ಏರ್ ಗನ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಪುಂಡಾಟ ! ಇಬ್ಬರ ಬಂಧನ  !

ಏರ್ ಗನ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಪುಂಡಾಟ ! ಇಬ್ಬರ ಬಂಧನ !

ಶಿವಮೊಗ್ಗ : ಜಿಲ್ಲೆಯ ಹೆದ್ದಾರಿಯಲ್ಲೇ ಕಾರು ನಿಲ್ಲಿಸಿದ ಇಬ್ಬರು ಯುವಕರು ಗಾಳಿಯಲ್ಲಿ ಏರ್ ಗನ್ ನಿಂದ ಗುಂಡು ಹಾರಿಸಿ ಪುಂಡಾಟ ಮೆರೆದಿದ್ದಾರೆ. ಈ ಘಟನೆ ಸಂಬಂಧ ಪುಂಡಾಟ ಮೆರೆದ ಇಬ್ಬರನ್ನು ಬಂಧಿಸಿ, ಏರ್ ಗನ್, ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ನಗರದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಸಮೀಪದ ಶಿವಮೊಗ್ಗ-ಭದ್ರಾವತಿ ಹೆದ್ದಾರಿಯಲ್ಲಿ ಡಿ.26ರಂದು ಇಬ್ಬರು ಯುವಕರು ಹೆದ್ದಾರಿಯಲ್ಲೇ ಕಾರನ್ನು ನಿಲ್ಲಿಸಿ, ಕುಣಿದಾಡಿದ್ದಾರೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ವೀಡಿಯೋ ವೈರಲ್ ಆಗುತ್ತಿದ್ದಂತೆ, ತುಂಗಾ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಸಿರಗನಹಳ್ಳಿಯ ಹರ್ಷ ಪಟೇಲ್(23) ಹಾಗೂ ಅಜ್ಜಂಪುರದ ಅಭಿಷೇಕ್ (23) ಎಂಬುದಾಗಿ ಗುರುತಿಸಲಾಗಿದೆ. ಈ ಆರೋಪಿಗಳ ವಿರುದ್ಧ ಅಜಾಗರೂಕತೆ ಹಾಗೂ ಬೇಜವಾಬ್ದಾರಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಮ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.