Home » shikaripura » Page 3

Tag: shikaripura

Post
ದಕ್ಷಿಣ ಕನ್ನಡ, ಉಡುಪಿ ಸೇರಿ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಭಾರಿ ಮಳೆ ನಿರೀಕ್ಷೆ

ದಕ್ಷಿಣ ಕನ್ನಡ, ಉಡುಪಿ ಸೇರಿ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಭಾರಿ ಮಳೆ ನಿರೀಕ್ಷೆ

ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಜೂನ್‌ 26, 2025ರವರೆಗೆ ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಿಸಿದೆ. ಜೂನ್‌ 22ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದ್ದು, ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ.   ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶ ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಗಾಳಿಯೊಂದಿಗೆ...

Post
ಮಾವು ಬೆಳೆಗಾರರಿಗೆ ಗುಡ್‌ ನ್ಯೂಸ್‌: ರಾಜ್ಯ-ಕೇಂದ್ರ ಸರ್ಕಾರಗಳ ಮಧ್ಯಪ್ರವೇಶ, ಕೆಜಿಗೆ ತಲಾ 2 ರೂ. ನೆರವು

ಮಾವು ಬೆಳೆಗಾರರಿಗೆ ಗುಡ್‌ ನ್ಯೂಸ್‌: ರಾಜ್ಯ-ಕೇಂದ್ರ ಸರ್ಕಾರಗಳ ಮಧ್ಯಪ್ರವೇಶ, ಕೆಜಿಗೆ ತಲಾ 2 ರೂ. ನೆರವು

ಬೆಂಗಳೂರು: ಮಾವು ಬೆಲೆ ಕುಸಿತದಿಂದ ತೊಂದರೆಗೊಳಗಾಗಿದ್ದ ರಾಜ್ಯದ ಮಾವು ಬೆಳೆಗಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ! ರಾಜ್ಯ ಸರ್ಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಪ್ರತಿ ಕೆ.ಜಿ.ಗೆ ತಲಾ 2 ರೂ.ಗಳಂತೆ ಒಟ್ಟು 4 ರೂ. ನೆರವು ನೀಡಲು ಒಪ್ಪಿಗೆ ನೀಡಿದೆ.   ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ವಿಡಿಯೋ ಸಂವಾದದ ಮೂಲಕ ಮಾವು ಬೆಳೆಗಾರರ ಕಷ್ಟದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ....

Post
ಆನಂದಪುರ ಪೊಲೀಸರಿಂದ ವಿದ್ಯಾರ್ಥಿನಿಯರಿಗೆ ಕಾನೂನು ಅರಿವು ಕಾರ್ಯಕ್ರಮ

ಆನಂದಪುರ ಪೊಲೀಸರಿಂದ ವಿದ್ಯಾರ್ಥಿನಿಯರಿಗೆ ಕಾನೂನು ಅರಿವು ಕಾರ್ಯಕ್ರಮ

ಆನಂದಪುರ: ಕೇವಲ ಶಿಕ್ಷಣ ಮಾತ್ರವಲ್ಲ, ಕಾನೂನಿನ ಬಗ್ಗೆಯೂ ವಿದ್ಯಾರ್ಥಿಗಳಿಗೆ ಅರಿವಿರಬೇಕು ಎಂದು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ತಿಳಿಸಿದ್ದಾರೆ. ಇಂದು ಸಮೀಪದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನು ಅರಿತು ಜೀವನ ರೂಪಿಸಿಕೊಳ್ಳಿ:“ವಿದ್ಯಾರ್ಥಿನಿಯರು ಕಾನೂನನ್ನು ಅರಿತು, ಗೌರವಿಸುತ್ತಾ ಜೀವನವನ್ನು ರೂಪಿಸಿಕೊಳ್ಳಬೇಕು. ಕಾನೂನಿನ ತಿಳುವಳಿಕೆ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಕಾನೂನನ್ನು ಗೌರವಿಸುವುದು ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕ” ಎಂದು ಪ್ರವೀಣ್ ಸರ್ ಸಲಹೆ ನೀಡಿದರು....

Post
ಜಯಗಣೇಶ್ IAS: ಬಡತನ, 6 ವೈಫಲ್ಯಗಳ ನಡುವೆಯೂ ಹೋಟೆಲ್ ವೇಟರ್‌ನಿಂದ ಟಾಪರ್ ಆದ ಸ್ಫೂರ್ತಿದಾಯಕ ಪಯಣ!

