ಬ್ಯಾಂಕ್ ಲೋನ್ ಅಧಿಕಾರಿಗಳು ಎಂದು ಹೇಳಿ ಮನೆಗೆ ನುಗ್ಗಿ ದರೋಡೆ ಮಾಡಿದ ಖದೀಮರು ! ಏನಿದು ಘಟನೆ ?

ಬ್ಯಾಂಕ್ ಲೋನ್ ಅಧಿಕಾರಿಗಳು ಎಂದು ಹೇಳಿ ಮನೆಗೆ ನುಗ್ಗಿ ದರೋಡೆ ಮಾಡಿದ ಖದೀಮರು ! ಏನಿದು ಘಟನೆ ?

ಶಿವಮೊಗ್ಗ : ಬ್ಯಾಂಕ್ ಲೋನ್ ಅಧಿಕಾರಿಗಳು ಎಂದು ಹೇಳಿ ಬ್ಯಾಂಕ್ ಲೋನ್ ಬಗ್ಗೆ ವಿಚಾರಣೆ ಮಾಡಬೇಕು ಎಂದು ಹೇಳಿ ಮನೆಗೆ ನುಗ್ಗಿ ದರೋಡೆ ಮಾಡಿದ ಘಟನೆ ಶಿವಮೊಗ್ಗದ ಬಿ ಬೀರನಹಳ್ಳಿಯ ಹೊಳೆ ಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಏನಿದು ಘಟನೆ ?

ಬಿ ಬೀರನಹಳ್ಳಿಯ ಹರ್ಷಿತ್ ಕನಕಾನಂದ ಎಂಬ ವ್ಯಕ್ತಿಯು ನೆನ್ನೆ ಬೆಳಿಗ್ಗೆ ತಮ್ಮ ತಾಯಿಯನ್ನು ರೈಲ್ವೆ ಸ್ಟೇಷನ್ ಗೆ ಬಿಟ್ಟು ವಾಪಸ್ ಮನೆಗೆ ಮರಳಿದ್ದಾರೆ. ಆ ಬಳಿಕ ಮನೆಯಲ್ಲಿದ್ದ ತಂದೆ ತಾವು ಶಿವಮೊಗ್ಗಕ್ಕೆ ಹೋಗಿ ಬರುತ್ತೇವೆ ಎಂದು ಹೇಳಿ ಹೋಗಿದ್ದಾರೆ. ತದನಂತರ ಮನೆಯಲ್ಲಿ ಹರ್ಷಿತ್ ಕನಕಾನಂದ ಎಂಬ ವ್ಯಕ್ತಿ ಒಬ್ಬನೇ ಉಳಿದಿದ್ದಾರೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಆ ಸಮಯದಲ್ಲಿ ಯಾರೋ ಇಬ್ಬರು ಅಪರಿಚಿತರು ತಾವು ಬ್ಯಾಂಕ್ ಲೋನ್ ಅಧಿಕಾರಿಗಳು ವಿಚಾರಣೆ ಸಲುವಾಗಿ ಬಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಹರ್ಷಿತ್ ಯಾವ ಬ್ಯಾಂಕ್ ಎಂದು ಕೇಳುವಷ್ಟರಲ್ಲಿ ಎರಡನೇ ವ್ಯಕ್ತಿ ಕುಡಿಯಲು ನೀರು ಕೇಳಿದ್ದಾನೆ. ನೀರು ತರಲು ಹೋದ ಹರ್ಷಿತ್ ಹಿಂದೆಯೇ ಬಂದ ಖದೀಮರು ಹರ್ಷಿತ್ ನನ್ನು ಹಿಡಿದುಕೊಂಡಿದ್ದಾರೆ ನಂತರ ಬಾಯಿಯ ಒಳಗೆ ಬಟ್ಟೆ ತುರುಕಿ, ಹಲ್ಲೆ ನಡೆಸಿ ದುಡ್ಡು ಕೊಡುವಂತೆ ಕೇಳಿದ್ದಾರೆ.

ವಾಡ್ರುಬ್ ರೂಮ್ ಚೆಕ್ ಮಾಡಿ ಅಲ್ಲಿದ್ದ ಬೀಗದ ಕೀ ಗಳನ್ನು ತೆಗೆದುಕೊಂಡು ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಮೊಬೈಲ್ ಬೆದರಿಕೆ ಹಾಕಿ ಒಟ್ಟು 1,13,000/- ರೂ ಮೌಲ್ಯದ ವಸ್ತುಗಳನ್ನ ದೋಚಿಕೊಂಡು ಹೋಗಿದ್ದಾರೆ.

ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.