ಶಿವಮೊಗ್ಗ : ಈ ಹಿಂದೆ ವಾಹನಗಳಲ್ಲಿ ಮನೆಗಳಿಗೆ ಹಾವುಗಳು ನುಗ್ಗಿರೋದನ್ನು ನೋಡಿದಿದ್ದೇವೆ ಆದರೆ ಶಿವಮೊಗ್ಗದಲ್ಲಿ ನಾಗರಹಾವೊಂದು ಸೀದಾ ಜೈಲಿನೊಳಗೆ ನುಗ್ಗಿದ ಘಟನೆ ನಡೆದಿದೆ.
ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ನುಗ್ಗಿದೆ. ಹಾವು ಸಂಚರಿಸುದನ್ನು ಗಮನಿಸಿದ ಜೈಲಿನ ಸಿಬ್ಬಂದಿ ಕೂಡಲೇ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಠಾಣಾ ಸಿಬ್ಬಂದಿಯ ಚಲನವಲನ ನೋಡಿ ಹೆದರಿದ ನಾಗಪ್ಪ ನೇರವಾಗಿ ಜೈಲಿನ ಕೋಣೆಯ ಬಾಗಿಲನ್ನು ಏರಿ ಕುಳಿತಿತ್ತು. ಕೂಡಲೇ ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಕರೆಮಾಡಿ ವಿಷಯ ತಿಳಿಸಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಹಾವನ್ನು ರಕ್ಷಣೆ ಮಾಡಿ ಸೂಕ್ತ ಸ್ಥಳಕ್ಕೆ ಬಿಡಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ



Leave a Reply