ಜಮೀನಿನಲ್ಲಿ ಮಣ್ಣು ತೆಗೆಯುವ ವಿಚಾರದಲ್ಲಿ ಮಾರಾಮಾರಿ ! ಮಚ್ಚಿನಿಂದ ಹಲ್ಲೆ ! ಮೆಗ್ಗಾನ್ ಆವರಣದಲ್ಲಿಯೇ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು !

ನ್ಯಾಮತಿ : ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೋಗಿಲು ಗ್ರಾಮದಲ್ಲಿ ಸರ್ವೇ ನಂಬರ್ 106 ರ ಬಗುರ್ ಹುಕುಂ ಜಮೀನಿನಲ್ಲಿ ಮಣ್ಣು ತೆಗೆಯುವ ವಿಚಾರದಲ್ಲಿ ಸಂಬಂಧಿಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ನಡೆದಿದೆ

ಸರ್ವೇ ನಂಬರ್ 106 ರಲ್ಲಿರುವ ಒಂದು ಎಕರೆ ಎಂಟು ಗುಂಟೆ ಜಮೀನಿನಲ್ಲಿ ಸೈನ್ಯನಾಯ್ಕ್ ಎಂಬ ವ್ಯಕ್ತಿ ಸೇರಿದಂತೆ ಮತ್ತಿದ್ದರೂ ಜಮೀನಿನಲ್ಲಿ ಮಣ್ಣು ತೆಗೆಯಲು ಮುಂದಾಗಿದ್ದಾರೆ, ಈ ವೇಳೆ ಸೈನ್ಯ ನಾಯ್ಕ್ ದೊಡ್ಡಪ್ಪನ ಮಕ್ಕಳಾದ ಗಿರೀಶ್ ನಾಯ್ಕ್ ಎಂಬುವ ವ್ಯಕ್ತಿ ಇದನ್ನ ತಡೆಯಲು ಮುಂದಾಗಿದ್ದಾನೆ ಈ ಘಟನೆ ನಾಲ್ಕು ದಿನದ ಹಿಂದೆ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು 

 ಇದೇ ವಿಚಾರಕ್ಕೆ ಇಂದು ಸೈನ್ಯ ನಾಯ್ಕ್, ಶ್ರೀಧರ್ ನಾಯ್ಕ್, ಚಿನ್ನಾ ನಾಯ್ಕ್, ಸುಶೀಲಾ ಬಾಯಿ ಎಂಬುವವರು ಹರೀಶ್ ಮತ್ತು ಗಿರೀಶ್ ನಾಯ್ಕ್ ರನ್ನು ಜಮೀನಿಗೆ ಕರೆಸಿಕೊಂಡು ಮುಚ್ಚಿನಿಂದ ಹಲ್ಲೆ ಮಾಡಲಾಗಿದೆ, ಹರೀಶ್ ಗೆ ಕಾಲು ಮುರಿದಿದ್ದು, ಗಿರೀಶ್ ಎಂಬತನ ತಲೆಗೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ, ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಗ್ಗಾನ್ ನಲ್ಲಿಯೇ ಆರೋಪಿಗಳು ಪೋಲೀಸರ ವಶ ! 

ಗಾಯಾಳು ಗಿರೀಶ್ ಮತ್ತು ಹರೀಶ್ ನಾಯಕ್ ಎಂಬುವರನ್ನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲ್ಲೆ ಮಾಡಿದ್ದವ ಮೆಗ್ಗನ್ ಗೆ ದಾಖಲಾಗಲು ಬಂದಾಗ ಶ್ರೀಧರ್ ನಾಯಕ್ ಎಂಬಾತನನ್ನು ನ್ಯಾಮತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 

ಇದನ್ನೂ ಓದಿ  : ತಪ್ಪು ಮಾಡದೆಯೇ ಶಿವಮೊಗ್ಗ ಜೈಲು ಸೇರಿದ ನಾಗಪ್ಪ !


Leave a Reply

Your email address will not be published.