ಗೋಪಾಳದ ವಿದ್ಯಾನಿಕೇತನ ಶಾಲೆಯಲ್ಲಿ ಪರಿಸರ ದಿನಾಚರಣೆ.

ಶಿವಮೊಗ್ಗ : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಗೋಪಾಳ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು 

ಮುಖಾ ಮುಖಿ ಎಸ್ ಟಿ ರಂಗ ತಂಡ ರಿ) ಶಿವಮೊಗ್ಗ. ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ,ನೆಹರು ಯುವ ಕೇಂದ್ರ,. ವಿದ್ಯಾನಿಕೇತನ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಗೋಪಾಳ ಶಿವಮೊಗ್ಗ. ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಬುಧವಾರ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಸಸಿಗಳನ್ನು ನೀಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು 

 ಈ ವೇಳೆ ಮಾತನಾಡಿದ  ನೆಹರು ಯುವ ಕೇಂದ್ರದ ಯುವ ಅಧಿಕಾರಿ  ಉಲ್ಲಾಸ್ ಕೆ ಟಿ  ಮಕ್ಕಳಿಗೆ ಪರಿಸರದ ಬಗ್ಗೆ ,ಗಿಡಗಳನ್ನು ಏಕೆ ನೆಡಬೇಕು ಅದರಿಂದಾಗುವ ಪ್ರಯೋಜನಗಳು, ಗಿಡ,ಮರಗಳು ನಮಗೆ ನೀಡಿರುವ ಕೊಡುಗೆಗಳು ಹಾಗೂ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಸವಿವರವಾಗಿ ತಿಳಿಸಿದರು

ಈ ವೇಳೆ ನೆಹರು ಯುವ ಕೇಂದ್ರದ ಸಂಯೋಜನಾಧಿಕಾರಿ ಉಲ್ಲಾಸ್ ಕೆ ಟಿ . ಮಂಜು ರಂಗಾಯಣ ರಂಗ ನಿರ್ದೇಶಕರು ಮಹೇಂದ್ರ ಚಾರ್ಟೆಡ್ ಅಕೌಂಟ್. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾಸಂಸ್ಥೆಯ ಆಡಳಿತ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು 

ವರದಿ : ಲಿಂಗರಾಜ್ ಗಾಡಿಕೊಪ್ಪ 

ಇದನ್ನೂ ಓದಿ  : ದ್ವಿತೀಯ ಪಿಯುಸಿ ಪಾಸಾದವರಿಗೆ ಸುವರ್ಣವಕಾಶ ! ಭಾರತೀಯ ವಾಯುಪಡೆಯಲ್ಲಿ ಉದ್ಯೋಗ ! ಅರ್ಜಿ ಆಹ್ವಾನ !

 


Leave a Reply

Your email address will not be published.