ಶಿವಮೊಗ್ಗ : ನಗರದ ವಿನೋಬನಗರದ ವಾಸದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತಿದ್ದ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ವಿನೋಬನಗರ ಪೋಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಐ.ಪಿ.ಎಸ್ ಹಾಗು ಪೋಲೀಸ್ ಅಧಿಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ವಿನೋಬಾನಗರ ಪೋಲೀಸ್ ಠಾಣೆಯ ಪಿಐ ಶ್ರೀಮತಿ ಚಂದ್ರಕಲಾರವರ ನೇತೃತ್ವದಲ್ಲಿ ಸಿಬ್ಬಂದಿಗಳೊಡನೆ ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆ ಮೇಲೆ ದಾಳಿ ನಡೆಸಿ ಸಂತ್ರಸ್ಥೆ ಮಹಿಳೆಯೊಬ್ಬರನ್ನು ರಕ್ಷಣೆ ಮಾಡಿದ್ದಾರೆ. ಶೇಖರ್...
Tag: ShimogaBuzz
ಕಾರಿಗೆ ಅಡ್ಡ ಬಂದ ಜಿಂಕೆ ! ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಸಾವು !
ಶಿವಮೊಗ್ಗ : ಹಣಗೆರೆಕಟ್ಟೆ ಆಯನೂರು ರಸ್ತೆಯಲ್ಲಿ ಬ್ರಿಜಾ ಕಾರಿಗೆ ಜಿಂಕೆಯೊಂದು ಅಡ್ಡ ಬಂದಿದೆ, ಡಿಕ್ಕಿಯಾದ ರಭಸಕ್ಕೆ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ ಶಿವಮೊಗ್ಗದ ಹಣಗರ ಕಟ್ಟೆಯಿಂದ ಆಯನೂರು ಕಡೆಗೆ ಹೋಗುತ್ತಿದ್ದಾಗ ಅರೇಹಳ್ಳಿಯ ಬಳಿ ಜಿಂಕೆಯೊಂದು ಬ್ರೀಜಾ ಕಾರಿಗೆ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ.ನಿನ್ನೆ ಸಂಜೆ ಈ ಘಟನೆ ಸಂಭವಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆ ಕಳೆಬರಹವನ್ನು ವಿಲೇವಾರಿ ಮಾಡಿದೆ. ನಿನ್ನೆ ಸಂಜೆ ಹಣಗರೆಕಟ್ಟೆಯ ಕಡೆಯಿಂದ ಬ್ರೀಜಾ ಕಾರಿಗೆ ಜಿಂಕೆಯೊಂದು ಅಡ್ಡಬಂದಿದೆ. ರೋಡ್ ಕ್ರಾಸ್ ಮಾಡುತ್ತಿದ್ದ ಜಿಂಕೆ ಸಡನ್...
BREAKING NEWS : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ ! 15 ಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಗಾಯ !
ಆನಂದಪುರ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಸಮೀಪದ ಮುಂಬಾಳು ತಿರುವಿನಲ್ಲಿ ಖಾಸಗಿ ಬಸ್ ಒಂದು ಪಲ್ಟಿಯಾಗಿ 15ಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ನಡೆದಿದೆ ಸಾಗರದಿಂದ ಬೆಳ್ತಂಗಡಿಗೆ ಹೋಗುವ K A 20 C 6997 ನೋಂದಣಿಯ ಖಾಸಗಿ ಬಸ್ ಆನಂದಪುರ ಸಮೀಪದ ಮುಂಭಾಳು ತಿರುವಿನಲ್ಲಿ ಪಲ್ಟಿಯಾಗಿದೆ, ಬೆಳ್ಳಂ ಬೆಳಗ್ಗೆ 7:30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅತಿಯಾಗಿ ಸುರಿದ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ ...
ವಸತಿ ಶಾಲೆಯ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ
ಪ್ರಸ್ತಕ ಸಾಲಿನ ಅಲ್ಪಸಂಖ್ಯಾತರ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ದಾಖಲಾತಿಗೆ ಈಗಾಗಲೇ ಪ್ರವೇಶ ಪರೀಕ್ಷೆ ನಡೆದಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜೂನ್ 12 ರಂದು ಕೌನ್ಸಿಲಿಂಗ್ ಪ್ರಕ್ರಿಯೆ ಏರ್ಪಡಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಠೋಬಾ ಹೊನಕಾಂಡೆ ಅವರು ತಿಳಿಸಿದ್ದಾರೆ. ಅಲ್ಪಸಂಖ್ಯಾತರ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಜೂ.12 ರಂದು ಬೆಳಿಗ್ಗೆ 10.30 ಕ್ಕೆ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ...
ಕೆಳದಿ ಸಂಸ್ಥಾನ ವಿಶಿಷ್ಟವಾದ ಸಂಸ್ಥಾನವಾಗಿದೆ – ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು
ಆನಂದಪುರ : ಶ್ರೀ ಮ.ನಿ. ಜ. ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಮುರುಘಾಮಠ ಇವರು ಮಾತನಾಡುತ್ತಾ ಕೆಳದಿ ಸಂಸ್ಥಾನ ಒಂದು ವಿಶಿಷ್ಟವಾದ ಸಂಸ್ಥಾನವಾಗಿತ್ತು . ಇವರ ಕಾಲದಲ್ಲಿ ಹಲವಾರು ಮಠಗಳನ್ನು ಸಹ ನಿರ್ಮಿಸಿದ್ದಾರೆ ಅದರಲ್ಲಿ ಈ ಮಹಂತಿನ ಮಠವು ಒಂದು ವಿಶಿಷ್ಟವಾದ ಮಠವಾಗಿದೆ . ಇದಕ್ಕೂ ಮುರಘಾ ಮಠಕ್ಕೂ ಪುರಾತನ ಕಾಲದಿಂದಲೂ ಸಂಬಂಧ ಹೊಂದಿದೆ. ಎಂದು ಹೇಳುತ್ತಾ ಶಾಸಕರಲ್ಲಿ ಇದರ ಅಭಿವೃದ್ಧಿಗಾಗಿ ಹಲವಾರು ಬೇಡಿಕೆಯನ್ನು ಸಹ ಇಟ್ಟರು. ಅಭಿವೃದ್ಧಿಯೇ ನನ್ನ ಗುರಿ… ನನ್ನ ಕ್ಷೇತ್ರದ ಸಮಸ್ತ ಅಭಿವೃದ್ಧಿಗೆ...
ಮಹಾನಗರ ಪಾಲಿಕೆ ಕಮಿಷನರ್ ಮಾಯಣ್ಣಗೌಡ ವರ್ಗಾವಣೆ ! ನೂತನ ಕಮಿಷನರ್ ಯಾರು ?
ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ ವರ್ಗಾವಣೆಯಾಗಿದ್ದಾರೆ, ಕಳೆದ ಎರಡು ವರ್ಷದಿಂದ ಮಹಾನಗರ ಪಾಲಿಕೆಯಲ್ಲಿ ಉತ್ತಮ ಆಡಳಿತ ನಡಸಿದ್ದ ಮಾಯಣ್ಣ ಗೌಡರು ಈಗ ವರ್ಗಾವಣೆಯಾಗಿದ್ದಾರೆ. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಅಧಿಸೂಚನೆ ಹೊರಡಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಡಾ.ಕವಿತಾ ಯೋಗಪ್ಪನವರ್, ಕೆಎಎಸ್(ಹಿರಿಯ ಶ್ರೇಣಿ) ಅಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ, ಡಾ.ಶಿವರಾಮಕಾರಂತ ಬಡವಾಣೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ...
ಕಾರುಗಳ ನಡುವೆ ಮುಖಾ-ಮುಖಿ ಡಿಕ್ಕಿ ! ಭದ್ರಾವತಿ ಯುವಕ ಸಾವು !
ಸಾಗರ : ತಾಲೂಕಿನ ಉಳ್ಳೂರು ಸಮೀಪದ ಮಂಚಾಲೆ ಬಳಿ ಓಮ್ಮಿ ಹಾಗೂ ಇಂಡಿಕಾ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ. ಅಪಘಾತದಲ್ಲಿ ಭದ್ರಾವತಿ ಗ್ರಾಮದ ಅಜಯ್ (21) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರದ ಟೌನ್ ನಿವಾಸಿಯಾದ ಸೈಯದ್ ನೂರುಲ್ಲಾ ಉಳ್ಳೂರು ಗ್ರಾಮದಲ್ಲಿ ಮೊಟ್ಟೆ ಕೊಟ್ಟು ಬರುತ್ತಿದ್ದ ವೇಳೆ ಓಮಿನಿ ಡಿಕ್ಕಿಯಾಗಿದೆ, ಡಿಕ್ಕಿಯ ರಭಸಕ್ಕೆ ಓಮಿನಿಯಲ್ಲಿದ್ದ ಅಜಯ್ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂಡಿಕಾ ಕಾರ್ ನಲ್ಲಿದ್ದ ಸೈಯದ್ ನೂರುಲ್ಲಾ ರವರಿಗೂ ತೀವ್ರ ಪೆಟ್ಟಾಗಿದ್ದು ಅವರನ್ನು...
ಲಂಚ ಸ್ವೀಕರಿಸುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ತಾಲೂಕು ಕಚೇರಿ ನೌಕರ !
ಸಾಗರ : ಕೈಬರಹದ ಪಹಣಿ ಪತ್ರಿಕೆ ನೀಡಲು 2000 ರೂ. ಲಂಚ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಚೇರಿ ನೌಕರ ಬಸವರಾಜ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಾಗರದ ಎಸ್‌ಎನ್ ನಗರ ಬಡಾವಣೆಯ ಆಸೀಬ್ ತಮ್ಮ ಸ್ನೇಹಿತ ರೋಹಿದ್ ಅಬ್ದುಲ್ ಅವರಿಗೆ ಸೇರಿದ ಜಮೀನಿನ ಪಹಣಿ ತೆಗೆಸಲು ಬಸವರಾಜ್ ಅವರಿಗೆ 1,500 ರೂ. ಲಂಚದ ಹಣ ನೀಡಿದ್ದರು. ಮತ್ತೆ 2,000 ರೂ. ನೀಡುವಂತೆ ಬಸವರಾಜ್ ಒತ್ತಾಯಿಸಿದ್ದರು. ಈ ಮೊದಲು ಹಣ ನೀಡುವ ಸಂದರ್ಭದಲ್ಲಿ ಆಸೀಬ್ ವಿಡಿಯೋ...
ನೈರುತ್ಯ ಪದವಿಧರ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಭರ್ಜರಿ ಗೆಲುವು !
ಶಿವಮೊಗ್ಗ : ವಿಧಾನಪರಿಷತ್ತಿನ ನೈರುತ್ಯ ಪದವಿದರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಇದೇ ಜೂನ್ ಮೂರರಂದು ನಡೆದಿತ್ತು, ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರವು ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ನ್ಯಾಮತಿ ತಾಲೂಕುಗಳು ಈ ಕ್ಷೇತ್ರದಲ್ಲಿ ಒಳಗೊಂಡಿರುತ್ತದೆ, ನೈರುತ್ಯ ಪದವಿಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ಮಕ್ಕಳ ತಜ್ಞರಾದ ಡಾ. ಧನಂಜಯ ಸರ್ಜಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಕಾಂಗ್ರೆಸ್ ಬಂಡಾಯ...
ನೈರುತ್ಯ ಪದವಿಧರ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಭರ್ಜರಿ ಮುನ್ನಡೆ !
ಶಿವಮೊಗ್ಗ : ವಿಧಾನಪರಿಷತ್ತಿನ ನೈರುತ್ಯ ಪದವಿದರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಇದೇ ಜೂನ್ ಮೂರರಂದು ನಡೆದಿತ್ತು, ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರವು ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ನ್ಯಾಮತಿ ತಾಲೂಕುಗಳು ಈ ಕ್ಷೇತ್ರದಲ್ಲಿ ಒಳಗೊಂಡಿರುತ್ತದೆ, ನೈರುತ್ಯ ಪದವಿಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ಮಕ್ಕಳ ತಜ್ಞರಾದ ಡಾ. ಧನಂಜಯ ಸರ್ಜಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಕಾಂಗ್ರೆಸ್ ಬಂಡಾಯ...