ಕಿಡಿಗೇಡಿಗಳು ಪೊಲೀಸರ ಹೆಸರಲ್ಲಿ ರಾಜ್ಯದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಪೊಲೀಸ್ ಹೆಲ್ಪ್‌ಲೈನ್ ಹೆಸರಿನಲ್ಲಿ ಸುಳ್ಳು ನಂಬರ್ ಉಲ್ಲೇಖಿಸಿ ಎಸ್‌ಎಂಎಸ್‌ನ್ನು ಕಿಡಿಗೇಡಿಗಳು ಎಲ್ಲೆಡೆ ವೈರಲ್ ಮಾಡುತ್ತಿದ್ದು, ಎಚ್ಚರದಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ. ಏನಿದು ವೈರಲ್ ಮೆಸೇಜ್? ಪೊಲೀಸರು ಹೊಸದೊಂದು ಟ್ರಾವೆಲ್ ಸ್ಕೀಂ ಪ್ರಾರಂಭಿಸಿದ್ದು, ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಾರೆ ಅಂತಾ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದರು. ಜೊತೆಗೆ ಒಂಟಿ...
Tag: Shivamoggaexpressnews
ವೃದ್ದಾಪ್ಯ ವೇತನ ಕೊಡದೆ ಬಡಪಾಯಿ ಅಜ್ಜಿಯ ಮೇಲೆ ದರ್ಪ ಮೆರೆದ ಕೆನೆರಾ ಬ್ಯಾಂಕ್ ಮ್ಯಾನೇಜರ್ ! ದೇವರು ಕೊಟ್ಟರು ಪೂಜಾರಿ ಕೊಡಲ್ಲ ಎನ್ನುವ ಹಾಗೆ ಆಯಿತು ಈ ಮ್ಯಾನೇಜರ್ ಕಥೆ ! ಏನಿದು ಪ್ರಕರಣ ?
ರಿಪ್ಪನಪೇಟೆ : ಪಟ್ಟಣದ ಕೆನೆರಾ ಬ್ಯಾಂಕ್ ಮ್ಯಾನೇಜರ್ ಒಬ್ಬರು ಸರ್ಕಾರದಿಂದ ಬಂದಿರುವ ವೃದ್ದಾಪ್ಯ ವೇತನವನ್ನು ವೃದ್ಧೆಯೊಬ್ಬರಿಗೆ ನೀಡದೆ ಕಳೆದ ಆರೇಳು ತಿಂಗಳಿನಿಂದ ಲೋನ್ ನೆಪ ಹೇಳಿ ತಡೆ ಒಡ್ಡಿರುವ ಘಟನೆ ನಡೆದಿದೆ. ಬಡತನ ರೇಖೆಗಿಂತ ಕೆಳಗಿರುವ ನಾಡಿನ ಹಿರಿಯ ನಾಗರಿಕರು ತಮ್ಮ ಇಳಿ ವಯಸ್ಸಿನಲ್ಲಿ ಸಂತೋಷದಿಂದ ಇರಲಿ ಎಂಬ ಸದುದ್ದೇಶದಿಂದ ಸರ್ಕಾರ ಮಾಸಾಶನ ನಿಗದಿ ಮಾಡಿ ಅವರ ಜೀವನಕ್ಕೆ ಆಧಾರವಾಗಿದೆ.ಆದರೆ ದೇವರು ಕೊಟ್ಟರು ಪೂಜಾರಿ ಪೂಜಾರಿ ಕೊಡುವುದಿಲ್ಲ ಎನ್ನುವ ಹಾಗೇ ಕೆನರಾ ಬ್ಯಾಂಕ್ ನ ಮ್ಯಾನೇಜರ್ ವೃದ್ದೆಗೆ...
ವಿದ್ಯಾರ್ಥಿಯನಿಯರ ಜೊತೆ ಅಸಭ್ಯ ವರ್ತನೆ ! ವಸತಿ ಶಾಲೆ ಶಿಕ್ಷಕನ ಬಂಧನ !
ತೀರ್ಥಹಳ್ಳಿ : ತಾಲೂಕಿನ ವಸತಿ ಶಾಲೆಯೊಂದರಲ್ಲಿ ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತೀರ್ಥಹಳ್ಳಿ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಶಾಲೆಯ ನೃತ್ಯ ಶಿಕ್ಷಕನನ್ನು ಬಂಧಿಸಿದ್ದಾರೆ. ದೂರು ದಾಖಲಾಗುತ್ತಲೇ ತಲೆ ಮರೆಸಿಕೊಂಡಿದ್ದ ಶಿಕ್ಷಕನನ್ನು ಬೆಂಗಳೂರು ಬಳಿಯ ನೆಲಮಂಗಲದಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. 45 ವರ್ಷದ ಆರೋಪಿ ಅದೇ ಶಾಲೆಯಲ್ಲಿ ಕಳೆದ ಏಳು ತಿಂಗಳಿಂದ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿನಿಯರ ಹೇಳಿಕೆ ಆಧರಿಸಿ ಶಾಲೆಯ ಪ್ರಾಚಾರ್ಯರು ಪೊಲೀಸರಿಗೆ ದೂರು ನೀಡಿದ್ದರು. ‘ವಸತಿ ಶಾಲೆಯ 21...
ಜೈಲಿನಿಂದಲೇ MLA ಮಗನನ್ನು ಮುಗಿಸಲು ಸ್ಕೆಚ್ ! ದಾಖಲಾಯ್ತು ಕೇಸ್ ! F.I.R ನಲ್ಲಿ ಏನಿದೆ ?
ಶಿವಮೊಗ್ಗ : ಜೈಲಿನಿಂದ ಆರೋಪಿಯೊಬ್ಬ ಶಾಸಕರ ಪುತ್ರನ ಹತ್ಯೆಗೆ ಸಂಚು ರೂಪಿಸಿದ್ದ ಘಟನೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ (BK Sangameshwar) ಪುತ್ರನ ಹತ್ಯೆಗೆ ಸಂಚು ನಡೆದಿದೆ ಎನ್ನವ ಆರೋಪ ಕೇಳಿ ಬಂದಿದೆ. ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಬಸವರಾಜು (Basavaraju) ಸ್ವಲ್ಪದ್ರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೈಲಿನಲ್ಲಿರುವ ಡಿಚ್ಚಿ ಮುಬಾರಕ್ ಎಂಬ ಆರೋಪಿ ಈ ಹತ್ಯೆಗೆ...
BREAKING NEWS : ಆಯನೂರಿನಲ್ಲಿ ದಗ ದಗನೆ ಹೊತ್ತಿ ಉರಿದ ಬೇಕರಿ ! ಸಿಲೆಂಡರ್ ಗಳು ಬ್ಲಾಸ್ಟ್ !
ಶಿವಮೊಗ್ಗ : ತಾಲೂಕಿನ ಆಯನೂರಿನ ಬಳಿ ಇರುವ ಬೇಕರಿ ಒಂದರಲ್ಲಿ ಬೆಂಕಿ ಹತ್ತಿಕೊಂಡು ದಗ ದಗನೆ ಹೊತ್ತಿ ಉರಿದ ಘಟನೆ ನಡೆದಿದೆ. ಆಯನೂರಿನ ಹಣಗೆರೆ ರಸ್ತೆಯ ಎಸ್ ಎಲ್ ವಿ ಅಯ್ಯಂಗಾರ್ ಬೇಕರಿಯಲ್ಲಿ ದಿಡೀರ್ ಬೆಂಕಿ ಕಾಣಿಸಿಕೊಂಡು. ಅಂಗಡಿ ಹೊತ್ತಿ ಉರಿದಿದೆ ಬೆಂಕಿಯ ಜ್ವಾಲೆ ಜಾಸ್ತಿ ಆಗುತ್ತಿದ್ದ ಸಂದರ್ಭದಲ್ಲಿ ಬೇಕರಿ ಒಳಗೆ ಮೂರು ಬಾರಿ ಸ್ಫೋಟಗೊಂಡಿದೆ. ಬೇಕರಿಯಲ್ಲಿರುವ ಸಿಲೆಂಡರ್ ಸ್ಫೋಟಗೊಂಡಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಬೆಂಕಿಯ ಜ್ವಾಲೆ ಅಕ್ಕಪಕ್ಕದ ಅಂಗಡಿಗಳಿಗೂ ಆವರಿಸಿದ್ದು. ಅಕ್ಕ ಪಕ್ಕದ ಅಂಗಡಿಯವರು ಬೆಂಕಿ...
