ಮೈಸೂರು: ವಿಧಾನಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ನ ಎಸ್.ಎಲ್. ಭೋಜೇಗೌಡ 5,267 ಮತಗಳಿಂದ ಗೆಲುವು ಸಾಧಿಸಿದರು. ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಪಡೆದ ಅವರು, 9,829 ಮತ ಗಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ 4,562 ಮತ ಪಡೆದರು. 19,479 ಮತಳು ಚಲಾವಣೆ ಆಗಿದ್ದವು. ಅದರಲ್ಲಿ 821 ಮತಗಳು ಅಸಿಂಧುವಾಗಿದ್ದವು. ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ ವರದಿ : ಲಿಂಗರಾಜ್ ಗಾಡಿಕೊಪ್ಪ ಇದನ್ನೂ ಓದಿ : ಜಮೀನಿನಲ್ಲಿ ಮಣ್ಣು ತೆಗೆಯುವ ವಿಚಾರದಲ್ಲಿ ಮಾರಾಮಾರಿ ! ಮಚ್ಚಿನಿಂದ ಹಲ್ಲೆ ! ಮೆಗ್ಗಾನ್ ಆವರಣದಲ್ಲಿಯೇ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು !
ಜಮೀನಿನಲ್ಲಿ ಮಣ್ಣು ತೆಗೆಯುವ ವಿಚಾರದಲ್ಲಿ ಮಾರಾಮಾರಿ ! ಮಚ್ಚಿನಿಂದ ಹಲ್ಲೆ ! ಮೆಗ್ಗಾನ್ ಆವರಣದಲ್ಲಿಯೇ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು !
ನ್ಯಾಮತಿ : ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೋಗಿಲು ಗ್ರಾಮದಲ್ಲಿ ಸರ್ವೇ ನಂಬರ್ 106 ರ ಬಗುರ್ ಹುಕುಂ ಜಮೀನಿನಲ್ಲಿ ಮಣ್ಣು ತೆಗೆಯುವ ವಿಚಾರದಲ್ಲಿ ಸಂಬಂಧಿಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ನಡೆದಿದೆ ಸರ್ವೇ ನಂಬರ್ 106 ರಲ್ಲಿರುವ ಒಂದು ಎಕರೆ ಎಂಟು ಗುಂಟೆ ಜಮೀನಿನಲ್ಲಿ ಸೈನ್ಯನಾಯ್ಕ್ ಎಂಬ ವ್ಯಕ್ತಿ ಸೇರಿದಂತೆ ಮತ್ತಿದ್ದರೂ ಜಮೀನಿನಲ್ಲಿ ಮಣ್ಣು ತೆಗೆಯಲು ಮುಂದಾಗಿದ್ದಾರೆ, ಈ ವೇಳೆ ಸೈನ್ಯ ನಾಯ್ಕ್ ದೊಡ್ಡಪ್ಪನ ಮಕ್ಕಳಾದ ಗಿರೀಶ್ ನಾಯ್ಕ್ ಎಂಬುವ ವ್ಯಕ್ತಿ ಇದನ್ನ ತಡೆಯಲು ಮುಂದಾಗಿದ್ದಾನೆ ಈ ಘಟನೆ ನಾಲ್ಕು ದಿನದ ಹಿಂದೆ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು ಇದೇ ವಿಚಾರಕ್ಕೆ ಇಂದು ಸೈನ್ಯ ನಾಯ್ಕ್, ಶ್ರೀಧರ್ ನಾಯ್ಕ್, ಚಿನ್ನಾ ನಾಯ್ಕ್, ಸುಶೀಲಾ ಬಾಯಿ ಎಂಬುವವರು ಹರೀಶ್ ಮತ್ತು ಗಿರೀಶ್ ನಾಯ್ಕ್ ರನ್ನು ಜಮೀನಿಗೆ ಕರೆಸಿಕೊಂಡು ಮುಚ್ಚಿನಿಂದ ಹಲ್ಲೆ ಮಾಡಲಾಗಿದೆ, ಹರೀಶ್ ಗೆ ಕಾಲು ಮುರಿದಿದ್ದು, ಗಿರೀಶ್ ಎಂಬತನ ತಲೆಗೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ, ಈ ಸಂಬಂಧ...
ತಪ್ಪು ಮಾಡದೆಯೇ ಶಿವಮೊಗ್ಗ ಜೈಲು ಸೇರಿದ ನಾಗಪ್ಪ !
ಶಿವಮೊಗ್ಗ : ಈ ಹಿಂದೆ ವಾಹನಗಳಲ್ಲಿ ಮನೆಗಳಿಗೆ ಹಾವುಗಳು ನುಗ್ಗಿರೋದನ್ನು ನೋಡಿದಿದ್ದೇವೆ ಆದರೆ ಶಿವಮೊಗ್ಗದಲ್ಲಿ ನಾಗರಹಾವೊಂದು ಸೀದಾ ಜೈಲಿನೊಳಗೆ ನುಗ್ಗಿದ ಘಟನೆ ನಡೆದಿದೆ. ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ನುಗ್ಗಿದೆ. ಹಾವು ಸಂಚರಿಸುದನ್ನು ಗಮನಿಸಿದ ಜೈಲಿನ ಸಿಬ್ಬಂದಿ ಕೂಡಲೇ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಠಾಣಾ ಸಿಬ್ಬಂದಿಯ ಚಲನವಲನ ನೋಡಿ ಹೆದರಿದ ನಾಗಪ್ಪ ನೇರವಾಗಿ ಜೈಲಿನ ಕೋಣೆಯ ಬಾಗಿಲನ್ನು ಏರಿ ಕುಳಿತಿತ್ತು. ಕೂಡಲೇ ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಕರೆಮಾಡಿ ವಿಷಯ ತಿಳಿಸಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಹಾವನ್ನು ರಕ್ಷಣೆ ಮಾಡಿ ಸೂಕ್ತ ಸ್ಥಳಕ್ಕೆ ಬಿಡಲಾಗಿದೆ. ವರದಿ : ಲಿಂಗರಾಜ್ ಗಾಡಿಕೊಪ್ಪ ಇದನ್ನೂ ಓದಿ : ಸೋಲಿನ ಬಳಿಕ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಫಸ್ಟ್ ರಿಯಾಕ್ಷನ್ ! ನಾನು ಗೆಲ್ತೀನಿ ಅನ್ನೋ ನಂಬಿಕೆ ನನಗೆ ಇರಲಿಲ್ಲ – ಕೆ ಎಸ್ ಈಶ್ವರಪ್ಪ
ಪರಿಷತ್ ಫಲಿತಾಂಶ : ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಸ್ ಎಲ್ ಭೋಜೆಗೌಡ ಮುನ್ನಡೆ !
ಶಿವಮೊಗ್ಗ : ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣಾ ಮತಗಳ ಎಣಿಕೆ ಕಾರ್ಯ ಆರಂಭ ವಾಗಿದ್ದು ನೈರುತ್ಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಸ್ ಎಲ್ ಭೋಜೆಗೌಡರು ಮೊದಲ ಸುತ್ತಿನ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ದಿಸಿದ್ದ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಎಸ್ ಎಲ್ ಭೋಜೇಗೌಡ ಅವರು ಮೊದಲ ಸುತ್ತಿನ ಎಣಿಕೆಯಲ್ಲಿ 3112 ಮತಗಳ ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ ಇನ್ನು ನೈರುತ್ಯ ಪದವಿಧರ ಕ್ಷೇತ್ರದ ಮತ ಏಣಿಕೆ ಕಾರ್ಯ ಮಧ್ಯಾಹ್ನ 3 ಗಂಟೆಯ ಮೇಲೆ ಶುರುವಾಗಲಿದೆ ಎಂದು ಹೇಳಲಾಗಿದೆ ವರದಿ : ಲಿಂಗರಾಜ್ ಗಾಡಿಕೊಪ್ಪ BIG NEWS : ಸೋಲಿನ ಬಳಿಕ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಫಸ್ಟ್ ರಿಯಾಕ್ಷನ್ ! ನಾನು ಗೆಲ್ತೀನಿ ಅನ್ನೋ ನಂಬಿಕೆ ನನಗೆ ಇರಲಿಲ್ಲ – ಕೆ ಎಸ್ ಈಶ್ವರಪ್ಪ
BIG NEWS : ಸೋಲಿನ ಬಳಿಕ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಫಸ್ಟ್ ರಿಯಾಕ್ಷನ್ ! ನಾನು ಗೆಲ್ತೀನಿ ಅನ್ನೋ ನಂಬಿಕೆ ನನಗೆ ಇರಲಿಲ್ಲ – ಕೆ ಎಸ್ ಈಶ್ವರಪ್ಪ
