ಭಯ ಇಲ್ಲಾಂದ್ರೆ ಮಕ್ಕಳು ಬುದ್ದಿ ಕಲಿಯುವುದು ಹೇಗೆ? ಅಂತ ಭಯ ಹಿಡಿಸುವುದರ ಮೂಲಕ ಅನೇಕ ಜನ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ನಾನಾ ರೀತಿಗಳಲ್ಲಿ ಹೆದರಿಸುತ್ತಾರೆ, ಬೆದರಿಸುತ್ತಾರೆ. ಮಕ್ಕಳಿಗೆ ಯಾವುದೇ ರೀತಿಯಲ್ಲಿ ಭಯದಿಂದ ಅವರಿಗೆ ಬುದ್ದಿ ಕಲಿಸಲು ಅಥವಾ ತಮ್ಮ ಅಧೀನಕ್ಕೆ ತಂದುಕೊಳ್ಳಲು ಯತ್ನಿಸಿದರೆ ಖಂಡಿತವಾಗಿ ಅದು ಅಲ್ಪ ಕಾಲದ ವಿಧೇಯತೆಯಷ್ಟೇ. ಆ ಹೊತ್ತಿಗೆy ಅವರು ಅಧೀನರಾಗುತ್ತಾರೆ, ಹೇಳಿದ ಮಾತು ಕೇಳುತ್ತಾರೆ. ಆದರೆ ಮಕ್ಕಳ ದೀರ್ಘಕಾಲದ ಬೆಳವಣಿಗೆಗೆ, ಮಾನಸಿಕ ಆರೋಗ್ಯಕ್ಕೆ ಸಮಸ್ಯೆಯಾಗುವುದು ಮಾತ್ರವಲ್ಲದೇ ಈ ವಯಸ್ಕರ ಪ್ರಪಂಚವನ್ನು...