ಕುವೆಂಪು ವಿಶ್ವ ವಿದ್ಯಾಲಯದ ಯಡವಟ್ಟು ! ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ! ಶಿವಮೊಗ್ಗ : ಜಿಲ್ಲೆಯ ಶಂಕರ್ ಘಟ್ಟದಲ್ಲಿ ಇರುವ ಕುವೆಂಪು ವಿಶ್ವವಿದ್ಯಾಲಯದಿಂದ ಯಡವಟ್ಟಾಗಿದ್ದು, ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಗಿದೆ. 2021- 2022ನೇ ಏಪ್ರಿಲ್ /ಮೇ ತಿಂಗಳಲ್ಲಿ ಪ್ರಥಮ ಸೆಮಿಸ್ಟರ್ ನ ಫೈನಾನ್ಸಿಯಲ್ ಅಕೌಂಟಿಂಗ್, ಡಿಜಿಟಲ್ ಫ್ಲೋಯೆನ್ಸಿ ಮತ್ತು ಫಂಡಮೆಂಟಲ್ ಆಫ್ ಬಿಜಿನೆಸ್ ಅಕೌಂಟಿಂಗ್ ವಿಷಯಗಳಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ...
Tag: Shivamoggaexpressnews
ಶಿವಮೊಗ್ಗದ ಯುವಜನತೆಗೆ ಭಾರತದ ಸಂಸತ್ತಿನಲ್ಲಿ ಮಾತನಾಡಲು ಸುವರ್ಣವಕಾಶ ! ರಾಷ್ಟ್ರೀಯ ಯುವ ಸಂಸತ್ತು-2024
ಶಿವಮೊಗ್ಗದ ಯುವಜನತೆಗೆ ಭಾರತದ ಸಂಸತ್ತಿನಲ್ಲಿ ಮಾತನಾಡಲು ಸುವರ್ಣವಕಾಶ ! ರಾಷ್ಟ್ರೀಯ ಯುವ ಸಂಸತ್ತು-2024 ಶಿವಮೊಗ್ಗ ಜಿಲ್ಲೆಯ ಯುವಜನರಿಗೆ ಭಾರತ ಸಂಸತ್ತಿನಲ್ಲಿ ಮಾತನಾಡಲು ಇದೊಂದು ಸುವರ್ಣವಕಾಶ ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಆಯೋಜಿಸಿರುವ ರಾಷ್ಟ್ರೀಯ ಯುವ ಸಂಸತ್ತು-2024 ಪ್ರಯುಕ್ತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದ್ದು ಇದರಲ್ಲಿ ಭಾಗವಹಿಸಲು ಎಲ್ಲಾರಿಗೂ ಇದೊಂದು ಸುವರ್ಣವಕಾಶವಾಗಿದೆ. ಭಾಷಣ ಸ್ಪರ್ಧೆಯು (i)Making India a global Leader ii) From Atmanirbhar to Viksit Bhart iii) Empowering...
ಚಲಿಸುತಿದ್ದ ಬೈಕ್ ಮೇಲೆ ಬಿದ್ದ ಬೃಹತ್ ಗಾತ್ರದ ಮರ ! ಮೂವರಿಗೆ ಗಂಭೀರ ಗಾಯ !
ಚಲಿಸುತಿದ್ದ ಬೈಕ್ ಮೇಲೆ ಬಿದ್ದ ಬೃಹತ್ ಗಾತ್ರದ ಮರ ! ಮೂವರಿಗೆ ಗಂಭೀರ ಗಾಯ ! ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಗೋಂದಿ ಚಟ್ನಹಳ್ಳಿ ಬಳಿ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಬೈಕ್ ಓಡಿಸುತ್ತಿದ್ದ ಮಾವ ಮಹಮ್ಮದ್ ಶಫಿ, ಬೈಕ್ ಹಿಂಬದಿಯಲ್ಲಿದ್ದ ಸೊಸೆ ಮತ್ತು ಮೊಮ್ಮಗಳಿಗೆ ಗಾಯವಾಗಿದ್ದು, ಕೂಡಲೇ ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ,...
ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹೋರಿ ತಿವಿದು ಯುವಕ ಸಾವು ! ಶಿವಮೊಗ್ಗ ಜಿಲ್ಲಾಧಿಕಾರಿ ಹೇಳಿದ್ದೇನು ?
ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹೋರಿ ತಿವಿದು ಯುವಕ ಸಾವು ! ಶಿವಮೊಗ್ಗ ಜಿಲ್ಲಾಧಿಕಾರಿ ಹೇಳಿದ್ದೇನು ? ಶಿವಮೊಗ್ಗ : ಹೋರಿ ಹಬ್ಬ ಅಥವಾ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಸೋಮವಾರ ನಡೆದಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದ ನಿವಾಸಿ ಪುನೀತ್ ಆಚಾರ್ (19) ಮೃತಪಟ್ಟ ಯುವಕ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ...
ನಡು ರಸ್ತೆಯಲ್ಲಿ ಗನ್ ಹಿಡಿದು ಯುವಕನ ಹುಚ್ಚಾಟ ! ಜನರಲ್ಲಿ ಆತಂಕ ! ಪೊಲೀಸರ ಮುಂದೆ ಬಹಿರಂಗವಾಯಿತು ಪಿಸ್ತೂಲಿನ ಅಸಲಿಯತ್ತು ?
ನಡು ರಸ್ತೆಯಲ್ಲಿ ಗನ್ ಹಿಡಿದು ಯುವಕನ ಹುಚ್ಚಾಟ ! ಜನರಲ್ಲಿ ಆತಂಕ ! ಪೊಲೀಸರ ಮುಂದೆ ಬಹಿರಂಗವಾಯಿತು ಪಿಸ್ತೂಲಿನ ಅಸಲಿಯತ್ತು ? ಸಾಗರ : ಪಾನಮತ್ತನಾದ ಯುವಕನೊಬ್ಬ ಗನ್ ಹಿಡಿದು ರಸ್ತೆಯಲ್ಲಿ ಸಾರ್ವಜನಿಕರಿಗೆ ಬೆದರಿಕೆ ಒಡ್ಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಗರದ ಮಾರುಕಟ್ಟೆ ರಸ್ತೆ ಹಿಂಭಾಗದಲ್ಲಿ ನಡೆದಿದೆ. ಫೆ .11ರ ರಾತ್ರಿ ಯುವಕರ ಮಧ್ಯೆ ಗಲಾಟೆಯಾಗಿತ್ತು. ಈ ವೇಳೆ ದರ್ಶನ್, ಪಿಸ್ತೂಲು ತೋರಿಸಿದ್ದ. ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದರು. ಕೆಲವರು ಗಲಾಟೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು....
ಪ್ರವಾಸೋದ್ಯಮ ಅಭಿವೃದ್ಧಿಯಿಂದ ದೇಶದ ಆರ್ಥಿಕ ಶಕ್ತಿ ಸದೃಢ
ಪ್ರವಾಸೋದ್ಯಮ ಅಭಿವೃದ್ಧಿಯಿಂದ ದೇಶದ ಆರ್ಥಿಕ ಶಕ್ತಿ ಸದೃಢ ಶಿವಮೊಗ್ಗ: ಒಂದು ದೇಶದ ಆರ್ಥಿಕ ಶಕ್ತಿ ಸದೃಢ ಆಗಿರಬೇಕಾದರೆ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಗೊಳ್ಳಬೇಕು. ಪ್ರವಾಸೋದ್ಯಮ ಸ್ಥಳಗಳಿಗೆ ಸರ್ಕಾರ ಪೂರಕವಾದ ಅಗತ್ಯವಾದ ವ್ಯವಸ್ಥೆಗಳನ್ನು ಕಲ್ಪಿಸಲು ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಿ.ಎಂ.ಶಂಕರಪ್ಪ ಹೇಳಿದರು. ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ವತಿಯಿಂದ ಅಂಡಮಾನ್ ಪ್ರವಾಸ ಚಾರಣಕ್ಕೆ ಹೊರಟಿರುವ 50 ಜನರ ತಂಡವನ್ನು ಬಿಳ್ಕೋಡುಗೆ ನೀಡಿ ಮಾತನಾಡಿದರು....
ಶಿವಮೊಗ್ಗದಲ್ಲಿ ಟ್ರಿಣ್.. ಟ್ರಿಣ್.. ಸೈಕಲ್ ಸದ್ದು ! 30 ಸ್ಟೇಷನ್ ಗಳಲ್ಲಿ 300 ಸೈಕಲ್ ! ನಗರಕ್ಕೆ ಲಗ್ಗೆ ಇಟ್ಟ ಜಿಪಿಎಸ್ ಆಧಾರಿತ ಸೈಕಲ್ ! ಬಳಸುವುದು ಹೇಗೆ ?
ಶಿವಮೊಗ್ಗದಲ್ಲಿ ಟ್ರಿಣ್.. ಟ್ರಿಣ್.. ಸೈಕಲ್ ಸದ್ದು ! 30 ಸ್ಟೇಷನ್ ಗಳಲ್ಲಿ 300 ಸೈಕಲ್ ! ನಗರಕ್ಕೆ ಲಗ್ಗೆ ಇಟ್ಟ ಜಿಪಿಎಸ್ ಆಧಾರಿತ ಸೈಕಲ್ ! ಬಳಸುವುದು ಹೇಗೆ ? ಶಿವಮೊಗ್ಗ : ಬಹು ನಿರೀಕ್ಷಿತ ಸಾರ್ವಜನಿಕ ಬೈಸಿಕಲ್ ಶೇರ್ (ಪಿಬಿಎಸ್) ವ್ಯವಸ್ಥೆಗೆ ಕೊನೆಗೂ ಚಾಲನೆ ದೊರೆತಿದ್ದು, ನಗರದ ಬೈಸಿಕಲ್ ಉತ್ಸಾಹಿಗಳು ಇದೀಗ ಈ ಆರೋಗ್ಯಕರ, ಪರಿಸರ ಸ್ನೇಹಿ ಮತ್ತು ವೆಚ್ಚ-ಪರಿಣಾಮಕಾರಿ ಸಾರಿಗೆ ವಿಧಾನವನ್ನು ಬಳಸಬಹುದು. ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಸ್‌ಎಸ್‌ಸಿಎಲ್) ಸಾರ್ವಜನಿಕ ಖಾಸಗಿ ಸಹಭಾಗಿತ್ವದ...
ಸಂಸದ ಬಿವೈಆರ್ ಪ್ರಯತ್ನಕ್ಕೆ ಫಲ ! ಶಿವಮೊಗ್ಗ ಸುಸ್ಸಜ್ಜಿತ ವೆಲ್ ನೆಸ್ ಸೆಂಟರ್ ! ವೆಲ್ ನೆಸ್ ಸೆಂಟರ್ ನ ಲಾಭವೇನು?
ಸಂಸದ ಬಿವೈಆರ್ ಪ್ರಯತ್ನಕ್ಕೆ ಫಲ ! ಶಿವಮೊಗ್ಗ ಸುಸ್ಸಜ್ಜಿತ ವೆಲ್ ನೆಸ್ ಸೆಂಟರ್ ! ವೆಲ್ ನೆಸ್ ಸೆಂಟರ್ ನ ಲಾಭವೇನು? ಶಿವಮೊಗ್ಗ : ಶಿವಮೊಗ್ಗದಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ಸಿಜಿಹೆಚ್‌ಎಸ್ ವೆಲ್‌ನೆಸ್ ಸೆಂಟರ್ ಆರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಮನ್ ಸುಖ್ ಮಾಂಡವಿಯಾ ಅವರನ್ನು ಭೇಟಿ ಮಾಡಿದ ಸಂಸದ ಬಿವೈಆರ್ ಅವರು ಕೇಂದ್ರ ಸರ್ಕಾರಿ ನೌಕರರ ಮತ್ತು ನಿವೃತ್ತ ನೌಕರರ ಕುಟುಂಬಗಳ ಅನುಕೂಲಕ್ಕಾಗಿ...
ಶಿವಮೊಗ್ಗ : ರಾಗಿಗುಡ್ಡ ಅಂಬೇಡ್ಕರ್ ವಸತಿ ಶಾಲೆಗೆ ಅರ್ಜಿ ಆಹ್ವಾನ.
ಶಿವಮೊಗ್ಗ : ರಾಗಿಗುಡ್ಡ ಅಂಬೇಡ್ಕರ್ ವಸತಿ ಶಾಲೆಗೆ ಅರ್ಜಿ ಆಹ್ವಾನ. ಶಿವಮೊಗ್ಗ : ನಗರದ ರಾಗಿಗುಡ್ಡದ ಬಿ.ಆರ್.ಅಂಬೇಡ್ಕರ್ ಪ.ಜಾತಿ, ವರ್ಗದ ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಯಲ್ಲಿ 2024-25ನೇ ಸಾಲಿಗೆ 5ನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ 30 ವಿದ್ಯಾರ್ಥಿನಿಯರು ಮತ್ತು ಇತರೇ ವರ್ಗದ 10 ವಿದ್ಯಾರ್ಥಿನಿಯರು ಒಟ್ಟು 40 ವಿದ್ಯಾರ್ಥಿನಿಯರಿಗೆ ಮಾತ್ರ 5ನೇ ತರಗತಿಗೆ ಪ್ರವೇಶಾವಕಾಶವಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಲಾಗುವುದು. ಉತ್ತಮ ಶಿಕ್ಷಣ, ಊಟ, ವಸತಿ ಸೌಕರ್ಯ, ಸಮವಸ್ತ್ರ ಪಠ್ಯ...
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಡೀರ್ ದಾಳಿ ! ಸಾಕ್ಷಿ ಸಮೇತ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಎಫ್.ಡಿ.ಎ !
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಡೀರ್ ದಾಳಿ ! ಸಾಕ್ಷಿ ಸಮೇತ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಎಫ್.ಡಿ.ಎ ! ಶಿವಮೊಗ್ಗ : ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಸಿಂಹಸ್ವಪ್ನ ಆಗಿರುವ ಲೋಕಾಯುಕ್ತ ಇಲಾಖೆ, ನೆನ್ನೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಧೀಡಿರ್ ದಾಳಿ ನಡೆಸಿದ್ದು, ಲಂಚ ಪಡೆಯುವಾಗ ಓರ್ವ ಎಫ್ಡಿಎ ಸಾಕ್ಷಿ ಸಮೇತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಯಲ್ಲಿ ಲಂಚ ಪಡೆಯುವಾಗ ಎಫ್ಡಿಎ ಅಧಿಕಾರಿಯೊಬ್ಬ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ,...