ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಕೇಕ್ ಕತ್ತರಿಸಿ ಹೊಸ ವರ್ಷ ಆಚರಿಸಿದ ಎಸ್ ಪಿ ಮಿಥುನ್ ಕುಮಾರ್ !
ಶಿವಮೊಗ್ಗ : ನಗರದಾದ್ಯಂತ ಹೊಸ ವರ್ಷಾಚರಣೆ ತುಂಬಾ ಸಡಗರ ಸಂಭ್ರಮದಿಂದ ಆಚರಿಸಲಾಯಿತು, ತಡರಾತ್ರಿ 12ಕ್ಕೆ ಶಿವಮೊಗ್ಗ ನಗರದಾದ್ಯಂತ ಪಟಾಕಿ ಸಿಡಿಮದ್ದುಗಳನ್ನು ಹಚ್ಚಿ, ಪಾರ್ಟಿ, ಸಂಗೀತ,ಡಾನ್ಸ್ ಕೇಕ್ ಕತ್ತರಿಸುವ ಮೂಲಕ 2024 ನ್ನು ಬರಮಾಡಿಕೊಳ್ಳಲಾಯಿತು
ಇನ್ನೂ ಹೊಸ ವರ್ಷಾಚರಣೆಯ ನಿಮಿತ್ತ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು ಈ ನಡುವೆ ಶಿವಮೊಗ್ಗ ನಗರದ ಅಮೀರ್ ಅಹಮದ್ ವೃತ್ತದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಶಿವಮೊಗ್ಗ ಎಸ್ ಪಿ ಜಿ ಕೆ ಮಿಥುನ್ ಕುಮಾರ್ ಹೊಸ ವರ್ಷಚರಣೆಯನ್ನು ಆಚರಿಸಿದ್ದಾರೆ.
ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಎಲ್ಲಾ ಪೊಲೀಸ್ ಅಧಿಕಾರಿ / ಸಿಬ್ಬಂದಿಗಳು ಮತ್ತು ಕುಟುಂಬದವರಿಗೂ ಹಾಗೂ ಸಮಸ್ತ ನಾಗರಿಕರಿಗೂ ಹೊಸ ವರ್ಷ 2024 ರ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply