BREAKING NEWS : ಗಾಡಿಕೊಪ್ಪದ ಬಳಿ ರಸ್ತೆ ದಾಟುತ್ತಿದ್ದ ಶಾಲಾ ಬಾಲಕಿಗೆ ಬೈಕ್ ಡಿಕ್ಕಿ ! ಸಿಸಿ ಟಿವಿಯಲ್ಲಿ ಭೀಕರ ದೃಶ್ಯ ಸೆರೆ !
ಶಿವಮೊಗ್ಗ : ನಗರದ ಸಾಗರ ರಸ್ತೆಯ ಗಾಡಿಕೊಪ್ಪದ ಬಳಿ ವೇಗವಾಗಿ ಬಂದ ಬೈಕ್ ರಸ್ತೆ ದಾಟುತ್ತಿದ್ದ ಶಾಲಾ ಬಾಲಕಿಗೆ ಡಿಕ್ಕಿ ಹೊಡೆದಿದೆ.
ಸಿ ಸಿ ಟಿ ವಿ ಯಲ್ಲಿ ಭೀಕರ ದೃಶ್ಯ ಸೆರೆ
ಆಯನೂರು ಕಡೆಯಿಂದ ವೇಗವಾಗಿ ಬಂದ ಆರ್ ಟಿ ಆರ್ ಬೈಕ್ ರಸ್ತೆ ದಾಟುತ್ತಿದ್ದ ಶಾಲಾ ಬಾಲಕಿಗೆ ಡಿಕ್ಕಿ ಹೊಡೆದಿದೆ. ಅತಿಯಾದ ವೇಗದ ಕಾರಣ ಬಾಲಕಿಗೆ ಡಿಕ್ಕಿ ಹೊಡೆದು. ನಂತರ ರಸ್ತೆ ಬದಿ ನಿಂತಿದ್ದ ಪಾದಚಾರಿ ಒಬ್ಬರಿಗೂ ಕೂಡ ಡಿಕ್ಕಿ ಹೊಡೆದು. ರಸ್ತೆ ಬದಿ ನಿಂತಿದ್ದ ಎರಡು ಬೈಕ್ ಗಳಿಗೂ ಡಿಕ್ಕಿ ಹೊಡೆದಿದೆ.
ಇನ್ನು ಅಪಘಾತವಾದ ಬಾಲಕಿಯನ್ನು ಮತ್ತು ಮತ್ತೊಬ್ಬ ಗಾಯಾಳುವನ್ನು ಮೆಗ್ಗಾನ್ ಗೆ ದಾಖಲಿಸಲಾಗಿದ್ದು. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply