ಶಿವಮೊಗ್ಗ : ವಿಧಾನಪರಿಷತ್ತಿನ ನೈರುತ್ಯ ಪದವಿದರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಇದೇ ಜೂನ್ ಮೂರರಂದು ನಡೆದಿತ್ತು, ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರವು ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ನ್ಯಾಮತಿ ತಾಲೂಕುಗಳು ಈ ಕ್ಷೇತ್ರದಲ್ಲಿ ಒಳಗೊಂಡಿರುತ್ತದೆ, ನೈರುತ್ಯ ಪದವಿಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ಮಕ್ಕಳ ತಜ್ಞರಾದ ಡಾ. ಧನಂಜಯ ಸರ್ಜಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಎಸ್ ಪಿ ದಿನೇಶ್, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ರಘುಪತಿ ಭಟ್ ಸ್ಪರ್ಧಿಸಿದ್ದರು
ನೈರುತ್ಯ ಪದವಿಧರ ಕ್ಷೇತ್ರದಲ್ಲಿ ಒಟ್ಟು 85,089 ಇದ್ದು ಅದರಲ್ಲಿ 66,529 ಮತದಾರರು ಮತ ಚಲಾಯಿಸಿದ್ದಾರೆ. 10 ಜನ ಅಭ್ಯರ್ಥಿಗಳು ಕಣದಲ್ಲಿದ್ದರು
ಮೊದಲ ಸುತ್ತಿನಲ್ಲಿ
ಡಾ. ಧನಂಜಯ ಸರ್ಜಿ : 6714
ರಘುಪತಿ ಭಟ್ : 3128
ಆಯನೂರು ಮಂಜುನಾಥ್ : 2434
ಎಸ್ ಪಿ ದಿನೇಶ್ : 578
ಮೊದಲನೇ ಸುತ್ತಿನಲ್ಲಿ ಡಾ. ಧನಂಜಯ ಸರ್ಜಿ 3586 ಅಂತರಗಳ ಮುನ್ನಡೆಯನ್ನು ಸಾಧಿಸಿದ್ದಾರೆ
ಎರಡನೇ ಸುತ್ತಿನಲ್ಲಿ
ಡಾ. ಧನಂಜಯ ಸರ್ಜಿ : 7363
ಆಯನೂರು ಮಂಜುನಾಥ್ : 2816
ರಘುಪತಿ ಭಟ್ : 1963
ಎಸ್ ಪಿ ದಿನೇಶ್ : 709
ಎರಡನೇ ಸುತ್ತಿನಲ್ಲಿ ಡಾ. ಧನಂಜಯ್ ಸರ್ಜಿ 4547 ಅಂತರಗಳ ಭರ್ಜರಿ ಮುನ್ನಡೆಯನ್ನು ಸಾಧಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
ಇದನ್ನೂ ಓದಿ : ನೈರುತ್ಯ ಶಿಕ್ಷಕರ ಕ್ಷೇತ್ರ: ಜೆಡಿಎಸ್‌ನ ಭೋಜೇಗೌಡಗೆ ಭರ್ಜರಿ ಗೆಲುವು



Leave a Reply