ಶಿವಮೊಗ್ಗ : ಶಿವಮೊಗ್ಗಕ್ಕೂ (shivamogga) ಝೀಕಾ ವೈರಸ್ ಕಾಲಿಟ್ಟಿದೆ. ಜಿಲ್ಲೆಯ ಮೂವರಿಗೆ ಝೀಕಾ ವೈರಸ್ ದೃಢಪಟ್ಟಿದೆ. ಇವರಲ್ಲಿ ಒಬ್ಬರು ಸಾವನ್ನಪ್ಪಿದ್ದರೇ, ಮತ್ತಿಬ್ಬರು ಗುಣಮುಖರಾಗಿದ್ದಾರೆ. ಈ ಕುರಿತಂತೆ ನೆನ್ನೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಶಿವಮೊಗ್ಗದ 73 ವರ್ಷದ ವ್ಯಕ್ತಿಯನ್ನು ಜೂನ್ 24ರಂದು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಿಗೂ ಝೀಕಾ ವೈರಸ್ ದೃಢಪಟ್ಟಿತ್ತು. ಆದರೇ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದಾರೆ. ಇನ್ನೂ ಜೂನ್.24ರಂದು ಪರೀಕ್ಷೆಗೆ ಒಳಗಾದಂತ 24 ವರ್ಷದ ವ್ಯಕ್ತಿಗೂ ಝೀಕಾ ದೃಢಪಟ್ಟಿದೆ. ಅವರು ಗುಣಮುಖರಾಗಿದ್ದಾರೆ. ಜುಲೈ.24ರಂದು ಪರೀಕ್ಷೆಗೆ...