ಶಿವಮೊಗ್ಗ; ನಗರದ ಗಾಂಧಿಬಜಾರ್‌ನಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಷಾಢ ಶುಕ್ರವಾರದಂದು ಅದ್ದೂರಿಯಾಗಿ ಲಲಿತಾ ಸಹಸ್ರನಾಮ ಪೂಜೆ ನೆರವೇರಿಸಲಾಯಿತು. ಶಿವಮೊಗ್ಗ ವಾಸವಿ ಮಹಿಳಾ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವದ ಪ್ರಯುಕ್ತ ಈ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು?? ಈ ಪೂಜೆಯ ಪ್ರಮುಖ ಆಕರ್ಷಣೆಯೆಂದರೆ, ದೇವಿಗೆ ಒಟ್ಟು 1008 ಸೀರೆಗಳನ್ನು ಅರ್ಪಿಸಿ ಅಲಂಕರಿಸಲಾಗಿತ್ತು! ಶಿವಮೊಗ್ಗ ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಪ್ರತಿಭಾ ಅರುಣ್...