿಸಲು ಹೋಗಿದ್ದ ಗೌಳಿಗರ ಕ್ಯಾಂಪ್ ನ ನಿವಾಸಿಗಳಾದ ಸುರೇಶ್ (35) ಮತ್ತು ಬೀರು (32) ಮೃತ ದುರ್ದೈವಿಗಳಾಗಿದ್ದಾರೆ. ಭತ್ತದ ರಾಶಿಯನ್ನು ರಕ್ಷಿಸಲು ಹೋಗಿದ್ದ ಸಂದರ್ಭದಲ್ಲಿ ಸಹೋದರರಿಬ್ಬರೂ ಸಿಡಿಲು ಬಡಿದು ಸಾವನಪ್ಪಿದ್ದಾರೆ. ಹೊರಗೆ ಹೋಗಿದ್ದ ಮಕ್ಕಳು ಬಹಳ ಹೊತ್ತಾದರೂ ಮನೆಗೆ ಬಾರದ ಕಾರಣ ಕುಟುಂಬದವರು ಹುಡುಕಾಟ ನಡೆಸಿದ್ದಾರೆ, ಜಮೀನಿನಲ್ಲಿ ಬಂದು ನೋಡಿದಾಗ, ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹಗಳನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ವರದಿ : ಲಿಂಗರಾಜ್ ಗಾಡಿಕೊಪ್ಪ
ರಂಗೇರುತ್ತಿದೆ ಶಿವಮೊಗ್ಗ ರಾಜಕಾರಣ ! ಬಿಜೆಪಿ ರಾಜ್ಯಾಧ್ಯಕ್ಷರ ಬೇಟಿಗೂ ಮುನ್ನ ಶಿಕಾರಿಪುರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ! ಕುತೂಹಲ ಮೂಡಿಸಿದ ಸಚಿವರ ಭೇಟಿ !
ರಂಗೇರುತ್ತಿದೆ ಶಿವಮೊಗ್ಗ ರಾಜಕಾರಣ ! ಬಿಜೆಪಿ ರಾಜ್ಯಾಧ್ಯಕ್ಷರ ಬೇಟಿಗೂ ಮುನ್ನ ಶಿಕಾರಿಪುರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ! ಕುತೂಹಲ ಮೂಡಿಸಿದ ಸಚಿವರ ಭೇಟಿ ! ಶಿವಮೊಗ್ಗ : ಲೋಕಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಶಿವಮೊಗ್ಗ ರಾಜಕಾರಣ ರಂಗೇರುತ್ತಿದೆ. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ಕೆಲವು ತಿಂಗಳುಗಳು ಬಾಕಿ ಇದೆ ಅಷ್ಟೇ, ಚುನಾವಣೆ ಸಮೀಪಿಸುತ್ತಿದ್ದಂತೆ ಶಿವಮೊಗ್ಗಕ್ಕೆ ರಾಜ್ಯ ನಾಯಕರ ದಂಡು ಹರಿದು ಬರುತ್ತಿದೆ. ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಇಂದು ಶಿವಮೊಗ್ಗಕ್ಕೆ ಮತ್ತು ನಾಳೆ ಶಿಕಾರಿಪುರಕ್ಕೆ ಭೇಟಿ ನೀಡಲಿದ್ದಾರೆ, ನಾಳೆ ಶಿಕಾರಿಪುರದ ಬಿ ವೈ ವಿಜಯೇಂದ್ರರ ಬಹಿರಂಗ ಸಮಾವೇಶಕ್ಕೂ ಮೊದಲು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇಂದು ಶಿಕಾರಿಪುರಕ್ಕೆ ಭೇಟಿ ನೀಡಲಿದ್ದಾರೆ. ದಿನಾಂಕ 26 ಮತ್ತು 27ನೆಯ ತಾರೀಖು ಶಿವಮೊಗ್ಗದಲ್ಲಿ ಇದ್ದಂತಹ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬರ ನಿರ್ವಹಣೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದರು, ಈ ವೇಳೆ ಜಿಲ್ಲೆಯ 7 ತಾಲೂಕುಗಳಲ್ಲಿ 5...
ಬಿರುಬಿಸಿಲಿನಿಂದ ಕೆಂಗೆಟ್ಟಿದ್ದ ಶಿವಮೊಗ್ಗದ ಜನತೆಗೆ ತಂಪೆರದ ಮಳೆರಾಯ ! ಶಿವಮೊಗ್ಗ ,ಶಿಕಾರಿಪುರ, ಭದ್ರಾವತಿ, ಸೊರಬ ಸೇರಿದಂತೆ ವಿವಿಧಡೆ ಭಾರಿ ಮಳೆ !
ಬಿರುಬಿಸಿಲಿನಿಂದ ಕೆಂಗೆಟ್ಟಿದ್ದ ಶಿವಮೊಗ್ಗದ ಜನತೆಗೆ ತಂಪೆರದ ಮಳೆರಾಯ ! ಶಿವಮೊಗ್ಗ ,ಶಿಕಾರಿಪುರ, ಭದ್ರಾವತಿ, ಸೊರಬ ಸೇರಿದಂತೆ ವಿವಿಧಡೆ ಭಾರಿ ಮಳೆ ! ಶಿವಮೊಗ್ಗ : ಬಿರುಬಿಸಿಲಿನಿಂದ ಕೆಂಗೆಟ್ಟಿದ್ದ ಶಿವಮೊಗ್ಗದ ಜನತೆಗೆ ಮಳೆರಾಯ ತಂಪೆರದಿದ್ದಾನೆ, ಶಿವಮೊಗ್ಗ ನಗರದಲ್ಲಿ ಸಂಜೆ 7ರಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದಿದ್ದು, ರಾತ್ರಿ 9ರ ಸುಮಾರಿಗೆ ಜೋರು ಮಳೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಭದ್ರಾವತಿ, ಸೊರಬ ಸೇರಿದಂತೆ ವಿವಿಧಡೆ ಭಾರಿ ಜೋರು ಮಳೆ ಸುರಿದಿದೆ. ಶಿವಮೊಗ್ಗದ ಆಯನೂರ್, ಕುಂಸಿ, ಮಲವಗೊಪ್ಪ, ಹಾರೋಬೆನ್ನವಳ್ಳಿ , ಭದ್ರಾವತಿಯ ವಿವಿದೆಡೆ ಮಳೆ ವರದಿಯಾಗಿದೆ. ವರದಿ : ಲಿಂಗರಾಜ್ ಗಾಡಿಕೊಪ್ಪ
ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳ: ಪುಸ್ತಕ ಮೇಳ, ಕರಕುಶಲ ಮೇಳ, ಖಾದಿ ಮೇಳ, ಆಹಾರ ಮೇಳ ಇತರೆ ಮಳಿಗೆಗಳ ನೋಂದಣಿ ಆರಂಭ
ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳ: ಪುಸ್ತಕ ಮೇಳ, ಕರಕುಶಲ ಮೇಳ, ಖಾದಿ ಮೇಳ, ಆಹಾರ ಮೇಳ ಇತರೆ ಮಳಿಗೆಗಳ ನೋಂದಣಿ ಆರಂಭ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ ) ಸಂಸ್ಥೆಯು ಮೂರನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ರಾಯಚೂರು ಜಿಲ್ಲೆಯ ಲಿಂಗಸಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ 2023 ರ ಡಿಸೆಂಬರ್ 29,30 ರಂದು ನಡೆಸಲು ತೀರ್ಮಾನಿಸಲಾಗಿದ್ದು, ಡಾ. ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ರಾಜ್ಯದ ಹಲವು ಕಡೆಗಳಿಂದ ಸಾವಿರಾರು ಜನ ಬರುವ ನಿರೀಕ್ಷೆ ಇದೆ. ಈ ಸಮ್ಮೇಳನದಲ್ಲಿ ಪುಸ್ತಕ ಮೇಳ, ಖಾದಿ ಮೇಳ, ಆಹಾರ ಮೇಳ, ಕರಕುಶಲ ಮೇಳ, ಇತರೆ ಮಳಿಗೆಗಳನ್ನು ತೆರೆಯಲು ಪರಿಷತ್ತು ಅನುವು ಮಾಡಿಕೊಡುತ್ತಿದ್ದೂ ಮಳಿಗೆ ತೆರೆಯಲು ಆಸಕ್ತ ಇರುವವರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹುಲಗಪ್ಪ ಸಿ ಮುದಗಲ್ 8123636340 ಅವರನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು. 2 ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಮಳಿಗೆ ತೆರೆಯಲು...