ಶಿವಮೊಗ್ಗ : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಕಾರಣಕ್ಕಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ರಾಘವೇಂದ್ರ ಅವರ ವಿರುದ್ಧ ಬಂಡಾಯವೆದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು, ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಜೂನ್ 4 ರಂದು ಪ್ರಕಟವಾಯಿತು, ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಎರಡು ಲಕ್ಷ ಅಂತರದಿಂದ ಜಯಗಳಿಸಿದ್ದರು, ಆದರೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕೇವಲ 30,000 ಮತಗಳನ್ನು ಪಡೆದಿದ್ದರು ತಮ್ಮ ಸೋಲಿನ ಬಳಿಕ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಿದರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹಿಂದುಳಿದವರು, ಕುರುಬರು ರಾಜ್ಯದ ಮೂರನೇ ಶಕ್ತಿಯಾಗಿದ್ದಾರೆ ಅವರಿಗೆ ಟಿಕೆಟ್ ನೀಡಬಹುದಿತ್ತು,...
ಇಂದು ಪರಿಷತ್ ಫಲಿತಾಂಶ ! ಮತ ಎಣಿಕೆ ಕಾರ್ಯ ಆರಂಭ ! ಚಿಂತಕರ ಚಾವಡಿಗೆ ಸೇರೋದ್ಯಾರು ?
ಶಿವಮೊಗ್ಗ : ಲೋಕಸಭಾ ಚುನಾವಣೆಯ ನಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾವೇರಿದ ನೈರುತ್ಯ ಪದವಿಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಇದೇ ಜೂನ್ 3ರಂದು ನಡೆದಿತ್ತು, ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಆರು ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಜೂನ್ 6 ರ ಗುರುವಾರ ಅಂದರೆ ಇಂದು ಪ್ರಕಟವಾಗುತ್ತದೆ, ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ಮಕ್ಕಳ ತಜ್ಞ ಡಾ ಧನಂಜಯ ಸರ್ಜಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್, ಇನ್ನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಎಸ್ಪಿ ದಿನೇಶ್, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ರಘುಪತಿ ಭಟ್ ಕಣಕ್ಕಿಳಿದ್ದು ಚುನಾವಣಾ ಕಣವನ್ನ ರಂಗೆರಿಸಿದ್ದರು, ಎರಡು ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟಿದ್ದು, ಮೇಲ್ಮನೆ ವಿಧಾನ ಪರಿಷತ್ ನ ಚಿಂತಕರ ಚಾವಡಿಗೆ ಸೇರೋದ್ ಯಾರು ಎಂಬುದು ಇಂದು ನಿರ್ಧಾರವಾಗುತ್ತದೆ ಇನ್ನು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾದ ಎಸ್ ಎಲ್ ಬೋಜೆಗೌಡ ಎನ್ ಡಿ ಎ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ, ಕೆಕೆ ಮಂಜುನಾಥ್...
ಗೋಪಾಳದ ವಿದ್ಯಾನಿಕೇತನ ಶಾಲೆಯಲ್ಲಿ ಪರಿಸರ ದಿನಾಚರಣೆ.
