ಬರ್ತ್‌ಡೇ ಪಾರ್ಟಿ ಸಂಭ್ರಮದಲ್ಲಿದ್ದ ಯುವಕರ ಧಾರುಣ ಅಂತ್ಯ ! ಬೈಕ್ ಅಪಘಾತಕ್ಕೆ ಇಬ್ಬರು ಯುವಕರ ಬಲಿ !

ಬರ್ತ್‌ಡೇ ಪಾರ್ಟಿ ಸಂಭ್ರಮದಲ್ಲಿದ್ದ ಯುವಕರ ಧಾರುಣ ಅಂತ್ಯ ! ಬೈಕ್ ಅಪಘಾತಕ್ಕೆ ಇಬ್ಬರು ಯುವಕರ ಬಲಿ !

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊನ್ನವಿಲೆ ಗ್ರಾಮದ ನಿವಾಸಿಗಳಾದ ರಮೇಶ್ ಮತ್ತು ಚೇತನ್ ರವಿವಾರ (ಡಿ.31) ರ ರಾತ್ರಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಬೈಕ್​​ನಲ್ಲಿ ಭದ್ರಾವತಿಗೆ ತೆರಳುತ್ತಿದ್ದರು. ಆದರೆ ದಾರಿ ಮಧ್ಯೆ ನಡೆದ ಅದೊಂದು ಘೋರ ದುರಂತ ಇವರಿಬ್ಬರ ಪ್ರಾಣ ತೆಗೆದಿದೆ.

ಹುಟ್ಟು ಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಸೀಗೆಬಾಗಿ ಗ್ರಾಮದ ಬಳಿ‌ ನಡೆದಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ರಮೇಶ್ (23), ಚೇತನ್ (23) ಮೃತ ದುರ್ದೈವಿಗಳು. ಹೊನ್ನವಿಲೆ ಗ್ರಾಮದ ನಿವಾಸಿಗಳಾದ ರಮೇಶ್ ಮತ್ತು ಚೇತನ್ ರವಿವಾರ (ಡಿ.31) ರ ರಾತ್ರಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಬೈಕ್​​ನಲ್ಲಿ ಭದ್ರಾವತಿಗೆ ತೆರಳುತ್ತಿದ್ದರು. ಸೀಗೆಬಾಗಿ ಗ್ರಾಮದ ಬಳಿ‌ ಬೊಲೆರೊ ವಾಹನ ಬೈಕ್​​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೊಲೆರೊ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.