BIG NEWS : ಸೋಲಿನ ಬಳಿಕ  ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಫಸ್ಟ್ ರಿಯಾಕ್ಷನ್ ! ನಾನು ಗೆಲ್ತೀನಿ ಅನ್ನೋ ನಂಬಿಕೆ ನನಗೆ ಇರಲಿಲ್ಲ  – ಕೆ ಎಸ್ ಈಶ್ವರಪ್ಪ

ಶಿವಮೊಗ್ಗ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಕಾರಣಕ್ಕಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ರಾಘವೇಂದ್ರ ಅವರ ವಿರುದ್ಧ ಬಂಡಾಯವೆದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು, ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಜೂನ್ 4 ರಂದು ಪ್ರಕಟವಾಯಿತು, ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಎರಡು ಲಕ್ಷ ಅಂತರದಿಂದ ಜಯಗಳಿಸಿದ್ದರು, ಆದರೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕೇವಲ 30,000 ಮತಗಳನ್ನು ಪಡೆದಿದ್ದರು ತಮ್ಮ ಸೋಲಿನ ಬಳಿಕ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಿದರು 

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹಿಂದುಳಿದವರು, ಕುರುಬರು ರಾಜ್ಯದ ಮೂರನೇ ಶಕ್ತಿಯಾಗಿದ್ದಾರೆ ಅವರಿಗೆ ಟಿಕೆಟ್ ನೀಡಬಹುದಿತ್ತು, ಆದರೆ ನೀಡಿಲ್ಲ ಈ ವಿಷಯಗಳು ಚರ್ಚೆಯಾಗಬೇಕು ಎನ್ನುವ ಉದ್ದೇಶದಿಂದ ಮಾತ್ರ ನಾನು ಚುನಾವಣೆಗೆ ಸ್ಪರ್ಧಿಸಿದ್ದು, ಈ ವಿಷಯಗಳು ರಾಜ್ಯದಲ್ಲೆಡೆ ಚರ್ಚೆಯಾಗುತ್ತಿದೆ, ಚುನಾವಣೆಯಲ್ಲಿ ನಾನು ಗೆಲ್ತೀನಿ ಅನ್ನೋ ನಂಬಿಕೆ ನನಗೆ ಇರಲಿಲ್ಲ, ನಾನು ಚುನಾವಣೆಗೆ ಸ್ಪರ್ಧೆ ಮಾಡಬೇಕು ಬೇಡವೋ ಎಂಬ ನಿರ್ಧಾರದಲ್ಲಿ ಇದ್ದಾಗ ಇಡೀ ಜಿಲ್ಲೆಯ ಜನ ಇಂತಹ ಪರಿಸ್ಥಿತಿ ಭಾರತೀಯ ಜನತಾ ಪಾರ್ಟಿಗೆ ಬಂದಿದೆ, ರಾಜ್ಯದ ನಾಯಕರು ರಾಷ್ಟ್ರದ ನಾಯಕರು ಪರಿವಾರದ ನಾಯಕರು ಪರಿಸ್ಥಿತಿಯನ್ನು ಸರಿ ಮಾಡಬೇಕೆಂದರೆ ಈ ಚುನಾವಣೆಗೆ ಸ್ಪರ್ಧೆ ಮಾಡುವುದು ಸೂಕ್ತ ಎಂದು ಹೇಳಿದ್ದಕ್ಕೋಸ್ಕರ ಸ್ಪರ್ಧೆ ಮಾಡಿದ್ದೇನೆ. ಜಿಲ್ಲೆಗಳಲ್ಲೂ ಮಂಡಲಗಳಲ್ಲೂ ನಿರೀಕ್ಷೆಗೆ ಮೀರಿ ಬೆಂಬಲ ಸಿಕ್ತು, ನಾಮಪತ್ರ ಸಲ್ಲಿಕೆ ವೇಳೆ 30 ರಿಂದ 35 ಸಾವಿರ ಜನ ಬಂದ್ರು, ಚುನಾವಣೆಗೆ ಒಂದು ವಾರ ಇರಬೇಕಾದ್ರೆ ಒಂದು ದೊಡ್ಡ ಮೆರವಣಿಗೆಯು ಕೂಡ ನಡೆಯಿತು, ದೊಡ್ಡ ದೊಡ್ಡ ಸಮಾವೇಶಗಳು ನಡೆಯಿತು ಆದರೆ ರಾಜ್ಯದ ಜನ ನರೇಂದ್ರ ಮೋದಿಯವರನ್ನ ಮರೆಯಲಿಲ್ಲ ಹಾಗಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ನರೇಂದ್ರ ಮೋದಿ ಅವರ ಪ್ರಭಾವದಿಂದ ಭಾರತೀಯ ಜನತಾ ಪಾರ್ಟಿ ಗೆದ್ದಿದೆ ಎಂದು ಹೇಳಿದರು 

 ರಾಜ್ಯ ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿದೆ !

ರಾಜ್ಯದ ಬಿಜೆಪಿ ಕಾರ್ಯಕರ್ತರು ನಮ್ಮ ಕಷ್ಟಗಳನ್ನು ಎಲ್ಲಿ ಹೇಳಬೇಕು ಎಂದು ಗೊಂದಲದಲ್ಲಿದ್ದಾರೆ, ರಾಜ್ಯದಲ್ಲಿ ಸಾಮೂಹಿಕ ತೀರ್ಮಾನಗಳು ನಡೆಯುತ್ತಿಲ್ಲ, ಹಿಂದೆ ನಾನು ಯಡಿಯೂರಪ್ಪನವರು, ಡಿ ಎಚ್ ಶಂಕರಮೂರ್ತಿ, ವಿ ಎಸ್ ಆಚಾರ್ಯ, ಅನಂತ್ ಕುಮಾರ್, ರಾಮಚಂದ್ರಗೌಡರು ಎಲ್ಲಾ ಹಿರಿಯರು ಕೂತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಿದ್ದೀವಿ, ಈಗ ಎಲ್ಲಾ ತೀರ್ಮಾನಗಳು ಕೂಡ ತಂದೆ ಮಕ್ಕಳು ಸೇರಿ ತೆಗೆದುಕೊಳ್ಳುತ್ತಿರುವುದು ಕಾಣುತ್ತಿದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನವನ್ನು ನಾವು ಗೆದ್ದಿದ್ವಿ, ಆದರೆ ಅದೇ ನರೇಂದ್ರ ಮೋದಿಯ ಪ್ರಭಾವ ಇದ್ರೂ ರಾಜ್ಯದಲ್ಲಿ ಕೇವಲ 17 ಸ್ಥಾನವನ್ನು ಗೆಲ್ಲುವಂತಹ ದುಸ್ಥಿತಿಗೆ ನಾವು ಬಂದಿದ್ದೇವೆ ಇದಕ್ಕೆ ಯಾರು ಕಾರಣ ! ಲೋಕಸಭೆಯಲ್ಲಿ 17 ಸ್ಥಾನವನ್ನು ಪಡೆದುದ್ದಲ್ಲದೇ ವಿಧಾನಸಭಾ ಚುನಾವಣೆಯಲ್ಲೂ ಕೂಡ 60 ಸ್ಥಾನಕ್ಕೆ ನಾವು ಕುಸಿದಿದ್ದೇವೆ ಹಿಂದುಳಿದ ಸಮಾಜ, ದಲಿತ ಸಮಾಜವನ್ನು ತಾತ್ಸಾರ ಮಾಡಿದ್ದಕ್ಕೆ , ನಮ್ಮಲ್ಲಿ ಸಾಮೂಹಿಕ ಚರ್ಚೆ ಆಗದ ಕಾರಣ, ಎಲ್ಲಾ ಕಾರ್ಯಕರ್ತರು ನೋವಲ್ಲಿ ಇರುವ ಕಾರಣ ಇಂದು ಈ ಸ್ಥಿತಿ ಬಂದಿದೆ ಎಲ್ಲಾ ರಾಜ್ಯದ ನಾಯಕರು ರಾಷ್ಟ್ರದ ನಾಯಕರು ಗಮನಿಸುತ್ತಾರೆ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು 

ವರದಿ : ಲಿಂಗರಾಜ್ ಗಾಡಿಕೊಪ್ಪ 

ಇದನ್ನೂ ಓದಿ  : ಇಂದು ಪರಿಷತ್ ಫಲಿತಾಂಶ ! ಮತ ಎಣಿಕೆ ಕಾರ್ಯ ಆರಂಭ ! ಚಿಂತಕರ ಚಾವಡಿಗೆ ಸೇರೋದ್ಯಾರು ?


Leave a Reply

Your email address will not be published.