ದಾವಣಗೆರೆ/ಶಿವಮೊಗ್ಗ: ರಾಜ್ಯದಲ್ಲಿ ಖೋಟಾ ನೋಟು ಜಾಲವೊಂದು ಸಕ್ರಿಯವಾಗಿರುವುದನ್ನು ದಾವಣಗೆರೆ ಪೊಲೀಸರು ಬಯಲಿಗೆಳೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಸಮೀಪದಲ್ಲೇ ಈ ದೊಡ್ಡ ಜಾಲ ಪತ್ತೆಯಾಗಿರುವುದು ನಮ್ಮ ಜಿಲ್ಲೆಯ ಜನರಿಗೂ ಆತಂಕವನ್ನುಂಟು ಮಾಡಿದೆ. ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…? ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಕುಬೇರಪ್ಪ, ಸಂತೋಷ್ ಕುಮಾರ್, ವಿರೇಶ್ ಮತ್ತು ಹನುಮಂತಪ್ಪ ಎಂಬುವವರನ್ನು ದಾವಣಗೆರೆಯ ಚಿರಡೋಣಿ ಗ್ರಾಮದಲ್ಲಿನ ಬಾರ್...