ಜಯಗಣೇಶ್ IAS: ಬಡತನ, 6 ವೈಫಲ್ಯಗಳ ನಡುವೆಯೂ ಹೋಟೆಲ್ ವೇಟರ್‌ನಿಂದ ಟಾಪರ್ ಆದ ಸ್ಫೂರ್ತಿದಾಯಕ ಪಯಣ!

ಕೆಲವರಿಗೆ ತಮ್ಮ ಗುರಿಯ ಬಗ್ಗೆ ಅಚಲವಾದ ಹಠವಿರುತ್ತದೆ. ಎಷ್ಟೇ ಕಷ್ಟ ಬಂದರೂ “ಬಿಟ್ಟುಕೊಡಬೇಡ” ಎಂಬ ಅಚಲ ಉತ್ಸಾಹವಿರುತ್ತದೆ. ಇಂತಹ ದೃಢ ಸಂಕಲ್ಪಕ್ಕೆ K. ಜಯಗಣೇಶ್ ಅತ್ಯುತ್ತಮ ಉದಾಹರಣೆ. ಲಕ್ಷಾಂತರ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಅವರು ನೆಚ್ಚಿನ ಐಎಎಸ್ ಸ್ಪೂರ್ತಿದಾತರಾಗಿದ್ದಾರೆ. ಅವರ ಸವಾಲುಗಳು ಮತ್ತು ವಿಜಯಗಳ ಸಂಪೂರ್ಣ ವಿವರ ಇಲ್ಲಿದೆ.  ನಮ್ಮ ದೇಶದಲ್ಲಿ ನಾಗರಿಕ ಸೇವಾ ಹುದ್ದೆಗಳು ದೂರದಿಂದ ಅತ್ಯಂತ ಪ್ರತಿಷ್ಠಿತ ಮತ್ತು ಆಕರ್ಷಕವಾಗಿ ಕಾಣಿಸಬಹುದು. ಈ ಹುದ್ದೆಗಳಲ್ಲಿರುವವರನ್ನು ನೋಡಿ ಹೆಮ್ಮೆ ಪಡಬಹುದು, ನಾನೂ ಆ ಸ್ಥಾನಕ್ಕೆ ಹೋಗಬೇಕು ಎಂದುಕೊಳ್ಳಬಹುದು....

Post
ಮಹಂತೇಶ್ ಕುಮಾರ್ ಜಿ.ಟಿ ಅವರಿಗೆ “ಸ್ಕೋಲೋಪಿಯಾ ಕ್ರೆನಾಟಾ (ಡಬ್ಲ್ಯೂ & ಎ) ಕ್ಲೋಸ್ ನ ಔಷಧೀಯ ಗುಣಲಕ್ಷಣಗಳ ಫೈಟೊಕೆಮಿಕಲ್ ವಿಶ್ಲೇಷಣೆ ಮತ್ತು ಮೌಲ್ಯಮಾಪನ.” ಸಂಶೋಧನೆಗಾಗಿ ಪಿಎಚ್.ಡಿ ಪದವಿ ಪ್ರದಾನ.

ಮಹಂತೇಶ್ ಕುಮಾರ್ ಜಿ.ಟಿ ಅವರಿಗೆ “ಸ್ಕೋಲೋಪಿಯಾ ಕ್ರೆನಾಟಾ (ಡಬ್ಲ್ಯೂ & ಎ) ಕ್ಲೋಸ್ ನ ಔಷಧೀಯ ಗುಣಲಕ್ಷಣಗಳ ಫೈಟೊಕೆಮಿಕಲ್ ವಿಶ್ಲೇಷಣೆ ಮತ್ತು ಮೌಲ್ಯಮಾಪನ.” ಸಂಶೋಧನೆಗಾಗಿ ಪಿಎಚ್.ಡಿ ಪದವಿ ಪ್ರದಾನ.

ಶಿವಮೊಗ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಗಾದ್ರಿ ಡಿ.ತಿಪ್ಪೇಸ್ವಾಮಿ ಅವರ ಮಗ ಮಹಂತೇಶ್ ಕುಮಾರ್ ಜಿ.ಟಿ. ಅವರಿಗೆ ಶಿವಮೊಗ್ಗದ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಯನ್ನು ನೀಡಿ ಗೌರವಿಸಿದೆ. ಬಯೋಮೆಡಿಕಲ್ ವಿಜ್ಞಾನ ಕ್ಷೇತ್ರಕ್ಕೆ ಅವರ ಗಮನಾರ್ಹ ಕೊಡುಗೆಯನ್ನು ಈ ಗೌರವದ ಮೂಲಕ ಗುರುತಿಸಲಾಗಿದೆ. ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ರಮೇಶ್ ಅವರ ಮಾರ್ಗದರ್ಶನದಲ್ಲಿ ಮಹಂತೇಶ್ ಕುಮಾರ್ ಅವರು...

