ಮುಂಬೈನಲ್ಲಿ ಹೃದಯ ಕಲಕುವ ಘಟನೆಯೊಂದು ನಡೆದಿದೆ. 12ನೇ ಮಹಡಿಯ ಮನೆಯ ಕಿಟಕಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ನಾಲ್ಕು ವರ್ಷದ ಪುಟ್ಟ ಬಾಲಕಿ ಅನ್ವಿಕಾ ಪ್ರಜಾಪತಿ ಸಾವನ್ನಪ್ಪಿದ್ದಾಳೆ. ಈ ಆಘಾತಕಾರಿ ಘಟನೆ ಬುಧವಾರ ಸಂಜೆ 8 ಗಂಟೆ ಸುಮಾರಿಗೆ ನಡೆದಿದೆ. ಅನ್ವಿಕಾ ಮತ್ತು ಆಕೆಯ ತಾಯಿ ಹೊರಗೆ ಹೋಗಲು ಸಿದ್ಧರಾಗಿದ್ದರು. ಅನ್ವಿಕಾ ವಯಸ್ಕರ ಚಪ್ಪಲಿ ಹಾಕಿಕೊಂಡು ಜಾರಿ ಬಿದ್ದಾಗ, ಆಕೆಯ ತಾಯಿ ಮಗಳನ್ನ ಎತ್ತಿ ಶೂ ಕಪಾಟಿನ ಮೇಲ್ಭಾಗದಲ್ಲಿ ಕೂರಿಸಿದ್ದಾರೆ. ನಂತರ ತಾಯಿ ತಮ್ಮ ಚಪ್ಪಲಿ ಧರಿಸಲು ಮುಂದಾದಾಗ, ಅನ್ವಿಕಾ...