ಶಿವಮೊಗ್ಗ : ವಿಧಾನಪರಿಷತ್ತಿನ ನೈರುತ್ಯ ಪದವಿದರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಇದೇ ಜೂನ್ ಮೂರರಂದು ನಡೆದಿತ್ತು, ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರವು ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ನ್ಯಾಮತಿ ತಾಲೂಕುಗಳು ಈ ಕ್ಷೇತ್ರದಲ್ಲಿ ಒಳಗೊಂಡಿರುತ್ತದೆ,
ನೈರುತ್ಯ ಪದವಿಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ಮಕ್ಕಳ ತಜ್ಞರಾದ ಡಾ. ಧನಂಜಯ ಸರ್ಜಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಎಸ್ ಪಿ ದಿನೇಶ್, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ರಘುಪತಿ ಭಟ್ ಸ್ಪರ್ಧಿಸಿದ್ದರು
ನೈರುತ್ಯ ಪದವಿಧರ ಕ್ಷೇತ್ರದಲ್ಲಿ ಒಟ್ಟು 85,089 ಇದ್ದು ಅದರಲ್ಲಿ 66,529 ಮತದಾರರು ಮತ ಚಲಾಯಿಸಿದ್ದಾರೆ. 10 ಜನ ಅಭ್ಯರ್ಥಿಗಳು ಕಣದಲ್ಲಿದ್ದರು, ಖ್ಯಾತ ಮಕ್ಕಳ ತಜ್ಞರು ಡಾ. ಧನಂಜಯ ಸರ್ಜಿ ಗೆಲುವನ್ನು ಸಾಧಿಸಿದ್ದಾರೆ ಇನ್ನು ಅಧಿಕೃತ ಘೋಷಣೆ ಬಾಕಿ ಇದೆ
ವರದಿ : ಲಿಂಗರಾಜ್ ಗಾಡಿಕೊಪ್ಪ
ಇದನ್ನೂ ಓದಿ : ನೈರುತ್ಯ ಪದವಿಧರ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಭರ್ಜರಿ ಮುನ್ನಡೆ !



Leave a Reply