ಶಿವಮೊಗ್ಗದಲ್ಲಿ ಓಪನ್ ರೌಡಿಸಂ ! ನಗರದಲ್ಲಿ ಹೆಚ್ಚಾಯ್ತಾ ಪುಡಿರೌಡಿಗಳ ಅಟ್ಟಹಾಸ ? ಲಾಂಗ್ ಬೀಸಿದ ವಿಡಿಯೋ ವೈರಲ್ ! ಎಫ್ಐಆರ್ ದಾಖಲು !
ಶಿವಮೊಗ್ಗ : ಶಿವಮೊಗ್ಗದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದ್ದು ಮಲೆನಾಡಿಗರು ಬೆಚ್ಚಿಬಿದ್ದಿದ್ದಾರೆ. ರೌಡಿಗಳ ಓಪನ್ ಅಟ್ಯಾಕ್ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಲಾಂಗು ಹಿಡಿದು ಅಟ್ಯಾಕ್ ಮಾಡಿದ ವೀಡಿಯೋ ವೈರಲ್ ಆಗಿದೆ. ಶಿವಮೊಗ್ಗದಲ್ಲಿ ನಡೆದ ಈ ಓಪನ್ ರೌಡಿಸಂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವೈರಲ್ ಆಗಿದೆ. ನಗರದ ಸವಳಂಗ ರಸ್ತೆಯ ಎಲ್‌ಬಿಎಸ್ ನಗರದಲ್ಲಿರುವ ಪೋಲಾರ್ ಬೇರ್. ಮತ್ತು ಮೆಟ್ಲೆಸ್ ಬಳಿ ಆಗಸ್ಟ್ 16 ರ ರಾತ್ರಿ ಸುಮಾರು 12ರಿಂದ ಒಂದು ಗಂಟೆಯ ವೇಳೆಗೆ ತನಕ ಗಲಾಟೆ...
ಇಂದು ಭಾರತ್ ಬಂದ್ ! ಶಾಲಾ, ಕಾಲೇಜು, ಬ್ಯಾಂಕ್, ಕಚೇರಿ ಬಂದ್ ಆಗುತ್ತಾ.? ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಮಾಹಿತಿ.
ನವದೆಹಲಿ : ಎಸ್‌ಸಿ, ಎಸ್‌ಟಿ ಒಳಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಸರಕಾರಗಳಿಗಿವೆ ಎಂಬ ಸುಪ್ರೀಂ ಕೋರ್ಟ್‌ನ ಇತ್ತೀಚೆಗಿನ ತೀರ್ಪನ್ನು ಖಂಡಿಸಿ ರಿಸರ್ವೇಶನ್ ಬಚಾವೋ ಸಂಘರ್ಷ್ ಸಮಿತಿ ಕರೆ ನೀಡಿರುವ ಭಾರತ್ ಬಂದ್ ಬುಧವಾರ ನಡೆಯಲಿದೆ. ರಾಜಸ್ಥಾನ, ಉತ್ತರಪ್ರದೇಶ ಸೇರಿ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬಂದ್‌ಗೆ ಹೆಚ್ಚು ಬೆಂಬಲ ವ್ಯಕ್ತವಾಗುವ ಸಾಧ್ಯತೆಯಿರುವ ಕಾರಣ ಭದ್ರತೆ ಹೆಚ್ಚಿಸಲಾಗಿದೆ.ಉದ್ಯಮ ಸಂಸ್ಥೆಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ನೀಡಬೇಕು ಎಂದು ಆದಿವಾಸಿ, ದಲಿತ ಸಂಘಟನೆಗಳು ಕರೆ...
ಸ್ಪಾ ಹೆಸರಲ್ಲಿ ಸೆಕ್ಸ್ ದಂಧೆ ! ವಿನೋಬನಗರದಲ್ಲಿ ಸ್ಪಾ ಮೇಲೆ ಪೊಲೀಸ್ ರೈಡ್ ! ಇಬ್ಬರು ಸಂತ್ರಸ್ತೆಯರ ರಕ್ಷಣೆ !
ಶಿವಮೊಗ್ಗ : ಸ್ಪಾ ಮತ್ತು ಬಾಡಿ ಮಸಜಾ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತಿದ್ದ ಸ್ಪಾ ಮೇಲೆ ಶಿವಮೊಗ್ಗ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವೀರಣ್ಣ ಲೇ ಔಟ್ ಮೂರನೇ ತಿರುವಿನಲ್ಲಿರುವ ಲೈರಾ ಮೇಕ್ ಓವರ್ ಸ್ಟುಡಿಯೋ ಸಲೂನ್ ಅಂಡ್ ಸ್ಪಾ ದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಸಂತ್ರಸ್ತೆಯರನ್ನು ರಕ್ಷಣೆ ಮಾಡಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ. ಕೆ ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾ...
ಸಿದ್ದರಾಮಯ್ಯನವರ ಕಾಲು ತೊಳೆದು ನೀರು ಕುಡಿಯುತ್ತೇನೆ ! ಹೀಗೆ ಅಂದಿದೇಕೆ ಬಿಜೆಪಿ ಎಂ.ಎಲ್.ಎ ಚನ್ನಬಸಪ್ಪ ?
ಶಿವಮೊಗ್ಗ : ಮುಡಾ ಹಗರಣದ ತನಿಖೆ ಚುರುಕು ಪಡೆಯುತ್ತಿದ್ದಂತೆ ವಿಪಕ್ಷಗಳ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಎಸ್‌ಎನ್ ಚನ್ನಬಸಪ್ಪ ವಾಗ್ದಾಳಿ ಮಾಡಿದ್ದು, ‘ನೀವು ಕಳಂಕಿತ ಮುಖ್ಯಮಂತ್ರಿ, ಐವಾನ್ ಅಲ್ಲ ಹೈವಾನ್’ ಎಂದು ಹರಿಹಾಯ್ದಿದ್ದಾರೆ. ಅಲ್ಲದೆ ಸಿದ್ದರಾಮಯ್ಯರವರದ್ದು ತಪ್ಪಿಲ್ಲವಾದರೇ ತನಿಖೆ ಎದುರಿಸಿ ಬರಲಿ ನಾವೇ ಅವರ ಪಾದವನ್ನು ತೊಳೆಯುತ್ತೇವೆ ಎಂದು ಸವಾಲ್ ಹಾಕಿದ್ದಾರೆ. ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸಂವಿಧಾನವನ್ನ ಬುಡಮೇಲು ಮಾಡುವ ಕೆಲಸಕ್ಕೆ ಕೈ ಹಾಕಿದೆ’ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್...
ಡಿ.ವಿ.ಎಸ್ ಸ್ವತಂತ್ರ ಪಿ ಯು ಕಾಲೇಜಿಗೆ ಸಮಗ್ರ ಪ್ರಶಸ್ತಿ !
ಶಿವಮೊಗ್ಗ: ನೆಹರು ಕ್ರೀಡಾಂಗಣದಲ್ಲಿ ನಡೆದ ಶಿವಮೊಗ್ಗ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜು ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಶನಿವಾರ ಮತ್ತು ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಅಸಾಮಾನ್ಯ ಸಾಧನೆ ಮಾಡುವ ಮೂಲಕ ವಿವಿಧ ಸ್ಪರ್ಧೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ. ದೈಹಿಕ ಶಿಕ್ಷಕ ಎನ್.ಮಧು ಹಾಗೂ ಕಾಲೇಜಿನ ಕ್ರೀಡಾಪಟುಗಳಿಗೆ ಡಿವಿಎಸ್ ಅಧ್ಯಕ್ಷ ಕೆ.ಎನ್. ರುದ್ರಪ್ಪ ಕೊಳಲೆ, ಕಾರ್ಯದರ್ಶಿ ಎಸ್.ರಾಜಶೇಖರ್,...