ಗ್ರಾಮ ಪಂಚಾಯತ್ ಸೇವೆಗಳು ನಿಮ್ಮ ವಾಟ್ಸಾಪ್ನಲ್ಲೇ! ‘ಪಂಚಮಿತ್ರ’ ಕ್ರಾಂತಿ ಶುರು! ಕೇಳಲು ಅಚ್ಚರಿಯಾದರೂ ನಿಜ! ಇನ್ಮುಂದೆ ಗ್ರಾಮ ಪಂಚಾಯತ್ ಸೇವೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದು ಬೇಕಿಲ್ಲ. ಕರ್ನಾಟಕ ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗಾಗಿ ಮಹತ್ವದ ಹೆಜ್ಜೆಯಿಟ್ಟಿದೆ – ‘ಪಂಚಮಿತ್ರ’ ವಾಟ್ಸಾಪ್ ಸೇವೆ! ನಿಮ್ಮ ಮನೆಯಲ್ಲೇ ಕುಳಿತು, ಕೆಲವೇ ನಿಮಿಷಗಳಲ್ಲಿ ಪಂಚಾಯತ್ ಸೇವೆಗಳನ್ನು ಪಡೆಯಬಹುದು, ದೂರುಗಳನ್ನು ಸಲ್ಲಿಸಬಹುದು. ಇದೊಂದು ನಿಜವಾದ ಕ್ರಾಂತಿ ಎಂದರೆ ತಪ್ಪಾಗಲಾರದು! ಇದನ್ನು ಓದಿ : ಯೂನಿಯನ್ ಬ್ಯಾಂಕ್ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ...