ಶಿವಮೊಗ್ಗದಲ್ಲಿ ವಾಹನ ಸವಾರರೇ ಎಚ್ಚರ ! ಮೂರೇ ತಿಂಗಳಲ್ಲಿ 70 ಸಾವಿರ ಪ್ರಕರಣ ! ಬರೋಬ್ಬರಿ 4.84 ಕೋಟಿ ದಂಡ ! ಶಿವಮೊಗ್ಗ : ನಗರದಲ್ಲಿ ಸ್ಮಾರ್ಟ್‌ಸಿಟಿಯ ಐಟಿಎಂಎಸ್(ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಮೂಲಕ ಆ.28ರಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಸ್ಮಾರ್ಟ್‌ಸಿಟಿ ಸಹಯೋಗದಲ್ಲಿ ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದ ಮೂರೇ ತಿಂಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಬರೋಬ್ಬರಿ 4.84 ಕೋಟಿ ರೂ. ವಿಧಿಸಿದ್ದು, 70 ಸಾವಿರ ಸವಾರರ...
ಬ್ಯಾಂಕ್ ಲೋನ್ ಅಧಿಕಾರಿಗಳು ಎಂದು ಹೇಳಿ ಮನೆಗೆ ನುಗ್ಗಿ ದರೋಡೆ ಮಾಡಿದ ಖದೀಮರು ! ಏನಿದು ಘಟನೆ ?
ಬ್ಯಾಂಕ್ ಲೋನ್ ಅಧಿಕಾರಿಗಳು ಎಂದು ಹೇಳಿ ಮನೆಗೆ ನುಗ್ಗಿ ದರೋಡೆ ಮಾಡಿದ ಖದೀಮರು ! ಏನಿದು ಘಟನೆ ? ಶಿವಮೊಗ್ಗ : ಬ್ಯಾಂಕ್ ಲೋನ್ ಅಧಿಕಾರಿಗಳು ಎಂದು ಹೇಳಿ ಬ್ಯಾಂಕ್ ಲೋನ್ ಬಗ್ಗೆ ವಿಚಾರಣೆ ಮಾಡಬೇಕು ಎಂದು ಹೇಳಿ ಮನೆಗೆ ನುಗ್ಗಿ ದರೋಡೆ ಮಾಡಿದ ಘಟನೆ ಶಿವಮೊಗ್ಗದ ಬಿ ಬೀರನಹಳ್ಳಿಯ ಹೊಳೆ ಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಏನಿದು ಘಟನೆ ? ಬಿ ಬೀರನಹಳ್ಳಿಯ ಹರ್ಷಿತ್ ಕನಕಾನಂದ ಎಂಬ ವ್ಯಕ್ತಿಯು ನೆನ್ನೆ ಬೆಳಿಗ್ಗೆ ತಮ್ಮ ತಾಯಿಯನ್ನು...
ಶಿವಮೊಗ್ಗ ಶಾಸಕರು ಉತ್ತರ ಕರ್ನಾಟಕದ ವಿರೋಧಿಗಳು ಚನ್ನಬಸಪ್ಪ ವಿರುದ್ದ ಲಕ್ಶ್ಮಣ ಸವದಿ ವಾಗ್ದಾಳಿ
ಶಿವಮೊಗ್ಗ ಶಾಸಕರು ಉತ್ತರ ಕರ್ನಾಟಕದ ವಿರೋಧಿಗಳು ಚನ್ನಬಸಪ್ಪ ವಿರುದ್ದ ಲಕ್ಶ್ಮಣ ಸವದಿ ವಾಗ್ದಾಳಿ ಬೆಳಗಾವಿ: ‘ಬೆಳಗಾವಿ ಜಿಲ್ಲೆಯಲ್ಲಿನ ಕಬ್ಬು ಬೆಳೆಗಾರರಿಗೆ ಅವಮಾನ ಮಾಡುತ್ತಿದ್ದೀರಿ. ಈ ಭಾಗದ ಜನತೆಗೆ ನಿಮ್ಮನ್ನ ಕಬ್ಬಿನಿಂದಲೇ ಹೊಡೆದುಹಾಕುತ್ತಾರೆ. ನಿಮಗೆ ಏನಾದರೂ ಮಾನ-ಮಾರ್ಯದೆ ಇದೆಯಾ?’ ಎಂದು ಕಾಂಗ್ರೆಸ್ ಸದಸ್ಯ ಲಕ್ಷ್ಮಣ್ ಸವದಿ, ಬಿಜೆಪಿ ಸದಸ್ಯ ಚನ್ನಬಸಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಮಂಗಳವಾರ ವಿಧಾನಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚೆಯ ವೇಳೆ ಲಕ್ಷ್ಮಣ್ ಸವದಿ ಮಾತನಾಡುತ್ತಿದ್ದ ವೇಳೆ, ಸದನದ ಬಾವಿಗಿಳಿದು...
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ ! ಹುದ್ದೆ ಏನು ? ಅರ್ಹತೆಗಳೇನು ?
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ ! ಹುದ್ದೆ ಏನು ? ಅರ್ಹತೆಗಳೇನು ? ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶಕ್ಕಾಗಿ ಹಲವರು ಇವತ್ತಿಗೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಡುವೆ ವಿಮಾನ ನಿಲ್ದಾಣದ ಉಸ್ತುವಾರಿ ನೋಡಿಕೊಳ್ಳುವ; ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಒಂದು ಹುದ್ದೆಯನ್ನು ಭರ್ತಿ ಮಾಡುವ ಸಲುವಾಗಿ ನೇರ ಸಂದರ್ಶನಕ್ಕೆ ಬರುವಂತೆ ಆಹ್ವಾನಿಸಿದೆ. ಆಸಕ್ತರು ಡಿಸೆಂಬರ್ 19ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. 1 ವರ್ಷದ ಅವಧಿ...
ಪತಿಯೊಂದಿಗೆ ಕುಪ್ಪಳ್ಳಿಯ ಕವಿ ಶೈಲಕ್ಕೆ ಭೇಟಿ ಕೊಟ್ಟ ಮಳೆ ಹುಡುಗಿ ನಟಿ ಪೂಜಾ ಗಾಂಧಿ
ಪತಿಯೊಂದಿಗೆ ಕುಪ್ಪಳ್ಳಿಯ ಕವಿ ಶೈಲಕ್ಕೆ ಭೇಟಿ ಕೊಟ್ಟ ಮಳೆ ಹುಡುಗಿ ನಟಿ ಪೂಜಾ ಗಾಂಧಿ ತೀರ್ಥಹಳ್ಳಿ : ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಕಳೆದ ವಾರ ರಾಷ್ಟ್ರಕವಿ ಕುವೆಂಪುರವರ ಮಂತ್ರ ಮಾಂಗಲ್ಯ ಪದ್ದತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರೀತಿಸುತ್ತಿದ್ದ ವಿಜಯ್ ಘೋರ್ಪಡೆಯನ್ನು ವಿವಾಹವಾದ ಪೂಜಾ ಗಾಂಧಿ ‘ಮಂತ್ರ ಮಾಂಗಲ್ಯ’ ವಿವಾಹದ ಬಳಿಕ ನಟಿ ಪೂಜಾ ಗಾಂಧಿ ಮತ್ತು ವಿಜಯ್ ಘೋರ್ಪಡೆ ಕುವೆಂಪು ಜನ್ಮ ಸ್ಥಳ ಕವಿ ಶೈಲಕ್ಕೆ ಭೇಟಿ ನೀಡಿದ್ದಾರೆ ಇತ್ತೀಚೆಗೆ ಪೂಜಾ ಗಾಂಧಿ...
ಡಿ.12 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನತಾ ದರ್ಶನ ! ಈ ಬಾರಿ ಎಲ್ಲಿ ನಡೆಯುತ್ತೆ ಜನತಾ ದರ್ಶನ ?
ಡಿ.12 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನತಾ ದರ್ಶನ ! ಈ ಬಾರಿ ಎಲ್ಲಿ ನಡೆಯುತ್ತೆ ಜನತಾ ದರ್ಶನ ? ಶಿವಮೊಗ್ಗ : ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಜನತಾದರ್ಶನಕ್ಕೆ ದಿನಾಂಕ ನಿಗದಿಯಾಗಿದ್ದು. ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಜನತಾದರ್ಶನ ಕಾರ್ಯಕ್ರಮವನ್ನು ಡಿ.12 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಟೌನ್ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದೆ. ಡಿ.12 ಬೆಳಿಗ್ಗೆ 10:30 ರಿಂದ ಜನತಾದರ್ಶನ ಕಾರ್ಯಕ್ರಮ ಶುರುವಾಗಲಿದ್ದು , ಸಾರ್ವಜನಿಕರು ತಮ್ಮ ಅಹವಾಲುಗಳನ್ನು...
ಎಳನೀರು ಮಾರಾಟ ವಿಚಾರವಾಗಿ ಇಬ್ಬರ ಯುವಕರ ನಡುವೆ ಗಲಾಟೆ ! ಮಚ್ಚಿನಿಂದ ಹಲ್ಲೆ ! ಆಸ್ಪತ್ರೆಗೆ ದಾಖಲು
ಎಳನೀರು ಮಾರಾಟ ವಿಚಾರವಾಗಿ ಇಬ್ಬರ ಯುವಕರ ನಡುವೆ ಗಲಾಟೆ ! ಮಚ್ಚಿನಿಂದ ಹಲ್ಲೆ ! ಆಸ್ಪತ್ರೆಗೆ ದಾಖಲು ಭದ್ರಾವತಿ : ಎಳೆನೀರು ಮಾರಾಟದ ವಿಚಾರವಾಗಿ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದ್ದು , ಓರ್ವನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಇಂದು ಪ್ರಾಥಮಿಕ ವರದಿ ಶಿವಮೊಗ್ಗ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ. ಭದ್ರಾವತಿಯ ಅಂಡರ್ ಬ್ರಿಡ್ಜ್ ಹತ್ತಿರ ಈ ಘಟನೆ ನಡೆದಿದ್ದು ಬೆಳಗ್ಗೆ ಎಳನೀರು ಮಾರಾಟ ಮಾಡುವ ವಿಚಾರವಾಗಿ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ....
ಕುಡಿದು ವಾಹನ ಚಲಾಯಿಸಿದವನಿಗೆ ಬಿತ್ತು ಬರೋಬ್ಬರಿ 11.000 ದಂಡ !
ಕುಡಿದು ವಾಹನ ಚಲಾಯಿಸಿದವನಿಗೆ ಬಿತ್ತು ಬರೋಬ್ಬರಿ 11.000 ದಂಡ ! ಶಿವಮೊಗ್ಗ : ಕುಡಿದು ವಾಹನ ಚಲಾಯಿಸುವುದು ಅಪರಾಧ ಎಂದು ಗೊತ್ತಿದ್ದರೂ ಕೂಡ ನಿಯಮವನ್ನು ಗಾಳಿಗೆ ತೂರಿ ಕುಡಿದು ವಾಹನ ಚಲಾಯಿಸಿದವನಿಗೆ ಭದ್ರಾವತಿ ನ್ಯಾಯಾಲಯ ಬರೋಬ್ಬರಿ 11.000 ದಂಡ ವಿಧಿಸಿದೆ. ದ್ವಿ ಚಕ್ರ ವಾಹನ ಸವಾರನೊಬ್ಬನು ಹೆಲ್ಮೆಟ್ ಧರಿಸದೆ ಮತ್ತು ಪಾನಮತ್ತನಾಗಿ ವಾಹನ ಚಲಾಯಿಸಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದರ ಹಿನ್ನೆಲೆಯಲ್ಲಿ ಭದ್ರಾವತಿಯ ನ್ಯಾಯಾಲಯ ಆತನಿಗೆ ರೂ 11 ಸಾವಿರ ದಂಡ ವಿಧಿ ಸಿದೆ. ಮಲೆನಾಡಿನ ಶೈಕ್ಷಣಿಕ,...
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಷ್ಟವಾಗ್ತಿದೀಯಾ ವಿಮಾನ ಲ್ಯಾಂಡಿಂಗ್ ? ಗೋವ ಟ್ರಿಪ್ ಕ್ಯಾನ್ಸಲ್ ಆಗಿದ್ದೀಕೆ ? ನಿಗದಿತ ಸಂಚಾರಕ್ಕೆ ತಡವಾಗುತ್ತಿದಿಯಾ ?
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಷ್ಟವಾಗ್ತಿದೀಯಾ ವಿಮಾನ ಲ್ಯಾಂಡಿಂಗ್ ? ಗೋವ ಟ್ರಿಪ್ ಕ್ಯಾನ್ಸಲ್ ಆಗಿದ್ದೀಕೆ ? ನಿಗದಿತ ಸಂಚಾರಕ್ಕೆ ತಡವಾಗುತ್ತಿದಿಯಾ ? ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ವಿಮಾನದ ಲ್ಯಾಂಡಿಂಗ್ ಹಾಗೂ ಹಾರಾಟಕ್ಕೆ ಸಮಸ್ಯೆಯಾದಂತಹ ಕೆಲವು ಘಟನೆಗಳ ಬಗ್ಗೆ ವರದಿಯಾಗಿದೆ. ಕೆಲ ತಿಂಗಳುಗಳ ಹಿಂದಷ್ಟೇ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿ ಆಕಾಶದಲ್ಲೆ ಸುತ್ತು ಹೊಡೆದ ಘಟನೆ ನಮ್ಮ ಕಣ್ಣ ಮುಂದೆಯೇ ಇದೆ. ಅದಲ್ಲದೆ...
ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಉಳಿದ ಸೀಟುಗಳ ಭರ್ತಿ ಮತ್ತು ಅತಿಥಿ ಉಪನ್ಯಾಸಕರನ್ನು ನೇಮಿಸುವಂತೆ ಎನ್ ಎಸ್ ಯು ಐ ಮನವಿ
ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಉಳಿದ ಸೀಟುಗಳ ಭರ್ತಿ ಮತ್ತು ಅತಿಥಿ ಉಪನ್ಯಾಸಕರನ್ನು ನೇಮಿಸುವಂತೆ ಎನ್ ಎಸ್ ಯು ಐ ಮನವಿ ಶಿವಮೊಗ್ಗ : ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಉಳಿದ ಸೀಟುಗಳ ಭರ್ತಿ ಮತ್ತು ಅತಿಥಿ ಉಪನ್ಯಾಸಕರನ್ನು ನೇಮಿಸುವಂತೆ ಅಗ್ರಹಿಸಿ ಎನ್ ಎಸ್ ಯು ಐ ಮನವಿ ಮಾಡಿದೆ ಕುವೆಂಪು ವಿವಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ 2023-24ನೇ ಸಾಲಿನ ಪಿಜಿ ಪ್ರವೇಶ ಮುಕ್ತಾಯಗೊಂಡಿದ್ದು ವಿವಿಧ ಕೋರ್ಸುಗಳಿಗೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಅಂಗವಿಕಲ ಕೋಟಾದಡಿ ಮೀಸಲಾಗಿದ್ದ ಸೀಟುಗಳು ಸಂಪೂರ್ಣ ಭರ್ತಿಯಾಗಿಲ್ಲ...