ಬೆಂಗಳೂರು: ಅಸ್ಸಾಂ ಮೂಲದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ಇನ್ಸ್ಟಾಗ್ರಾಂನಲ್ಲಿ ಬೇಬಿ ಡಾಲ್ ಅರ್ಚಿ’ ಎಂದೇ ಖ್ಯಾತಿ ಪಡೆದಿರುವ ಅರ್ಚಿತಾ ಫುಕಾನ್, ಅಮೆರಿಕದಲ್ಲಿ ನೀಲಿಚಿತ್ರಗಳ ಉದ್ಯಮಕ್ಕೆ (ಪೋರ್ನ್ ಇಂಡಸ್ಟ್ರಿ) ಕಾಲಿಟ್ಟಿದ್ದಾರೆ ಎಂಬ ವರದಿಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಸದ್ಯಕ್ಕೆ ‘ಬೇಬಿ ಡಾಲ್ ಅರ್ಚಿ’ ಹಾಗೂ ‘ಅರ್ಚಿತಾ ಫುಕಾನ್’ ಹೆಸರುಗಳು ಇಂಟರ್ನೆಟ್ನಲ್ಲಿ, ಅದರಲ್ಲೂ ಸರ್ಚ್ ಎಂಜಿನ್ಗಳಲ್ಲಿ ಹೆಚ್ಚು ಹುಡುಕಾಟಕ್ಕೊಳಗಾಗುತ್ತಿವೆ.
ಕೆಂಡ್ರಾ ಲಸ್ಟ್ ಜೊತೆ ಫೋಟೋ ವೈರಲ್:
ಈ ಚರ್ಚೆಗೆ ಮುಖ್ಯ ಕಾರಣವೆಂದರೆ, 30 ವರ್ಷದ ಅರ್ಚಿತಾ ಫುಕಾನ್ ಅಮೆರಿಕದ ಖ್ಯಾತ ನೀಲಿಚಿತ್ರಗಳ ತಾರೆ ಕೆಂಡ್ರಾ ಲಸ್ಟ್ (Kendra Lust) ಅವರ ಜೊತೆ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವುದು. ಈ ಫೋಟೋ ಇಂಟರ್ನೆಟ್ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ‘ಅಸ್ಸಾಂ ಮೂಲದ ಚೆಲುವೆ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿ’ ಎಂಬ ಸುದ್ದಿಗಳಿಗೆ ಕಾರಣವಾಗಿದೆ.
ಅರ್ಚಿತಾ ಅವರ ಪೋಸ್ಟ್ ಏನಿದೆ?
“ಮೊದಲ ಬಾರಿಗೆ ಕೆಂಡ್ರಾಳನ್ನು ಭೇಟಿಯಾದದ್ದು ನಿಜಕ್ಕೂ ಮರೆಯಲಾಗದ ಅನುಭವ. ಅವರ ಆತ್ಮವಿಶ್ವಾಸ, ವೃತ್ತಿಪರತೆ ಮತ್ತು ಯಶಸ್ಸಿನಿಂದ ನಾನು ಪ್ರೇರಿತಳಾದೆ. ಅವರು ಒಬ್ಬ ಪ್ರೋತ್ಸಾಹದಾಯಕರು ಮತ್ತು ಉತ್ತಮ ಜೀವನದತ್ತ ಹೋಗುವ ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು. ಅಂತಹ ತಾರೆಯ ಸಂಪರ್ಕ ಸಾಧಿಸಲು ಮತ್ತು ಕಲಿಯಲು ಅವಕಾಶ ನೀಡಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ” ಎಂದು ಅರ್ಚಿತಾ ಫುಕಾನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ, “ನಾನು ಪ್ಲೇಬಾಯ್ ಮ್ಯಾಗ್ಜಿನ್, ವೆಬ್ಸೈಟ್ಗೆ (ವಯಸ್ಕರರಿಗೆ ಮೀಸಲಾಗಿರುವ) ಒಳಉಡುಪುಗಳ ಮಾಡೆಲ್ ಆಗಿ ಆಯ್ಕೆಯಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಆರ್ಸಿಬಿ ಅಭಿಮಾನಿ ‘ಬೇಬಿ ಡಾಲ್ ಅರ್ಚಿ’:
ಇನ್ಸ್ಟಾಗ್ರಾಂನಲ್ಲಿ 7.11 ಲಕ್ಷ ಫಾಲೋವರ್ಗಳನ್ನು ಹೊಂದಿರುವ ಅರ್ಚಿತಾ ಫುಕಾನ್, ಅಮೆರಿಕದ ಮಿಚಿಗನ್ನಲ್ಲಿ ನೆಲೆಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಹಾಗೂ ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ಬೋಲ್ಡ್ ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ಇವರು, ಐಪಿಎಲ್ನ ಆರ್ಸಿಬಿ ಜರ್ಸಿಯಲ್ಲಿರುವ ಫೋಟೋಗಳನ್ನು ಸಹ ಪೋಸ್ಟ್ ಮಾಡಿ, ತಾನೊಬ್ಬ ಆರ್ಸಿಬಿ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ತಾನು ಅಸ್ಸಾಂ ಮೂಲದವಳು, ನಂತರ ದೆಹಲಿಗೆ ಬಂದಿದ್ದೆ, ಸದ್ಯ ಅಮೆರಿಕದಲ್ಲಿ ನೆಲೆಸಿದ್ದೇನೆ ಎಂದೂ ತಿಳಿಸಿದ್ದಾರೆ.
ಎ.ಐ. ಜನರೇಟೆಡ್ ಫೋಟೋಗಳ ಅನುಮಾನ:
ಆದಾಗ್ಯೂ, ಕೆಂಡ್ರಾ ಲಸ್ಟ್ ಜೊತೆ ಅರ್ಚಿತಾ ಹಂಚಿಕೊಂಡಿರುವ ಪೋಸ್ಟ್ನ ಸತ್ಯಾಸತ್ಯತೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಇದು ಎ.ಐ. (ಕೃತಕ ಬುದ್ಧಿಮತ್ತೆ) ಜನರೇಟೆಡ್ ಆಗಿರಲೂಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅರ್ಚಿತಾ ಫುಕಾನ್ ಎಂಬ ವ್ಯಕ್ತಿ ಇರುವುದು ನಿಜವಾದರೂ, ಕೆಲವು ಇಮೇಜ್ಗಳು ಎಐ ಜನರೇಟೆಡ್ ಎಂದು ಎಕ್ಸ್ನ Grok (ಎಐ) ಹೇಳಿದೆ ಎಂದು ಲೇಟೆಸ್ಟ್ಲಿ ವೆಬ್ಸೈಟ್ ವರದಿ ಮಾಡಿದೆ.
ಅಮೆರಿಕ ಮತ್ತು ಕೆನಡಾದಲ್ಲಿ ಪೋರ್ನ್ ಇಂಡಸ್ಟ್ರಿ ಒಂದು ದೊಡ್ಡ ಉದ್ಯಮವಾಗಿದೆ. ಅರ್ಚಿತಾ ಅವರ ಈ ನಡೆ ನಿಜವೇ ಅಥವಾ ಕೇವಲ ಸಾಮಾಜಿಕ ಮಾಧ್ಯಮದ ಪ್ರಚಾರದ ತಂತ್ರವೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಜಾಹಿರಾತು:

ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನೆಲ್ ವೀಕ್ಷಿಸುತ್ತಿರಿ ಹಾಗೂ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ!
ಇದನ್ನು ಓದಿ : ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್ಪ್ರೆಸ್ನ್ಯೂಸ್ ವಿಶೇಷ ವರದಿ! ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ
ಜಾಹಿರಾತು:


WhatsApp Number : 7795829207




Leave a Reply