ಶಿವಮೊಗ್ಗ: 2025-26ನೇ ಸಾಲಿನ ಮುಂಗಾರು ಬೆಳೆಗೆ ತುಂಗಾ ನಾಲಾ ವ್ಯಾಪ್ತಿಯ ರೈತರಿಗೆ ಮತ್ತು ಸಾರ್ವಜನಿಕರಿಗೆ ಪ್ರಮುಖ ಸೂಚನೆ. ಕಾರ್ಯಪಾಲಕ ಇಂಜಿನಿಯರ್, ಕ.ನೀ.ನಿ.ನಿ., ತುಂ.ಮೇ.ಯೋ.ವಿಭಾಗ ಇವರು ಹೊರಡಿಸಿರುವ ಪ್ರಕಟಣೆಯ ಪ್ರಕಾರ: ತುಂಗಾ ಎಡದಂಡೆ ನಾಲೆಯಲ್ಲಿ ದಿನಾಂಕ: 12.07.2025 ರಿಂದ ತುಂಗಾ ಬಲದಂಡೆ ನಾಲೆಯಲ್ಲಿ ದಿನಾಂಕ: 15.07.2025 ರಿಂದ ನೀರು ಹರಿಸಲಾಗುವುದು. ನೀರು ಹರಿಸುವ ಹಿನ್ನೆಲೆಯಲ್ಲಿ, ಅಚ್ಚುಕಟ್ಟು ರೈತರು ಹಾಗೂ ಸಾರ್ವಜನಿಕರು ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡದಂತೆ ಎಚ್ಚರಿಕೆ ವಹಿಸಬೇಕು. ಜನ, ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ...