ಸಾಗರ: ಸಾಗರ ನಗರದಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ವರದಿಯಾಗಿದೆ. ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯನ್ನು ಅಡ್ಡಗಟ್ಟಿದ ಮೂವರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಜುಲೈ 7ರ ಮಧ್ಯಾಹ್ನ 12 ಗಂಟೆಗೆ, ಸೊರಬದ ಕಾನಕೇರಿ ನಿವಾಸಿಯಾದ 19 ವರ್ಷದ ಯುವತಿಯೊಬ್ಬರು, ಸಾಗರದ ಶಾಹಿ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ತೆರಳಲು ತಮ್ಮ ಪರಿಚಯದ ಸ್ಪಂದನ್ ಎಂಬ ಯುವಕನೊಂದಿಗೆ ಸಾಗರದ ಯಡವರಸೆ ರೈಲ್ವೆ ಗೇಟ್ ಬಳಿ ಬೈಕಿನಲ್ಲಿ ಸಾಗುತ್ತಿದ್ದರು. ಈ ವೇಳೆ, ಆರು ಅಪರಿಚಿತರು...