ಶಿವಮೊಗ್ಗ: ಜಿಲ್ಲೆಯ ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಅಭಿವೃದ್ಧಿಗಳನ್ನು ತಂದಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ಮತ್ತೊಂದು ಶುಭ ಸುದ್ದಿಯನ್ನು ನೀಡಿದ್ದಾರೆ. ದೇಶದ ರೈಲ್ವೆ ಸಂಚಾರದಲ್ಲಿ ಸಂಚಲನ ಮೂಡಿಸಿರುವ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಆಗಮಿಸುವುದು ಬಹುತೇಕ ಖಚಿತವಾಗಿದೆ ಎಂದು ಸಂಸದರು ತಿಳಿಸಿದ್ದಾರೆ. ಇದನ್ನು ಓದಿ: ಶಾಕಿಂಗ್: ₹2 ಲಕ್ಷ ಸಾಲಕ್ಕೆ, ಹೆಂಡತಿಯ ಮೂಗನ್ನೇ ಕಚ್ಚಿ ತುಂಡರಿಸಿದ ಪತಿ! 😱 ಈ ಕುರಿತು ಮಾಹಿತಿ ನೀಡಿದ ಸಂಸದರು, ಜನವರಿಯಲ್ಲಿ ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಡಿಪೋ ಉದ್ಘಾಟನೆಯಾಗಲಿದೆ. ಇದರ ಬೆನ್ನಲ್ಲೇ,...
Tag: Shivamoggaexpressnews
ರಿಪ್ಪನ್‌ಪೇಟೆ: ಬೈಕ್‌ಗಳ ಮುಖಾಮುಖಿ ಡಿಕ್ಕಿ; ಪ್ರಭಾರ ಮುಖ್ಯಶಿಕ್ಷಕ ಮಂಜಯ್ಯ ದುರ್ಮರಣ
ರಿಪ್ಪನ್‌ಪೇಟೆ: ಶಿವಮೊಗ್ಗ ರಸ್ತೆಯ ಶಿವಮಂದಿರದ ಬಳಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೋಟೆತಾರಿಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಮಂಜಯ್ಯ ಟಿ (59) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಮಂಜಯ್ಯ ಟಿ ಅವರು ಮೂಲತಃ ಹರಮಘಟ್ಟದವರಾಗಿದ್ದು, ಅರಸಾಳುವಿನಲ್ಲಿ ವಾಸವಾಗಿದ್ದರು. ಕೊಟೇತಾರಿಗ ಶಾಲೆಯಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ಘಟನೆ ನಡೆದಿದ್ದು ಹೀಗೆ: ಕರ್ತವ್ಯ ಮುಗಿಸಿ ತಮ್ಮ ಟಿವಿಎಸ್ ಸ್ಟಾರ್ ಸಿಟಿ ಬೈಕ್ (KA14Z6775) ನಲ್ಲಿ ಅರಸಾಳು ಕಡೆಗೆ ತೆರಳುತ್ತಿದ್ದ ಮಂಜಯ್ಯ ಅವರಿಗೆ...
ಸಮುದಾಯದ ಸಹಭಾಗಿತ್ವದಿಂದ ಸ್ವಚ್ಛ ಪರಿಸರ ನಿರ್ಮಾಣ: ಹೊಸೂರಿನ ಆನಂದ್ ಹರಟೆ ಮಾದರಿ ಕಾರ್ಯ!
ಶಿವಮೊಗ್ಗ: ಆನಂದಪುರ, ಐಗಿನಬೈಲು ಗ್ರಾಮಗಳಲ್ಲೀಗ ಸ್ವಚ್ಛತೆ ಮತ್ತು ಸುರಕ್ಷತೆಯ ಹೊಳಪು ಪರಿಸರ ಸ್ವಚ್ಛತೆ ಎನ್ನುವುದು ಕೇವಲ ಭಾಷಣಗಳಿಗೆ ಸೀಮಿತವಾಗಬಾರದು, ಬದಲಿಗೆ ವಾಸ್ತವದಲ್ಲಿ ಅನುಷ್ಠಾನಗೊಳ್ಳಬೇಕು ಎಂಬುದನ್ನು ಹೊಸೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಆನಂದ್ ಹರಟೆ ಅವರು ಸ್ವತಃ ಮಾಡಿ ತೋರಿಸಿದ್ದಾರೆ. ಅವರ ಈ ಕಾರ್ಯವು ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಆನಂದಪುರ ಸಮೀಪದ ಐಗಿನಬೈಲು ಗ್ರಾಮದ ಬಸ್ ನಿಲ್ದಾಣ, ಅಂಗನವಾಡಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚೆನ್ನಮ್ಮಾಜಿ ಪ್ರೌಢಶಾಲೆ ಸಮೀಪ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ವಿಪರೀತವಾಗಿ...
ಶಿವಮೊಗ್ಗ ಸುತ್ತಮುತ್ತಲಿನ ಈ ಗ್ರಾಮಗಳಲ್ಲಿ ನಾಳೆ (ಜು. 09) ವಿದ್ಯುತ್ ಕಡಿತ: ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ!
