ಭಾರತದಲ್ಲಿ ಪ್ರತಿಷ್ಠಿತ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಎಂದರೆ ಲಕ್ಷಾಂತರ ಆಕಾಂಕ್ಷಿಗಳು, ವರ್ಷಗಳ ತಯಾರಿ, ಕೋಚಿಂಗ್ ಸೆಂಟರ್‌ಗಳ ಮೊರೆ, ಪುಸ್ತಕಗಳ ರಾಶಿ… ಇದು ಸಾಮಾನ್ಯ ಚಿತ್ರಣ. ಆದರೆ, ಮೈಸೂರು ಜಿಲ್ಲೆಯ ಪುಟ್ಟ ಹಳ್ಳಿ ಅಂಕೆನಹಳ್ಳಿಯ ಎ.ಸಿ. ಪ್ರೀತಿ ಈ ಎಲ್ಲಾ ಮಾಮೂಲಿ ಲೆಕ್ಕಾಚಾರಗಳನ್ನು ಮೀರಿ ನಿಂತಿದ್ದಾರೆ. ಯಾವುದೇ ದುಬಾರಿ ಕೋಚಿಂಗ್ ಪಡೆಯದೆ, ತಮ್ಮ ಮೂರನೇ ಪ್ರಯತ್ನದಲ್ಲಿ 2024ರ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅದ್ಭುತ 263ನೇ ರ‍್ಯಾಂಕ್ ಗಳಿಸಿ, ದೇಶದ ಅತ್ಯುನ್ನತ ಸೇವೆ, ಐಎಎಸ್ ಅಧಿಕಾರಿಯಾಗುವ ಕನಸನ್ನು...