ಮಕ್ಕಳಲ್ಲಿನ ಕ್ರೀಯಾತ್ಮಕ ಕಲ್ಪನೆ ಸಾಕಾರಗೊಳಿಸುವ ಐಡಿಯಾಥಾನ್ ಶಿವಮೊಗ್ಗ: ಇಂದಿನ ಮಕ್ಕಳು ಹಾಗೂ ಯುವಜನರಿಂದ ಭವಿಷ್ಯದ ಕ್ರೀಯಾತ್ಮಕ ಜಗತ್ತು ಸೃಷ್ಟಿ ಮಾಡಲು ಸಾಧ್ಯವಿದ್ದು, ಯುವಜನತೆ ಕಲ್ಪನೆಯ ಕನಸುಗಳನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು. ಶಿವಮೊಗ್ಗ ನಗರ ಸಮೀಪವಿರುವ ಜಾವಳ್ಳಿಯ ಓಪನ್ ಮೈಂಡ್ ವರ್ಲ್ಡ್ ಸ್ಕೂಲ್‌ನಲ್ಲಿ ಡಯಟ್ ಶಿವಮೊಗ್ಗ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಮತ್ತು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಐಡಿಯಾಥಾನ್...