ಇಂದು ಪರಿಷತ್ ಫಲಿತಾಂಶ ! ಮತ ಎಣಿಕೆ ಕಾರ್ಯ ಆರಂಭ ! ಚಿಂತಕರ ಚಾವಡಿಗೆ ಸೇರೋದ್ಯಾರು ?

ಶಿವಮೊಗ್ಗ : ಲೋಕಸಭಾ ಚುನಾವಣೆಯ ನಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾವೇರಿದ ನೈರುತ್ಯ ಪದವಿಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಇದೇ ಜೂನ್ 3ರಂದು ನಡೆದಿತ್ತು, ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಆರು ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಜೂನ್ 6 ರ ಗುರುವಾರ ಅಂದರೆ ಇಂದು ಪ್ರಕಟವಾಗುತ್ತದೆ, ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ಮಕ್ಕಳ ತಜ್ಞ ಡಾ ಧನಂಜಯ ಸರ್ಜಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್, ಇನ್ನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಎಸ್ಪಿ ದಿನೇಶ್, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ರಘುಪತಿ ಭಟ್ ಕಣಕ್ಕಿಳಿದ್ದು ಚುನಾವಣಾ ಕಣವನ್ನ ರಂಗೆರಿಸಿದ್ದರು, ಎರಡು ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟಿದ್ದು, ಮೇಲ್ಮನೆ ವಿಧಾನ ಪರಿಷತ್ ನ ಚಿಂತಕರ ಚಾವಡಿಗೆ ಸೇರೋದ್ ಯಾರು ಎಂಬುದು ಇಂದು ನಿರ್ಧಾರವಾಗುತ್ತದೆ 

ಇನ್ನು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾದ ಎಸ್ ಎಲ್ ಬೋಜೆಗೌಡ ಎನ್ ಡಿ ಎ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ, ಕೆಕೆ ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರೂ, ಇಂದು ಈ ಘಟಾನುಘಟಿ ನಾಯಕರ ಭವಿಷ್ಯ ನಿರ್ಧಾರವಾಗಲಿದೆ 

 ಇದೆ ಜೂನ್ 3ರಂದು ವಿಧಾನ ಪರಿಷತ್ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಆರು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶದ ಮತ ಎಣಿಕೆ ಕಾರ್ಯ ಈಗಾಗಲೇ ಆರಂಭಗೊಂಡಿದೆ, ಪ್ರಾಶಸ್ತ್ಯವಾರು ಮತಗಳ ಎಣಿಕೆ ನಡೆಯಲಿದ್ದು, ಪ್ರತಿ ಕ್ಷೇತ್ರಗಳಿಗೆ 14 ಟೇಬಲ್‌, ಓರ್ವ ಚುನಾವಣಾಧಿಕಾರಿ ಟೇಬಲ್‌ ಹಾಕಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬ ಮೇಲ್ವಿಚಾರಕರು, ಇಬ್ಬರು ಸಾಹಯಕರು ಇರಲಿದ್ದಾರೆ. ಪ್ರತಿ ಟೇಬಲ್‌ಗೆ ಅಭ್ಯರ್ಥಿಗಳ ಪರ ಏಜೆಂಟ್‌ ನೇಮಿಸಲಾಗಿದೆ, ಸಂಜೆಯ ಒಳಗಡೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ

ವರದಿ : ಲಿಂಗರಾಜ್ ಗಾಡಿಕೊಪ್ಪ 

ಇದನ್ನೂ ಓದಿ  : ಲೋಕಸಭಾ ಫಲಿತಾಂಶದ ಬಳಿಕ ಗೀತಾ ಶಿವರಾಜ್ ಕುಮಾರ್ ಫಸ್ಟ್ ರಿಯಾಕ್ಷನ್ ! ಏನಂದ್ರು ಗೀತಕ್ಕ ?


Leave a Reply

Your email address will not be published.