ಶಿವಮೊಗ್ಗ : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಗೋಪಾಳ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು ಮುಖಾ ಮುಖಿ ಎಸ್ ಟಿ ರಂಗ ತಂಡ ರಿ) ಶಿವಮೊಗ್ಗ. ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ,ನೆಹರು ಯುವ ಕೇಂದ್ರ,. ವಿದ್ಯಾನಿಕೇತನ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಗೋಪಾಳ ಶಿವಮೊಗ್ಗ. ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಬುಧವಾರ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಸಸಿಗಳನ್ನು ನೀಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು ಈ ವೇಳೆ ಮಾತನಾಡಿದ ನೆಹರು ಯುವ ಕೇಂದ್ರದ ಯುವ ಅಧಿಕಾರಿ ಉಲ್ಲಾಸ್ ಕೆ ಟಿ ಮಕ್ಕಳಿಗೆ ಪರಿಸರದ ಬಗ್ಗೆ ,ಗಿಡಗಳನ್ನು ಏಕೆ ನೆಡಬೇಕು ಅದರಿಂದಾಗುವ ಪ್ರಯೋಜನಗಳು, ಗಿಡ,ಮರಗಳು ನಮಗೆ ನೀಡಿರುವ ಕೊಡುಗೆಗಳು ಹಾಗೂ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಸವಿವರವಾಗಿ ತಿಳಿಸಿದರು ಈ ವೇಳೆ ನೆಹರು ಯುವ ಕೇಂದ್ರದ ಸಂಯೋಜನಾಧಿಕಾರಿ ಉಲ್ಲಾಸ್ ಕೆ...
ದ್ವಿತೀಯ ಪಿಯುಸಿ ಪಾಸಾದವರಿಗೆ ಸುವರ್ಣವಕಾಶ ! ಭಾರತೀಯ ವಾಯುಪಡೆಯಲ್ಲಿ ಉದ್ಯೋಗ ! ಅರ್ಜಿ ಆಹ್ವಾನ !
JOB NEWS : ಭಾರತೀಯ ವಾಯುಪಡೆ ಯಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವ ಕನಸು ಬಹುತೇಕರಲ್ಲಿರುತ್ತದೆ. ಇದೀಗ ಅಂತಹ ಕನಸು ನನಸಾಗುವ ಸಮಯ ಬಂದಿದೆ. 304 ಹುದ್ದೆಗಳನ್ನು ಭರ್ತಿ ಮಾಡಲು ಇಂಡಿಯನ್ ಏರ್ ಫೋರ್ಸ್ ಅರ್ಜಿ ಆಹ್ವಾನಿಸಿದೆ. ದ್ವಿತೀಯ ಪಿಯುಸಿ ಹಾಗೂ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜೂನ್ 28 ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ ಫ್ಲೈಯಿಂಗ್: 29, ಗ್ರೌಂಡ್ ಡ್ಯೂಟಿ (ಟೆಕ್ನಿಕಲ್): 156, ಗ್ರೌಂಡ್ ಡ್ಯೂಟಿ (ನಾನ್ ಟೆಕ್ನಿಕಲ್): 119 ಮತ್ತು ಫ್ಲೈಯಿಂಗ್: ಎನ್‌ಸಿಸಿ ಸ್ಪೆಷಲ್ ಎಂಟ್ರಿ ಸ್ಕೀಮ್ ಅಡಿಯಲ್ಲಿ ಶೇ. 10ರಷ್ಟು ಹುದ್ದೆಗಳಿವೆ. ಫ್ಲೈಯಿಂಗ್ ಬ್ರ್ಯಾಂಚ್ ಹುದ್ದೆಗಳಿಗೆ: ಭೌತಶಾಸ್ತ್ರ, ಗಣಿತ ವಿಷಯಗಳೊಂದಿಗೆ 12ನೇ ಕ್ಲಾಸ್ ತೇರ್ಡೆಯಾಗಿರಬೇಕು. ಗ್ರೌಂಡ್ ಡ್ಯೂಟಿ (ನಾನ್ ಟೆಕ್ನಿಕಲ್) ಹುದ್ದೆಗಳಿಗೆ: ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಗ್ರೌಂಡ್ ಡ್ಯೂಟಿ (ಟೆಕ್ನಿಕಲ್) ಬ್ರ್ಯಾಂಚ್ ಹುದ್ದೆಗಳಿಗೆ: ಭೌತಶಾಸ್ತ್ರ, ಗಣಿತ ವಿಷಯಗಳೊಂದಿಗೆ 12ನೇ ಕ್ಲಾಸ್ ಓದಿ, ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು....
