ವಿದ್ಯಾರ್ಥಿನಿಯ ಮೊಬೈಲ್ ಕಸಿದುಕೊಂಡು ಹೋದ ಅಪರಿಚಿತ ! ಯುವತಿಯರಿಗೆ,ಮಹಿಳೆಯರಿಗೆ ಅಶ್ಲೀಲ ಮೆಸೇಜ್ ! ಕುಂಸಿ ಠಾಣೆಯಲ್ಲಿ ಕೇಸ್ ! ಏನಿದು ಪ್ರಕರಣ ? ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಗ್ರಾಮವೊಂದರ ಕಾಲೇಜು ವಿದ್ಯಾರ್ಥಿನಿ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ಮೊಬೈಲ್ ಕಸಿದುಕೊಂಡು ಹೋಗಿದ್ದ ಅಪರಿಚಿತನೊಬ್ಬ ಮೊಬೈಲ್ ನಲ್ಲಿದ್ದ ನಂಬರ್ ಗಳಿಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಘಟನೆ ಕುಂಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಡಿಸೆಂಬರ್ 29 ರಂದು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ. ನಂತರ ಮೊಬೈಲ್ ನಲ್ಲಿದ್ದ...