ಶಿವಮೊಗ್ಗ: ನಗರದ ರಾಗಿಗುಡ್ಡದಲ್ಲಿರುವ ಬಂಗಾರಪ್ಪನವರ ಬಡಾವಣೆಯಲ್ಲಿ ಗಣಪತಿ ಮತ್ತು ನಾಗ ದೇವತೆಗಳ ವಿಗ್ರಹಗಳನ್ನ ಹಾನಿ ಮಾಡಿದ ಘಟನೆಯು ಅತ್ಯಂತ ಶೋಚನೀಯ ಸಂಗತಿ ಎಂದು ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಹಲವು ಆಗ್ರಹಗಳನ್ನು ಮುಂದಿಟ್ಟರು. “ದೇವರ ಮೂರ್ತಿಯನ್ನು ಕಾಲಿನಿಂದ ಒದಿಯುತ್ತಾನೆ ಎಂದರೆ ಹೇಗೆ? ಇಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಕೂಡಲೇ ಸಿಸಿಟಿವಿ ಕ್ಯಾಮೆರಾಗಳನ್ನು...