ಶಿವಮೊಗ್ಗ: ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರ ಎಂಸಿಎಫ್-17 ಮತ್ತು 18ರ ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು. 9 ರಂದು ಬೆಳಗ್ಗೆ 10ರಿಂದ ಸಂಜೆ 6 ರವರೆಗೆ ಹೊನ್ನವಿಲೆ, ನವುಲೆಬಸವಾಪುರ, ಅಮರಾವತಿ ಕ್ಯಾಂಪ್, ಹಳೆ ಶೆಟ್ಟಿಹಳ್ಳಿ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ, ಪದ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಮುಂಚಿತವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ. ಇದನ್ನು ಓದಿ :...
ನಾಳೆ ಭಾರತ್ ಬಂದ್: ಶಿವಮೊಗ್ಗದಲ್ಲೂ ಬಂದ್ ಬಿಸಿ! ಯಾವ ಸೇವೆಗಳು ಬಂದ್? ಯಾವುದಕ್ಕೆ ವಿನಾಯಿತಿ? ಇಲ್ಲಿದೆ ಸಂಪೂರ್ಣ ಮಾಹಿತಿ
ಶಿವಮೊಗ್ಗ: ಜುಲೈ 8, 2025 ರಂದು ದೇಶಾದ್ಯಂತ ಸಂಪೂರ್ಣ ‘ಭಾರತ್ ಬಂದ್’ ಇರಲಿದೆ. ಕೇಂದ್ರ ಸರ್ಕಾರದ “ಕಾರ್ಮಿಕ, ರೈತ ವಿರೋಧಿ ಮತ್ತು ಕಾರ್ಪೋರೆಟ್ ಪರವಾದ ನೀತಿಗಳನ್ನು ವಿರೋಧಿಸಿ 10 ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟ ಈ ಮುಷ್ಕರಕ್ಕೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಲವು ಸೇವೆಗಳಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಪರದಾಡುವಂತಾಗುವ ಸಾಧ್ಯತೆ ಇದೆ. ಬಂದ್‌ಗೆ ಕಾರಣ ಮತ್ತು ಭಾಗವಹಿಸುವಿಕೆ: ದೇಶಾದ್ಯಂತ 25 ಕೋಟಿಗೂ ಹೆಚ್ಚು ಕಾರ್ಮಿಕರು ನಾಳೆ ಮುಷ್ಕರಕ್ಕೆ ಇಳಿಯಲಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈ...
“ಕಾಂಗ್ರೆಸ್ ದುರಾಡಳಿತ ವಿರುದ್ಧ ತಾರ್ಕಿಕ ಅಂತ್ಯದ ಹೋರಾಟ ನಡೆಸಿದ್ದೇನೆ”: ಬಿ.ವೈ. ವಿಜಯೇಂದ್ರ
ಶಿವಮೊಗ್ಗ: “ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮೂಡಾ ಪ್ರಕರಣದಲ್ಲಿ 14 ನಿವೇಶನಗಳನ್ನು ಹಿಂತಿರುಗಿಸುವಂತಾಗಿದ್ದು ಬಿಜೆಪಿಯ ನಿರಂತರ ಹೋರಾಟದ ಫಲವಾಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವರು ರಾಜೀನಾಮೆ ನೀಡುವಂತಾಗಿದ್ದು, ನನ್ನ ಅಧ್ಯಕ್ಷತೆಯಲ್ಲಿ ಬಿಜೆಪಿ ನಡೆಸಿದ ತಾರ್ಕಿಕ ಅಂತ್ಯದ ಹೋರಾಟವೇ ಆಗಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು ಇಂದು ಶಿವಮೊಗ್ಗದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯ ಕಾರ್ಯಕರ್ತರಿಗೆ ಸ್ಪಷ್ಟವಾದ ಉದ್ದೇಶ ಮತ್ತು ಗುರಿ ಇದೆ ಎಂದು ಹೇಳಿದರು....
ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ: ನಾಳೆ (ಜುಲೈ 9) ಪದಗ್ರಹಣ ಸಮಾರಂಭ
ಶಿವಮೊಗ್ಗ: “ಸೇವೆ ಎಂದರೆ ಸ್ವಾರ್ಥವಿಲ್ಲದ ಮಾನವೀಯತೆಯ ಅಭಿವ್ಯಕ್ತಿ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ (ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3182, ವಲಯ-10) ತನ್ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಿದೆ. ಈ ಸಾಲಿನ ನೂತನ ಅಧ್ಯಕ್ಷರಾಗಿ ವಕೀಲರಾದ ಶ್ರೀ ಕೆ.ಎಸ್.ವಿಶ್ವನಾಥ ನಾಯಕ ಮತ್ತು ಕಾರ್ಯದರ್ಶಿಯಾಗಿ ಶ್ರೀ ನಿತಿನ್ ಯಾದವ್ ರವರು ಅಧಿಕಾರ ಸ್ವೀಕರಿಸಲಿದ್ದಾರೆ. ಶುಭ ಕೋರುವವರು: ಸಮಾರಂಭದ ವಿವರಗಳು: ದಿನಾಂಕ: ಜುಲೈ 09, 2025 ರ ಬುಧವಾರ ಸಮಯ:...
