ರಿಪ್ಪನ್‌ಪೇಟೆ: ಶಿವಮೊಗ್ಗ ರಸ್ತೆಯ ಶಿವಮಂದಿರದ ಬಳಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೋಟೆತಾರಿಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಮಂಜಯ್ಯ ಟಿ (59) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಮಂಜಯ್ಯ ಟಿ ಅವರು ಮೂಲತಃ ಹರಮಘಟ್ಟದವರಾಗಿದ್ದು, ಅರಸಾಳುವಿನಲ್ಲಿ ವಾಸವಾಗಿದ್ದರು. ಕೊಟೇತಾರಿಗ ಶಾಲೆಯಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ಘಟನೆ ನಡೆದಿದ್ದು ಹೀಗೆ: ಕರ್ತವ್ಯ ಮುಗಿಸಿ ತಮ್ಮ ಟಿವಿಎಸ್ ಸ್ಟಾರ್ ಸಿಟಿ ಬೈಕ್ (KA14Z6775) ನಲ್ಲಿ ಅರಸಾಳು ಕಡೆಗೆ ತೆರಳುತ್ತಿದ್ದ ಮಂಜಯ್ಯ ಅವರಿಗೆ...