ನಾಳೆ ನ್ಯಾಯಮೂರ್ತಿ ಎ. ಜೆ ಸದಾಶಿವ ಆಯೋಗ ವರದಿ ರದ್ದು ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ, ಶಿವಮೊಗ್ಗ : ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಅವೈಜ್ಞಾನಿಕ ವರದಿಯನ್ನು ತಕ್ಷಣವೇ ರದ್ದುಪಡಿಸಲು ಆಗ್ರಹಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟ(ಬಂಜಾರ, ಬೋವಿ, ಕೊರಮ, ಕೊರಚ ಸಮುದಾಯ) ಡಿ.14ರಂದು ಬೆಳಿಗ್ಗೆ 11ಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ವೈ. ನಾನ್ಯನಾಯ್ಕ ಹೇಳಿದರು. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಹಿಂದಿನ ಸರ್ಕಾರದಿಂದ ತಿರಸ್ಕರಸಲ್ಪಟ್ಟಿರುವ ಈ ಆಯೋಗದ ವರದಿಯನ್ನು ಈಗಿನ ಸರ್ಕಾರದ ಕೆಲವು ಸಚಿವರು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯ ಮಾಡುತ್ತಿದ್ದಾರೆ. ಒಂದು ಸಮುದಾಯವನ್ನು ಮುಂದಿಟ್ಟುಕೊಂಡು ಬಂಜಾರ, ಬೋವಿ, ಕೊರಮ, ಕೊರಚ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದಲೇ ಪ್ರತ್ಯೇಕಿಸುವ ಹುನ್ನಾರ ನಡೆದಿದೆ. ಈ ವರದಿ ಅನುಷ್ಠಾನಗೊಂಡರೆ ನಮ್ಮ ಸಮುದಾಯಗಳು ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂದರು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ...
ಭದ್ರತಾ ಲೋಪ: ಲೋಕಸಭಾ ಸದನದೊಳಗೆ ನುಗ್ಗಿದ್ದು ಮೈಸೂರಿನ ಯುವಕ, ಮೈಸೂರು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆ !
ಭದ್ರತಾ ಲೋಪ: ಲೋಕಸಭಾ ಸದನದೊಳಗೆ ನುಗ್ಗಿದ್ದು ಮೈಸೂರಿನ ಯುವಕ, ಮೈಸೂರು ಸಂಸದ ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆ ! ದೆಹಲಿ : ಲೋಕಸಭಾ ಕಲಾಪ ನಡೆಯುತ್ತಿರುವ ವೇಳೆ ಏಕಾಏಕಿ ಇಬ್ಬರು ಯುವರು ನುಗ್ಗಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಿಂದ ಸ್ಪೀಕರ್ ಕುರ್ಚಿಯತ್ತ ಓಡಿ ಹೋಗಿದ್ದಾರೆ. ಸದನದೊಳಗೆ ನುಗ್ಗಿದ ಯುವಕರನ್ನು ಸಾಗರ್ ಹಾಗೂ ಮನೋರಂಜನ್ ಎಂದು ಗುರುತಿಸಲಾಗಿದ್ದು, ಮನೋರಂಜನ್ ಮೈಸೂರು ಮೂಲದವನು ಎಂದು ತಿಳಿದುಬಂದಿದೆ. ಇನ್ನು ಇತ್ತ ಮೈಸೂರಿನ ವಿಜಯನಗರದಲ್ಲಿರುವ ಮನೋರಂಜನ್ ನಿವಾಸಕ್ಕೆ ಪೊಲೀಸರು ದೌಡಾಯಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಎಸಿಪಿ ಗಜೇಂದ್ರ ಪ್ರಸಾದ್, ವಿಜಯನಗರ ಪಿಐ ಸುರೇಶ್ ಭೇಟಿ ನೀಡಿ ಮನೋರಂಜನ್ ತಂದೆ ದೇವರಾಜೇಗೌಡ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮನೋರಂಜನ್ ಅವರ ತಂದೆ ದೇವರಾಜೇಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮನೋರಂಜನ್ ಬಿಇ ಮುಗಿಸಿದ್ದ, ನನ್ನ ಮಗನಿಗೆ ಬಿಇ ಸೀಟ್ ಕೊಡಿಸಿದ್ದು ಹೆಚ್.ಡಿ.ದೇವೇಗೌಡರು. ದೆಹಲಿ, ಬೆಂಗಳೂರಿಗೆ ಓಡಾಡುತ್ತಿದ್ದ. ಆದರೆ ಪುತ್ರ ಮನೋರಂಜನ್ ಎಲ್ಲಿಗೆ ಹೋಗಿದ್ದಾನೆಂದು ಗೊತ್ತಿಲ್ಲ. ನಾವು ಯಾವ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ನನ್ನ ಪುತ್ರ ಯಾಕೆ ಈ...
NATIONAL NEWS : ಲೋಕಸಭೆಯಲ್ಲಿ ಭದ್ರತಾ ಲೋಪ ! ಕಲಾಪ ನಡೆಯುವಾಗಲೇ ಸದನದ ಒಳಗಡೆ ನುಗ್ಗಿದ ಅಪರಿಚಿತರು !
NATIONAL NEWS : ಲೋಕಸಭೆಯಲ್ಲಿ ಭದ್ರತಾ ಲೋಪ ! ಕಲಾಪ ನಡೆಯುವಾಗಲೇ ಸದನದ ಒಳಗಡೆ ನುಗ್ಗಿದ ಅಪರಿಚಿತರು ! ದೆಹಲಿ : ಅಧಿವೇಶನ ನಡೆಯುತ್ತಿರುವಾಗಲೇ ಸಂಸತ್‌ನಲ್ಲಿ ಭದ್ರತಾ ಲೋಪ ನಡೆದಿದೆ. ಲೋಕಸಭಾ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ವ್ಯಕ್ತಿ ಮೇಲಿನಿಂದ ಜಿಗಿದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಇಬ್ಬರನ್ನು ಹಿಡಿದಿದ್ದಾರೆ. ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು. ಈಗ ಬಂದಿರುವ ಮಾಹಿತಿ ಪ್ರಕಾರ ಒಟ್ಟು ಎರಡು ಘಟನೆ ನಡೆದಿದೆ. ಇಬ್ಬರು ಅನಾಮಿಕ ವ್ಯಕ್ತಿಗಳು ಲೋಕಸಭೆ ಗ್ಯಾಲರಿಯಿಂದ ಜಿಗಿದು ಕಲರ್ ಬಾಂಬ್ ಸಿಡಿಸಿದರೆ, ಇಬ್ಬರು ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಈಗ ನಾಲ್ವರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ. ಸಂಸತ್ ಒಳ ಪ್ರವೇಶಕ್ಕೆ ಪಾಸ್ ಇಲ್ಲದೇ ಯಾರನ್ನು ಬಿಡಲ್ಲ. ಹೀಗಿರುವಾಗ ಇಷ್ಟೊಂದು ದೊಡ್ಡ ಮಟ್ಟದ ಭದ್ರತಾ ಲೋಪ ನಡೆದಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ನಾಲ್ವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು...
ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆ !
ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆ ! ಹೊನ್ನಾಳಿ : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಅಂಬೇಡ್ಕರ್ ಹೊಸ ಬಡಾವಣೆ ಸಮೀಪ ನವಜಾತ ಹೆಣ್ಣು ಶಿಶುವಿನ ಮೃತ ದೇಹ ಪತ್ತೆಯಾಗಿದೆ. ಬೆಳಿಗ್ಗೆ ಸುಮಾರು 8 ಗಂಟೆ ಸಮಯದಲ್ಲಿ ನವಜಾತ ಹೆಣ್ಣು ಶಿಶುವಿನ ಮೃತ ದೇಹ ಪತ್ತೆಯಾಗಿದ. ಹೆರಿಗೆಯಾದ ನಂತರ ನವಜಾತ ಹೆಣ್ಣು ಶಿಶುವನ್ನು ಹತ್ಯೆ ಮಾಡಿ ಬಿಟ್ಟು ಹೋಗಲಾಗಿದೆ ಎಂಬ ಸಂಕೆ ವ್ಯಕ್ತವಾಗಿದೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಸಾಸ್ವೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಾಸ್ವೆಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಶಿವಮೊಗ್ಗ ಎಕ್ಸ್ ಪ್ರೆಸ್ ನ್ಯೂಸ್ ಗೆ ಲಭ್ಯವಾಗಿದೆ ವರದಿ : ನಾಗರಾಜ್ ಬಿ ಆರ್, ಕ್ಯಾಸಿನಕೆರೆ
ಶಿವಮೊಗ್ಗದಲ್ಲಿ ವಾಹನ ಸವಾರರೇ ಎಚ್ಚರ ! ಮೂರೇ ತಿಂಗಳಲ್ಲಿ 70 ಸಾವಿರ ಪ್ರಕರಣ ! ಬರೋಬ್ಬರಿ 4.84 ಕೋಟಿ ದಂಡ !
ಶಿವಮೊಗ್ಗದಲ್ಲಿ ವಾಹನ ಸವಾರರೇ ಎಚ್ಚರ ! ಮೂರೇ ತಿಂಗಳಲ್ಲಿ 70 ಸಾವಿರ ಪ್ರಕರಣ ! ಬರೋಬ್ಬರಿ 4.84 ಕೋಟಿ ದಂಡ ! ಶಿವಮೊಗ್ಗ : ನಗರದಲ್ಲಿ ಸ್ಮಾರ್ಟ್‌ಸಿಟಿಯ ಐಟಿಎಂಎಸ್(ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಮೂಲಕ ಆ.28ರಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಸ್ಮಾರ್ಟ್‌ಸಿಟಿ ಸಹಯೋಗದಲ್ಲಿ ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದ ಮೂರೇ ತಿಂಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಬರೋಬ್ಬರಿ 4.84 ಕೋಟಿ ರೂ. ವಿಧಿಸಿದ್ದು, 70 ಸಾವಿರ ಸವಾರರ ಮನೆ ಬಾಗಿಲಿಗೆ ಹೆಲ್ಮಟ್ ಧರಿಸದೇ ಓಡಿಸುವುದು, ಮದ್ಯ ಸೇವಿಸಿ ವಾಹನ ಚಲಾವಣೆ, ಅಜಾಗಕರೂಕತೆ ಮತ್ತು ಅತಿವೇಗ ತಡೆ ಸೇರಿದಂತೆ ವಿವಿಧ ಬಗೆಯ ಸಂಚಾರ ನಿಯಮ ಉಲ್ಲಂಘನೆಯ ನೋಟಿಸ್‌ಗಳು ರವಾನೆಯಾಗಿವೆ. ಶಿವಮೊಗ್ಗದಲ್ಲಿ ಪೊಲೀಸರೇ ರಸ್ತೆ ಬದಿ ಅಥವಾ ಪ್ರಮುಖ ವೃತ್ತಗಳಲ್ಲಿ ವಾಹನಗಳ ತಪಾಸಣೆ ಮಾಡಿ ದಂಡ ವಿಧಿಸುತ್ತಿದ್ದರು. ಇದೀಗ ನಗರಾದ್ಯಂತ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮೆರಾಗಳ ಕಣ್ಗಾವಲಿರಿಸಿದ್ದು ಸಂಚಾರ ನಿಯಮ ಪಾಲಿಸದಿದ್ದಕ್ಕೆ ನವೆಂಬರ್...
ಬ್ಯಾಂಕ್ ಲೋನ್ ಅಧಿಕಾರಿಗಳು ಎಂದು ಹೇಳಿ ಮನೆಗೆ ನುಗ್ಗಿ ದರೋಡೆ ಮಾಡಿದ ಖದೀಮರು ! ಏನಿದು ಘಟನೆ ?