ತುರ್ತು ಪರಿಸ್ಥಿತಿ ವಿರೋಧಿಗಳಿಗೆ ಮಾತ್ರ ಸಂವಿಧಾನದ ಮೌಲ್ಯ ಪ್ರತಿಪಾದಿಸುವ ಹಕ್ಕು: ದು.ಗು.ಲಕ್ಷ್ಮಣ್
ಸಾಗರ: ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಭಾರತದಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸುವ ಮನಸ್ಥಿತಿ ಇಲ್ಲದವರಿಗೆ ಸಂವಿಧಾನದ ಮೌಲ್ಯಗಳನ್ನು ಪ್ರತಿಪಾದಿಸುವ ಹಕ್ಕು ಕೂಡ ಇಲ್ಲ ಎಂದು ಹಿರಿಯ ಬರಹಗಾರ ದು.ಗು.ಲಕ್ಷ್ಮಣ್ ಸ್ಪಷ್ಟವಾಗಿ ಹೇಳಿದರು. ಇಲ್ಲಿನ ಅಜಿತ ಸಭಾಭವನದಲ್ಲಿ ಸೇವಾ ಸಾಗರ ಬಳಗ ಭಾನುವಾರ ಆಯೋಜಿಸಿದ್ದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ಸೇರಿದವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಬ್ಬಗೆಯ ನೀತಿಗೆ ಟೀಕೆ: “ಮಾತೆತ್ತಿದರೆ ಕೆಲವರು ಸಂವಿಧಾನದ ಆಶಯಗಳನ್ನೇ ಎತ್ತಿ ತಮ್ಮ ವಾದವನ್ನು ಮಂಡಿಸುತ್ತಾರೆ. ಆದರೆ, ತುರ್ತು ಪರಿಸ್ಥಿತಿಯ ವಿಷಯ...
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಂದೆ ನಿಧನ: ಜೋಧಪುರದಲ್ಲಿ ಅಂತ್ಯಕ್ರಿಯೆ
ನವದೆಹಲಿ: ಕೇಂದ್ರ ರೈಲ್ವೆ, ಸಂಪರ್ಕ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ತಂದೆ ದೌಲಾಲ್ ವೈಷ್ಣವ್ ಅವರು ಇಂದು (ಮಂಗಳವಾರ, ಜುಲೈ 08, 2025) ನಿಧನರಾಗಿದ್ದಾರೆ. ಜೋಧಪುರದ ಏಮ್ಸ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 11:52 ಕ್ಕೆ ಅವರು ಕೊನೆಯುಸಿರೆಳೆದರು. ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೌಲಾಲ್ ವೈಷ್ಣವ್ ಅವರನ್ನು ಇತ್ತೀಚೆಗೆ ಜೋಧಪುರದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ತಂಡದ ತೀವ್ರ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಏಮ್ಸ್ ಜೋಧಪುರ ಆಸ್ಪತ್ರೆ ಟ್ವೀಟ್...
ಶಿವಮೊಗ್ಗ: ದೆವ್ವ ಬಿಡಿಸುವ ನೆಪದಲ್ಲಿ ಭೀಕರ ಕೊಲೆ – ಪ್ರಕರಣ ಮುಚ್ಚಿಹಾಕಲು ಯತ್ನ ವಿಫಲ, ಇಬ್ಬರ ಬಂಧನ
ಶಿವಮೊಗ್ಗ: ಅಂಧಶ್ರದ್ಧೆ ಮತ್ತು ಮೂಢನಂಬಿಕೆಗಳು ಎಷ್ಟರಮಟ್ಟಿಗೆ ಮಾನವ ಜೀವಕ್ಕೆ ಕುತ್ತು ತರಬಹುದು ಎಂಬುದಕ್ಕೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆಯಲ್ಲಿ ನಡೆದ ಘಟನೆಯೇ ಸಾಕ್ಷಿ. “ದೆವ್ವ ಬಿಡಿಸುವ” ನೆಪದಲ್ಲಿ ನಡೆದ ಭೀಕರ ಹಲ್ಲೆಯಿಂದ 45 ವರ್ಷದ ಗೀತಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದು, ಈ ಪ್ರಕರಣವನ್ನು ಮುಚ್ಚಿಹಾಕಲು ನಡೆದ ಯತ್ನವೂ ವಿಫಲವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾಟಗಾತಿ ಆಶಾ ಅಲಿಯಾಸ್ ಶಾಂತಮ್ಮ ಮತ್ತು ಆಕೆಯ ಪತಿ ಸಂತೋಷ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: ಹೊಸ ಜಂಬರಗಟ್ಟೆ ಗ್ರಾಮದ ಗೀತಮ್ಮ...