ಮನೆ ಮನಗಳಲ್ಲಿಯೂ ಧಾರ್ಮಿಕ ಜಾಗೃತಿ – ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಶಿವಮೊಗ್ಗ: ಮನೆ ಮನಗಳಲ್ಲಿಯೂ ಧಾರ್ಮಿಕ ಚಿಂತನೆ ಜಾಗೃತಿಗೊಳಿಸುವ ಆಶಯದಿಂದ ಚಿಂತನ ಕಾರ್ತಿಕ ಹಮ್ಮಿಕೊಳ್ಳುತ್ತಿದ್ದು, ಮುಂದಿನ ಯುವಪೀಳಿಗೆಯಲ್ಲಿ ಧರ್ಮದ ಮಹ್ವತ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಬಸವ ಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು. ಶಿವಮೊಗ್ಗ ನಗರದ ಕೃಷಿ ನಗರದಲ್ಲಿರುವ ರೋಟರಿ ಜಿ.ವಿಜಯ್‌ಕುಮಾರ್ ಅವರ ಬಸವೇಶ್ವರ ನಿಲಯದಲ್ಲಿ ಬಸವಕೇಂದ್ರದ ವತಿಯಿಂದ ಆಯೋಜಿಸಿದ್ದ “ಚಿಂತನ ಕಾರ್ತಿಕ” ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಚಿಂತನಾ ಕಾರ್ತಿಕ...