ಡಿಸೆಂಬರ್ 20ರಂದು ” ಅಮೃತ ಬಿಂದು ” ಎದೆಹಾಲಿನ ಬ್ಯಾಂಕ್ ಉದ್ಘಾಟನೆ ! ಮಧ್ಯಕರ್ನಾಟಕದಲ್ಲೇ ಮೊಟ್ಟ ಮೊದಲ ತಾಯಂದಿರ ಎದೆಹಾಲು ಬ್ಯಾಂಕ್ ಆರಂಭ ! ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಧ್ಯಕರ್ನಾಟಕದ ಮೊದಲ ತಾಯಂದಿರ ಎದೆಹಾಲು ಬ್ಯಾಂಕ್ ಆರಂಭವಾಗುತ್ತಿದೆ. ರೋಟರಿ ಕ್ಲಬ್ ಶಿವಮೊಗ್ಗ ಹಾಗೂ ಸರ್ಜಿ ಆಸ್ಪತ್ರೆಗಳ ಸಹಯೊಗದೊಂದಿಗೆ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಡಿಸೆಂಬರ್ 20ರಂದು ಅಮೃತ ಬಿಂದು ಹೆಸರಿನಲ್ಲಿ ತಾಯಂದಿರ ಎದೆಹಾಲಿನ ಬ್ಯಾಂಕ್ ಉದ್ಘಾಟನೆಯಾಗಲಿದೆ. ಕೋಡಿಮಠದ ದಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಎದೆಹಾಲಿನ...