ನವದೆಹಲಿ : ಎಸ್‌ಸಿ, ಎಸ್‌ಟಿ ಒಳಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಸರಕಾರಗಳಿಗಿವೆ ಎಂಬ ಸುಪ್ರೀಂ ಕೋರ್ಟ್‌ನ ಇತ್ತೀಚೆಗಿನ ತೀರ್ಪನ್ನು ಖಂಡಿಸಿ ರಿಸರ್ವೇಶನ್ ಬಚಾವೋ ಸಂಘರ್ಷ್ ಸಮಿತಿ ಕರೆ ನೀಡಿರುವ ಭಾರತ್ ಬಂದ್ ಬುಧವಾರ ನಡೆಯಲಿದೆ. ರಾಜಸ್ಥಾನ, ಉತ್ತರಪ್ರದೇಶ ಸೇರಿ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬಂದ್‌ಗೆ ಹೆಚ್ಚು ಬೆಂಬಲ ವ್ಯಕ್ತವಾಗುವ ಸಾಧ್ಯತೆಯಿರುವ ಕಾರಣ ಭದ್ರತೆ ಹೆಚ್ಚಿಸಲಾಗಿದೆ.ಉದ್ಯಮ ಸಂಸ್ಥೆಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ನೀಡಬೇಕು ಎಂದು ಆದಿವಾಸಿ, ದಲಿತ ಸಂಘಟನೆಗಳು ಕರೆ...
Tag: ShimogaStories
ಸ್ಪಾ ಹೆಸರಲ್ಲಿ ಸೆಕ್ಸ್ ದಂಧೆ ! ವಿನೋಬನಗರದಲ್ಲಿ ಸ್ಪಾ ಮೇಲೆ ಪೊಲೀಸ್ ರೈಡ್ ! ಇಬ್ಬರು ಸಂತ್ರಸ್ತೆಯರ ರಕ್ಷಣೆ !
ಶಿವಮೊಗ್ಗ : ಸ್ಪಾ ಮತ್ತು ಬಾಡಿ ಮಸಜಾ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತಿದ್ದ ಸ್ಪಾ ಮೇಲೆ ಶಿವಮೊಗ್ಗ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವೀರಣ್ಣ ಲೇ ಔಟ್ ಮೂರನೇ ತಿರುವಿನಲ್ಲಿರುವ ಲೈರಾ ಮೇಕ್ ಓವರ್ ಸ್ಟುಡಿಯೋ ಸಲೂನ್ ಅಂಡ್ ಸ್ಪಾ ದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಸಂತ್ರಸ್ತೆಯರನ್ನು ರಕ್ಷಣೆ ಮಾಡಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ. ಕೆ ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾ...
ಸಿದ್ದರಾಮಯ್ಯನವರ ಕಾಲು ತೊಳೆದು ನೀರು ಕುಡಿಯುತ್ತೇನೆ ! ಹೀಗೆ ಅಂದಿದೇಕೆ ಬಿಜೆಪಿ ಎಂ.ಎಲ್.ಎ ಚನ್ನಬಸಪ್ಪ ?
ಶಿವಮೊಗ್ಗ : ಮುಡಾ ಹಗರಣದ ತನಿಖೆ ಚುರುಕು ಪಡೆಯುತ್ತಿದ್ದಂತೆ ವಿಪಕ್ಷಗಳ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಎಸ್‌ಎನ್ ಚನ್ನಬಸಪ್ಪ ವಾಗ್ದಾಳಿ ಮಾಡಿದ್ದು, ‘ನೀವು ಕಳಂಕಿತ ಮುಖ್ಯಮಂತ್ರಿ, ಐವಾನ್ ಅಲ್ಲ ಹೈವಾನ್’ ಎಂದು ಹರಿಹಾಯ್ದಿದ್ದಾರೆ. ಅಲ್ಲದೆ ಸಿದ್ದರಾಮಯ್ಯರವರದ್ದು ತಪ್ಪಿಲ್ಲವಾದರೇ ತನಿಖೆ ಎದುರಿಸಿ ಬರಲಿ ನಾವೇ ಅವರ ಪಾದವನ್ನು ತೊಳೆಯುತ್ತೇವೆ ಎಂದು ಸವಾಲ್ ಹಾಕಿದ್ದಾರೆ. ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸಂವಿಧಾನವನ್ನ ಬುಡಮೇಲು ಮಾಡುವ ಕೆಲಸಕ್ಕೆ ಕೈ ಹಾಕಿದೆ’ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್...
ಡಿ.ವಿ.ಎಸ್ ಸ್ವತಂತ್ರ ಪಿ ಯು ಕಾಲೇಜಿಗೆ ಸಮಗ್ರ ಪ್ರಶಸ್ತಿ !
ಶಿವಮೊಗ್ಗ: ನೆಹರು ಕ್ರೀಡಾಂಗಣದಲ್ಲಿ ನಡೆದ ಶಿವಮೊಗ್ಗ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜು ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಶನಿವಾರ ಮತ್ತು ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಅಸಾಮಾನ್ಯ ಸಾಧನೆ ಮಾಡುವ ಮೂಲಕ ವಿವಿಧ ಸ್ಪರ್ಧೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ. ದೈಹಿಕ ಶಿಕ್ಷಕ ಎನ್.ಮಧು ಹಾಗೂ ಕಾಲೇಜಿನ ಕ್ರೀಡಾಪಟುಗಳಿಗೆ ಡಿವಿಎಸ್ ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ, ಕಾರ್ಯದರ್ಶಿ ಎಸ್.ರಾಜಶೇಖರ್,...
ರಾಷ್ಟ್ರ ಭಕ್ತರ ಬಳಗದಿಂದ ಪಾಲಿಕೆಯ 35 ವಾರ್ಡ್‌ಗಳಲ್ಲೂ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ – ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ! ಕೆಎಸ್ಈ ಈಗ ಫುಲ್ ಆಕ್ಟಿವ್ !
ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯನ್ನು ಶೀಘ್ರವೇ ಮಾಡಬೇಕು. ರಾಷ್ಟ್ರ ಭಕ್ತರ ಬಳಗದಿಂದ ಪಾಲಿಕೆಯ 35 ವಾರ್ಡ್‌ಗಳಲ್ಲೂ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ. ಪಾಲಿಕೆ ಚುನಾವಣೆಯಲ್ಲಿ ಹಿಂದುತ್ವಕ್ಕೆ ಮೊದಲ ಆದ್ಯತೆ. ವಾರ್ಡ್‌ಗಳ ನಡುವೆ ಜನಸಂಪರ್ಕ ಇರುವ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಇಂದು ಸುದ್ದಿಗೊಷ್ಟಿಯಲ್ಲಿ ತಿಳಿಸಿದರು. ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಿದೆ?. ಡಿಸಿಸಿ ಬ್ಯಾಂಕ್...
ಗಾಂಧಿಪಾರ್ಕ್ ಸಮೀಪ ನಿಲ್ಲಿಸಿದ್ದ ಕಾರಿನ ಗ್ಲಾಸ್ ಹೊಡೆದು ಕಳ್ಳತನ ! ಏನಿದು ಪ್ರಕರಣ ?
ಶಿವಮೊಗ್ಗ : ನಗರದ ಗಾಂಧಿಪಾರ್ಕ್ ಸಮೀಪ ಹಾಡು ಹಗಲೇ ಸಾರ್ವಜನಿಕರು ಓಡಾಡುತ್ತಿದ್ದ ಸಮಯದಲ್ಲೇ ಕಾರಿನ ಗ್ಲಾಸ್ ಒಡೆದು ಐಪ್ಯಾಡ್ ಕಳ್ಳತನ ಆಗಿರುವ ಘಟನೆ ನಡೆದಿದೆ. ಗಾಂಧಿ ಪಾರ್ಕ್ ನ ಬಳಿ ಇರುವ ಶೌಚಾಲಯ ಸಮೀಪ ಇಎಸ್‌ಐ ಮೆಡಿಕಲ್ ಆಫೀಸರ್ ರಾಕೇಶ್ ಅನ್ನುವವರು ಕಾರು ನಿಲ್ಲಿಸಿದ್ದರು. ಕಾರು ನಿಲ್ಲಿಸಿ ಶೋ ಹೋಲಿಸಿಕೊಂಡು ಬರಲು ತೆರಳಿದ್ದರು. ನಂತರ ವಾಪಸ್ ಆಗುವಾಗ ಕಾರಿನ ಹಿಂಬದಿಯ ಎಡಗಡೆ ಗ್ಲಾಸ್ ಹೊಡೆದಿತ್ತು. ಈ ವೇಳೆ ಪರಿಶೀಲಿಸಿದಾಗ ಯಾರೋ ಕಿಡಿಗೇಡಿಗಳು ಕಾರಿನ ಸೀಟಿನ ಮೇಲೆ ಇಟ್ಟಿದ್ದ...
ಮಾಜಿ ಕಾರ್ಪೊರೇಟರ್ ಮೊಟ್ಟೆ ಸತೀಶ್ ಮೇಲೆ ಹಲ್ಲೆ ! ಶಿವಮೊಗ್ಗ ಎಸ್.ಪಿ ಮಿಥುನ್ ಕುಮಾರ್ ಹೇಳಿದ್ದೇನು?
ಶಿವಮೊಗ್ಗ : ಶಿವಮೊಗ್ಗದ ಕುಸ್ಕೂರಿನಲ್ಲಿ ನೆನ್ನೆ ರಾತ್ರಿ ಮಾಜಿ ಕಾರ್ಪೊರೇಟರ್ ಸತ್ಯನಾರಾಯಣ ( ಮೊಟ್ಟೆ ಸತೀಶ್ ) ಮೇಲೆ ನಡೆದ ಹಲ್ಲೆ ಸಂಬಂಧ ಶಿವಮೊಗ್ಗ ಜಿಲ್ಲಾ ವರಿಷ್ಟಾಧಿಕಾರಿ ಎಸ್. ಪಿ ಮಿಥುನ್ ಕುಮಾರ್ ಜಿ.. ಕೆ ಮಾಹಿತಿ ನೀಡಿದ್ದಾರೆ. ಹಲ್ಲೆ ನಡೆದಿರುವುದು ಜಮೀನು ವ್ಯಾಜ್ಯದ ಸಲುವಾಗಿ ಜಮೀನು ಖರೀದಿಯ ವಿಚಾರಕ್ಕೆ ಸತ್ಯನಾರಾಯಣ ರಾಜು ವ್ಯಾಜ್ಯ ಹೊಂದಿದ್ದರು. ಅದೇ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆದಿದೆ. ಈ ಪ್ರಕರಣದಲ್ಲಿ ರೌಡಿ ಎಲಿಮೆಂಟ್ಸ್ ಕಂಡು ಬಂದಿಲ್ಲ ಎಂದು ಎಸ್. ಪಿ...
ಕಿಡಿಗೇಡಿಗಳಿಂದ ಮನೆಯೊಂದರ ಮೇಲೆ ಕಲ್ಲು ತುರಾಟ !
ಶಿವಮೊಗ್ಗ : ನಗರದ ಕಾಮಾಕ್ಷಿ ಬೀದಿಯ ಮನೆಯೆೊಂದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಏನೋಶಬ್ದವಾಗಿದೆ ಎಂದು ಹೊರಗೆ ಬಂದು ನೋಡಿದ ವೃದ್ಧನ ಮೇಲು ಇಟ್ಟಿಗೆ ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ರಾಮಣ್ಣ ಎಂಬುವವರ ಮನೆಯ ಮೇಲೆ ಆಗಸ್ಟ್ 11ರ ರಾತ್ರಿ ಯಾರೋ ಕಿರಿಕಿಡಿಗಳು ಕಲ್ಲು ತೂರಿದ್ದಾರೆ. ರಾಮಣ್ಣ ಎಂಬವವರು ಆಗಸ್ಟ್ 11ರ ರಾತ್ರಿ ಊಟ ಮುಗಿಸಿ ಮಾತ್ರೆ ತೆಗೆದುಕೊಳ್ಳುತ್ತಿದ್ದರು.ಈ ವೇಳೆ ಹೊರಗೆ ಶಬ್ದವಾಗಿದೆ. ರಾಮಣ್ಣ ಮತ್ತು ಅವರ ಪತ್ನಿ ಬಾಗಿಲು ತೆಗೆದಾಗ ಕಿಡಿಗೇಡಿಗಳು ತೂರಿದ...
ಸಂಭ್ರಮದ ಸ್ವಾತಂತ್ರ್ಯೋತ್ಸವ : ನಗರದ ವಿವಿದೆಡೆ ಹಾರಿತು ತ್ರಿವರ್ಣ ಧ್ವಜ ! ಶಿವಮೊಗ್ಗದಲ್ಲಿ ಹೇಗಿತ್ತು ಸ್ವಾತಂತ್ರ್ಯದ ಸಂಭ್ರಮ !
ಶಿವಮೊಗ್ಗ : ನಗರದ ವಿವಿಧಡೆ ಜನಪ್ರತಿನಿಧಿಗಳು ವಿವಿಧ ಸಂಸ್ಥೆಗಳಲ್ಲಿ ವಿವಿಧ ಕಚೇರಿಗಳಲ್ಲಿ ವಿವಿಧ ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಿ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು. ಇದಕ್ಕೆ ಸಂಬಂಧಿಸಿದ ಕೆಲ ಫೋಟೋ ಮತ್ತು ವಿವರಣೆಗಳು ಇಲ್ಲಿದೆ ! ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯಕ್ ಅವರು 78ನೆಯ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹೊಳೆ ಹೊನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಧ್ವಜಾರೋಹಣ ನೆರವೇರಿಸಿದ್ದರು. 78 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಶಿವಮೊಗ್ಗ ಮಹಾನಗರ ಪಾಲಿಕೆಯ ಆವರಣದಲ್ಲಿ ಶಿವಮೊಗ್ಗ...
ಏಸೂರು ಕೊಟ್ಟರೂ ಈಸೂರು ಕೊಡೆವುಆಂಗ್ಲರ ವಿರುದ್ಧ ರಣಕಹಳೆ ಮೊಳಗಿಸಿದ ಕನ್ನಡಿಗರ ಕಥನ
ಇದು ವಸಾಹತುಶಾಹಿಯ ಬ್ರಿಟಿಷ್ ಸಾಮ್ರಾಜ್ಯದ ಎದುರು ತೊಡೆ ತಟ್ಟಿ ದೇಶದಲ್ಲೇ ಮೊದಲ ಸ್ವತಂತ್ರ ಗ್ರಾಮ ಎಂದು ಹೆಗ್ಗಳಿಕೆ ಪಡೆದ ಶಿವಮೊಗ್ಗದ ಪುಟ್ಟ ಹಳ್ಳಿಯ ಕನ್ನಡಿಗರ ರೋಚಕ ಕಥನ. ಭಾರತ ದೇಶದಲ್ಲಿ ಬ್ರಿಟಿಷರ ದುರಾಡಳಿತವನ್ನು ಕಿತ್ತೊಗೆದು ಸ್ವಾತಂತ್ರ್ಯ ಪಡೆಯಲು, ಜನಸಾಮಾನ್ಯರುಗಳು ಮಾಡಿರುವ ಹೋರಾಟ, ದೇಶಪ್ರೇಮ, ತ್ಯಾಗ-ಬಲಿದಾನಗಳು ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಕರ್ನಾಟಕದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಜನಸಾಮಾನ್ಯರುಗಳು ಮಾಡಿದ ಕೆಚ್ಚಿನ ಹೋರಾಟ, ಬಲಿದಾನ, ತ್ಯಾಗಕ್ಕೆ ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟ ಒಂದು ಅವಿಸ್ಮರಣೀಯ ಸಾಹಸಗಾಥೆಯಾಗಿದೆ. ಮುಗ್ಧ...