ಆನಂದಪುರ: ಮೊಹರಂ ಹಬ್ಬವು ಇಂದಿಗೂ ಜನಸಮುದಾಯದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ, ಆಚರಣೆ, ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸಿಕೊಂಡಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ತಾಲ್ಲೂಕಿನ ಆನಂದಪುರದ ಭೋವಿ ಕಾಲೋನಿ ಹಾಗೂ ಇಸ್ಲಾಂಪುರದಲ್ಲಿ ಶನಿವಾರ ನಡೆದ ಮೊಹರಂ ಹಬ್ಬದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೊಹರಂ ಆಚರಣೆಯು ಹಿಂದೂ-ಮುಸ್ಲಿಮರ ಬಾಂಧವ್ಯ ಮತ್ತು ಸಹೋದರತ್ವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ. ಪರಧರ್ಮ ಸಹಿಷ್ಣುತೆಯ ಭಾವನೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಮೊಹರಂ ಪ್ರಮುಖ ಕಾರಣವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು. ಚೋರರಿಗೊಂದು ಕಾಲ ಹಾಡಿಗೆ ಶಾಸಕರ...