ಬ್ಯಾಂಕ್ ಲೋನ್ ಅಧಿಕಾರಿಗಳು ಎಂದು ಹೇಳಿ ಮನೆಗೆ ನುಗ್ಗಿ ದರೋಡೆ ಮಾಡಿದ ಖದೀಮರು ! ಏನಿದು ಘಟನೆ ? ಶಿವಮೊಗ್ಗ : ಬ್ಯಾಂಕ್ ಲೋನ್ ಅಧಿಕಾರಿಗಳು ಎಂದು ಹೇಳಿ ಬ್ಯಾಂಕ್ ಲೋನ್ ಬಗ್ಗೆ ವಿಚಾರಣೆ ಮಾಡಬೇಕು ಎಂದು ಹೇಳಿ ಮನೆಗೆ ನುಗ್ಗಿ ದರೋಡೆ ಮಾಡಿದ ಘಟನೆ ಶಿವಮೊಗ್ಗದ ಬಿ ಬೀರನಹಳ್ಳಿಯ ಹೊಳೆ ಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಏನಿದು ಘಟನೆ ? ಬಿ ಬೀರನಹಳ್ಳಿಯ ಹರ್ಷಿತ್ ಕನಕಾನಂದ ಎಂಬ ವ್ಯಕ್ತಿಯು ನೆನ್ನೆ ಬೆಳಿಗ್ಗೆ ತಮ್ಮ ತಾಯಿಯನ್ನು ರೈಲ್ವೆ ಸ್ಟೇಷನ್ ಗೆ ಬಿಟ್ಟು ವಾಪಸ್ ಮನೆಗೆ ಮರಳಿದ್ದಾರೆ. ಆ ಬಳಿಕ ಮನೆಯಲ್ಲಿದ್ದ ತಂದೆ ತಾವು ಶಿವಮೊಗ್ಗಕ್ಕೆ ಹೋಗಿ ಬರುತ್ತೇವೆ ಎಂದು ಹೇಳಿ ಹೋಗಿದ್ದಾರೆ. ತದನಂತರ ಮನೆಯಲ್ಲಿ ಹರ್ಷಿತ್ ಕನಕಾನಂದ ಎಂಬ ವ್ಯಕ್ತಿ ಒಬ್ಬನೇ ಉಳಿದಿದ್ದಾರೆ. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು...
ಶಿವಮೊಗ್ಗ ಶಾಸಕರು ಉತ್ತರ ಕರ್ನಾಟಕದ ವಿರೋಧಿಗಳು ಚನ್ನಬಸಪ್ಪ ವಿರುದ್ದ ಲಕ್ಶ್ಮಣ ಸವದಿ ವಾಗ್ದಾಳಿ
ಶಿವಮೊಗ್ಗ ಶಾಸಕರು ಉತ್ತರ ಕರ್ನಾಟಕದ ವಿರೋಧಿಗಳು ಚನ್ನಬಸಪ್ಪ ವಿರುದ್ದ ಲಕ್ಶ್ಮಣ ಸವದಿ ವಾಗ್ದಾಳಿ ಬೆಳಗಾವಿ: ‘ಬೆಳಗಾವಿ ಜಿಲ್ಲೆಯಲ್ಲಿನ ಕಬ್ಬು ಬೆಳೆಗಾರರಿಗೆ ಅವಮಾನ ಮಾಡುತ್ತಿದ್ದೀರಿ. ಈ ಭಾಗದ ಜನತೆಗೆ ನಿಮ್ಮನ್ನ ಕಬ್ಬಿನಿಂದಲೇ ಹೊಡೆದುಹಾಕುತ್ತಾರೆ. ನಿಮಗೆ ಏನಾದರೂ ಮಾನ-ಮಾರ್ಯದೆ ಇದೆಯಾ?’ ಎಂದು ಕಾಂಗ್ರೆಸ್ ಸದಸ್ಯ ಲಕ್ಷ್ಮಣ್ ಸವದಿ, ಬಿಜೆಪಿ ಸದಸ್ಯ ಚನ್ನಬಸಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಮಂಗಳವಾರ ವಿಧಾನಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚೆಯ ವೇಳೆ ಲಕ್ಷ್ಮಣ್ ಸವದಿ ಮಾತನಾಡುತ್ತಿದ್ದ ವೇಳೆ, ಸದನದ ಬಾವಿಗಿಳಿದು ಧರಣಿ ನಡೆಸಿ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ್ದರಿಂದ ಕೆರಳಿ ಅವರು, ‘ಶಿವಮೊಗ್ಗದ ಶಾಸಕರು ಹೆಂಗೆ ಕೂಗಾಡುತ್ತಾರೆ ನೋಡಿ. ಇವರಿಗೆ ಬೀಗ ಕೊಟ್ಟು ಯಾರು ಕಳುಹಿಸಿದ್ದಾರೆಂಬುದು ಗೊತ್ತಿದೆ’ ಎಂದು ಛೇಡಿಸಿದರು. ‘ನಿಮ್ಮ ಜನ್ಮಕ್ಕೆ ನಾಚಿಗೆಯಾಗಬೇಕು. ನಿಮ್ಮನ್ನು ಕಬ್ಬಿನಿಂದಲೇ ರೈತರು ಹೊಡೆದುಹಾಕುತ್ತಾರೆ. ಶಿವಮೊಗ್ಗದವರು ಉತ್ತರ ಕರ್ನಾಟಕ ವಿರೋಧಿಗಳು’ ಎಂದು ಬಿಜೆಪಿ ಸದಸ್ಯ ಚನ್ನಬಸಪ್ಪ ವಿರುದ್ಧ ಲಕ್ಷ್ಮಣ್ ಸವದಿ ಕಿಡಿಕಾರಿದರು. ಸ್ಪೀಕರ್ ಯು.ಟಿ.ಖಾದರ್ ಸಮಾಧಾನ ಮಾಡಲು ಪ್ರಯತ್ನಿಸಿದರೂ, ಪ್ರಯೋಜನವಾಗಲಿಲ್ಲ....
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ ! ಹುದ್ದೆ ಏನು ? ಅರ್ಹತೆಗಳೇನು ?
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ ! ಹುದ್ದೆ ಏನು ? ಅರ್ಹತೆಗಳೇನು ? ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶಕ್ಕಾಗಿ ಹಲವರು ಇವತ್ತಿಗೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಡುವೆ ವಿಮಾನ ನಿಲ್ದಾಣದ ಉಸ್ತುವಾರಿ ನೋಡಿಕೊಳ್ಳುವ; ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಒಂದು ಹುದ್ದೆಯನ್ನು ಭರ್ತಿ ಮಾಡುವ ಸಲುವಾಗಿ ನೇರ ಸಂದರ್ಶನಕ್ಕೆ ಬರುವಂತೆ ಆಹ್ವಾನಿಸಿದೆ. ಆಸಕ್ತರು ಡಿಸೆಂಬರ್ 19ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. 1 ವರ್ಷದ ಅವಧಿ (ಗುತ್ತಿಗೆ ಆಧಾರ) ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಲು ಉದ್ದೇಶಿಸಿದೆ. ಹುದ್ದೆಯ ವಿವರ ಹುದ್ದೆ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ನಿರ್ದೇಶಕರು(ಒಂದು ಹುದ್ದೆ) ವಿದ್ಯಾರ್ಥತೆ ಮತ್ತು ಅನುಭವ ಅಭ್ಯರ್ಥಿಗಳು ಬಿಜಿನೆಸ್, ಏವಿಯೇಷನ್ ಅಡ್ಡಿನಿಸ್ಟ್ರೇಷನ್/ ಇಂಜಿನಿಯರಿಂಗ್‌ನಲ್ಲಿ ಅಥವಾ ಸಂಬಂಧಪಟ್ಟ ಕ್ಷೇತ್ರದಲ್ಲಿ ಬ್ಯಾಚುಲರ್ಸ್ ಪದವಿ ಪಡೆದಿರಬೇಕು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್...
ಪತಿಯೊಂದಿಗೆ ಕುಪ್ಪಳ್ಳಿಯ ಕವಿ ಶೈಲಕ್ಕೆ ಭೇಟಿ ಕೊಟ್ಟ ಮಳೆ ಹುಡುಗಿ ನಟಿ ಪೂಜಾ ಗಾಂಧಿ
ಪತಿಯೊಂದಿಗೆ ಕುಪ್ಪಳ್ಳಿಯ ಕವಿ ಶೈಲಕ್ಕೆ ಭೇಟಿ ಕೊಟ್ಟ ಮಳೆ ಹುಡುಗಿ ನಟಿ ಪೂಜಾ ಗಾಂಧಿ ತೀರ್ಥಹಳ್ಳಿ : ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಕಳೆದ ವಾರ ರಾಷ್ಟ್ರಕವಿ ಕುವೆಂಪುರವರ ಮಂತ್ರ ಮಾಂಗಲ್ಯ ಪದ್ದತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರೀತಿಸುತ್ತಿದ್ದ ವಿಜಯ್ ಘೋರ್ಪಡೆಯನ್ನು ವಿವಾಹವಾದ ಪೂಜಾ ಗಾಂಧಿ ‘ಮಂತ್ರ ಮಾಂಗಲ್ಯ’ ವಿವಾಹದ ಬಳಿಕ ನಟಿ ಪೂಜಾ ಗಾಂಧಿ ಮತ್ತು ವಿಜಯ್ ಘೋರ್ಪಡೆ ಕುವೆಂಪು ಜನ್ಮ ಸ್ಥಳ ಕವಿ ಶೈಲಕ್ಕೆ ಭೇಟಿ ನೀಡಿದ್ದಾರೆ ಇತ್ತೀಚೆಗೆ ಪೂಜಾ ಗಾಂಧಿ ಅವರು ಉದ್ಯಮಿ ವಿಜಯ್ ಘೋರ್ಪಡೆ ಅವರನ್ನು ವಿವಾಹವಾಗಿದ್ದರು. ಕುವೆಂಪು ಪರಿಕಲ್ಪನೆಯಂತೆ ‘ಮಂತ್ರ ಮಾಂಗಲ್ಯ’ ಮಾಡಿಕೊಂಡಿದ್ದರು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಪೂಜಾ ಗಾಂಧಿ ಮತ್ತು ವಿಜಯ್ ಇಬ್ಬರ ಪ್ರೀತಿಸುತ್ತಿದ್ದರು. ಕೊನೆಗೆ ಈ ಜೋಡಿ...
ಡಿ.12 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನತಾ ದರ್ಶನ ! ಈ ಬಾರಿ ಎಲ್ಲಿ ನಡೆಯುತ್ತೆ ಜನತಾ ದರ್ಶನ ?
ಡಿ.12 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನತಾ ದರ್ಶನ ! ಈ ಬಾರಿ ಎಲ್ಲಿ ನಡೆಯುತ್ತೆ ಜನತಾ ದರ್ಶನ ? ಶಿವಮೊಗ್ಗ : ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಜನತಾದರ್ಶನಕ್ಕೆ ದಿನಾಂಕ ನಿಗದಿಯಾಗಿದ್ದು. ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಜನತಾದರ್ಶನ ಕಾರ್ಯಕ್ರಮವನ್ನು ಡಿ.12 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಟೌನ್ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದೆ. ಡಿ.12 ಬೆಳಿಗ್ಗೆ 10:30 ರಿಂದ ಜನತಾದರ್ಶನ ಕಾರ್ಯಕ್ರಮ ಶುರುವಾಗಲಿದ್ದು , ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೇರವಾಗಿ ಸಲ್ಲಿಸಬಹುದು. ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಹಾಜರಿರುವುದರಿಂದ ಶಿಕಾರಿಪುರ ತಾಲ್ಲೂಕಿನ ಸಾರ್ವಜನಿಕರು ಜನತಾದರ್ಶದಲ್ಲಿ ಪಾಲ್ಗೊಂಡು ತಮ್ಮ ಅಹವಾಲುಗಳನ್ನು ಸಲ್ಲಿಸಲು ಇದೊಂದು...