Post
ಹುಲಿಕಲ್ ಘಾಟ್ ನಲ್ಲಿ 2 ಲಾರಿಗಳ ನಡುವೆ ಮುಖಾ-ಮುಖಿ ಡಿಕ್ಕಿ ! ಬೆಳಗ್ಗೆ 5 ಗಂಟೆಯಿಂದ ಸಂಚಾರ ಬಂದ್ ! ಸಾಲುಗಟ್ಟಿ ನಿಂತ ವಾಹನಗಳು !

ಹುಲಿಕಲ್ ಘಾಟ್ ನಲ್ಲಿ 2 ಲಾರಿಗಳ ನಡುವೆ ಮುಖಾ-ಮುಖಿ ಡಿಕ್ಕಿ ! ಬೆಳಗ್ಗೆ 5 ಗಂಟೆಯಿಂದ ಸಂಚಾರ ಬಂದ್ ! ಸಾಲುಗಟ್ಟಿ ನಿಂತ ವಾಹನಗಳು !

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ಬಳಿ ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿ ರಸ್ತೆ ಮಧ್ಯೆ ಲಾರಿಗಳು ನಿಂತ ಪರಿಣಾಮ ಹುಲಿಕಲ್ ಮಾರ್ಗದ ರಸ್ತೆ ಸಂಚಾರ ಬಂದ್ ಆದ ಘಟನೆ ಇಂದು ಬೆಳಿಗ್ಗಿನ ಜಾವ ಸಂಭವಿಸಿದೆ. ಬೆಳಿಗ್ಗೆ 5 ಗಂಟೆಗೆ ಅಪಘಾತ ಸಂಭವಿಸಿದ್ದು, ಎರಡು ಕಡೆಯೂ ವಾಹನಗಳು ಸಾಲುಗಟ್ಟಿ ನಿಂತಿವೆ.ಹುಲಿಕಲ್ ಚೆಕ್ ಪೋಸ್ಟ್ ಸಮೀಪ ಈ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ಮುಕ್ತಗೊಳಿಸಲು ಹರಸಾಹಸ ಪಡುವಂತಾಗಿದೆ. ನಗರ ಠಾಣಾ...

Post
ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದ ಕಾರು: 6 ಜನರಿಗೆ ಗಂಭೀರ ಗಾಯ

ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದ ಕಾರು: 6 ಜನರಿಗೆ ಗಂಭೀರ ಗಾಯ

ಶಿವಮೊಗ್ಗ : ಚಾಲಕನ ನಿಯಂತ್ರಣತಪ್ಪಿದ ಕಾರೊಂದು ಸೇತುವೆ ಮೇಲಿಂದ ಕೆಳಗೆ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಅಗರದಹಳ್ಳಿ ಬಳಿ ನಡೆದಿದೆ. ಕುಟುಂಬವೊಂದು ಕಾರಿನಲ್ಲಿ ಕೊಲ್ಲೂರು, ಸಿಗಂದೂರು, ಜೋಗ ಪ್ರವಾಸ ಮುಗಿಸಿ ಚಿತ್ರದುರ್ಗಕ್ಕೆ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣತಪ್ಪಿದ ಕಾರು ಸೇತುವೆಯಿಂದ ಕೆಳಗೆ ಬಿದ್ದಿದೆ. ಘಟನೆಯಲ್ಲಿ ಮಕ್ಕಳು ಸೇರಿ 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಬೆಳಗಿನ ಜಾವ 2:30ರ ಸುಮಾರಿಗೆ...

Post
BREAKING NEWS  : ಬೆಳ್ಳಂ ಬೆಳಗ್ಗೆ ಶಿವಮೊಗ್ಗ ಸೆಂಟ್ರಲ್ ಜೈಲ್ ಮೇಲೆ ಪೊಲೀಸರ ರೈಡ್ !

BREAKING NEWS : ಬೆಳ್ಳಂ ಬೆಳಗ್ಗೆ ಶಿವಮೊಗ್ಗ ಸೆಂಟ್ರಲ್ ಜೈಲ್ ಮೇಲೆ ಪೊಲೀಸರ ರೈಡ್ !

ಶಿವಮೊಗ್ಗ : ಶಿವಮೊಗ್ಗದ ಸೋಗಾನೆಯಲ್ಲಿರುವ ಸೆಂಟ್ರಲ್ ಜೈಲ್ ಮೇಲೆ ಪೊಲೀಸರು ದಾಳಿ ಮಾಡಿ ತಪಾಸಣೆ ನಡೆಸಿರುವ ಘಟನೆ ಇಂದು ಬೆಳ್ಳಂ ಬೆಳಗ್ಗೆ ನಡೆದಿದೆ. ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ನ ರಾಜಾತೀಥ್ಯ ದ ಫೋಟೋ ವೈರಲ್ ಆದ ಬೆನ್ನಲ್ಲೇ, ಒಂಬತ್ತು ಜೈಲು ಅಧಿಕಾರಿಗಳು ಸಸ್ಪೆಂಡ್ ಆಗಿದ್ದರು, ಈ ಸಂಬಂಧ ರೇಣುಕಾ ಸ್ವಾಮಿ ಕೊಲೆ ಆರೋಪಿಗಳಾದ ಡಿ ಗ್ಯಾಂಗ್ ನ ಸಹಚರರನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ, ಡಿ ಗ್ಯಾಂಗ್ ನ ಇಬ್ಬರು ಆರೋಪಿಗಳು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸುವ...

Post
ಶಿವಮೊಗ್ಗ ಮಹಾನಗರಪಾಲಿಕೆ ಚುನಾವಣೆಗೆ ಸಿದ್ಧತೆ ಆರಂಭ ! ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು !

ಶಿವಮೊಗ್ಗ ಮಹಾನಗರಪಾಲಿಕೆ ಚುನಾವಣೆಗೆ ಸಿದ್ಧತೆ ಆರಂಭ ! ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು !

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ವಾರ್ಡ್ ವಾರು ಮತದಾರರ ಪಟ್ಟಿ ಸಿದ್ಧಪಡಿಸಲು ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ. ಹೀಗಾಗಿ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳ ಮತದಾರರು, ಪಟ್ಟಿ ಸಿದ್ಧತೆ, ಮತಗಟ್ಟೆಗಳ ಸಂಖ್ಯೆ ಹೆಚ್ಚಳ ಮತ್ತಿತರ ವಿಷಯಗಳ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಶುಕ್ರವಾರ ಮತದಾರರ ಪಟ್ಟಿ ತಯಾರಿಕೆ ಸಂಬಂಧ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಸದ್ಯ...

Post
ರಾತ್ರಿ ವೇಳೆ ಮಹಿಳೆಯರಿಗೆ ಮನೆಗೆ ತೆರಳಲು ಉಚಿತ ಪ್ರಯಾಣ ಯೋಜನೆ ! ಪೊಲೀಸರ ಹೆಸರಲ್ಲಿ ಸುಳ್ಳು ಸುದ್ದಿ ! ಪೊಲೀಸ್ ಇಲಾಖೆ ಸ್ಪಷ್ಟನೆ !

ರಾತ್ರಿ ವೇಳೆ ಮಹಿಳೆಯರಿಗೆ ಮನೆಗೆ ತೆರಳಲು ಉಚಿತ ಪ್ರಯಾಣ ಯೋಜನೆ ! ಪೊಲೀಸರ ಹೆಸರಲ್ಲಿ ಸುಳ್ಳು ಸುದ್ದಿ ! ಪೊಲೀಸ್ ಇಲಾಖೆ ಸ್ಪಷ್ಟನೆ !

ಕಿಡಿಗೇಡಿಗಳು ಪೊಲೀಸರ ಹೆಸರಲ್ಲಿ ರಾಜ್ಯದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದು, ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಪೊಲೀಸ್ ಹೆಲ್ಪ್‌ಲೈನ್ ಹೆಸರಿನಲ್ಲಿ ಸುಳ್ಳು ನಂಬರ್ ಉಲ್ಲೇಖಿಸಿ ಎಸ್‌ಎಂಎಸ್‌ನ್ನು ಕಿಡಿಗೇಡಿಗಳು ಎಲ್ಲೆಡೆ ವೈರಲ್ ಮಾಡುತ್ತಿದ್ದು, ಎಚ್ಚರದಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ. ಏನಿದು ವೈರಲ್‌ ಮೆಸೇಜ್‌? ಪೊಲೀಸರು ಹೊಸದೊಂದು ಟ್ರಾವೆಲ್‌ ಸ್ಕೀಂ ಪ್ರಾರಂಭಿಸಿದ್ದು, ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಾರೆ ಅಂತಾ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದರು. ಜೊತೆಗೆ ಒಂಟಿ...