BREAKING NEWS: ಶಾಸಕ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ !
STATE NEWS : ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ನಿನ್ನೆ ರಾತ್ರಿ ಕಿಡಿಗೇಡಿಗಳು ಚಿಕ್ಕಬಳ್ಳಾಪುರ ನಗರದ ಕಂದ ವಾರದಲ್ಲಿರುವ ಪ್ರದೀಪ್ ಈಶ್ವರ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮನೆಯ ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಗೆ ಜಯ ಹಿನ್ನೆಲೆ ಕಲ್ಲು ತೂರಾಟ ನಡೆಸಿದ ಶಂಕೆ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ನಗರ ಠಾಣೆ ಪೋಲೀಸರು ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ಉಪಾಧೀಕ್ಷಕ ಎಸ್. ಶಿವಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಎಂ.ಮಂಜುನಾಥ ಹಾಗೂ ಸಿಬ್ಬಂದಿ ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಸಿಸಿಟಿವಿ ಪರಿಶೀಲನೆ ನಡೆಸಲಾಗಿದ್ದು ಮನೆಯಲ್ಲಿದ್ದ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ ಇನ್ನು ಘಟನೆ ಸಂಬಂಧ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರ ತಮ್ಮ ಚೇತನ್, ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಗೆದ್ದ...
ಲೋಕಸಭಾ ಫಲಿತಾಂಶದ ಬಳಿಕ ಗೀತಾ ಶಿವರಾಜ್ ಕುಮಾರ್ ಫಸ್ಟ್ ರಿಯಾಕ್ಷನ್ ! ಏನಂದ್ರು ಗೀತಕ್ಕ ?
ಬೆಂಗಳೂರು : ದೊಡ್ಮನೆ ಸೊಸೆ, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸೋಲು ಕಂಡಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗೀತಾ, ಪ್ರತಿ ಸ್ಪರ್ಧಿ ಬಿ.ವೈ ರಾಘವೇಂದ್ರ ಎದುರು ಸೋಲು ಒಪ್ಪಿಕೊಂಡಿದ್ದಾರೆ. ಈ ಬಾರಿ ಗೀತಾ ಗೆಲುವಿಗಾಗಿ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಯರು ಪ್ರಚಾರ ಮಾಡಿದ್ದರು.ಆದರೆ, ಯಾವ ಪ್ರಚಾರವೂ ಅವರನ್ನು ಕೈ ಹಿಡಿಯಲಿಲ್ಲ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಅವರ ಗೆಲುವಾಗಿದೆ. ಗೀತಾ ಶಿವರಾಜ್ ಕುಮಾರ್ ಅವರ ಪರವಾಗಿ ನಟ ಶಿವರಾಜ್ಕುಮಾರ್ ಅವರು ನಿರಂತರವಾಗಿ ಪ್ರಚಾರ ಮಾಡಿದ್ದರು. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೀತಾ ಶಿವರಾಜ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ‘ಫಲಿತಾಂಶಗಳು ನಮ್ಮ ಕಡೆಯಾಗದಿದ್ದರೂ, ನಿಮ್ಮೊಂದಿಗಿನ ಈ ಪ್ರಯಾಣ ಮತ್ತು ನಮ್ಮ ಜನರ ಅಚಲವಾದ ಬೆಂಬಲಕ್ಕಾಗಿ ನಾವು ಸದಾ ಕೃತಜ್ಞರಾಗಿರುತ್ತೇವೆ. ಮತದಾರನ ನಿರ್ಣಯಕ್ಕೆ ತಲೆ ಬಾಗುತ್ತ, ನಾವು...









